‘ಕೂಲಿ’ ಸಿನಿಮಾ ರಿಲೀಸ್‌ಗೆ ಸಾಕಷ್ಟು ದಿನ ಮೊದಲೇ ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್‌ನಿಂದ 240 ಕೋಟಿಗೂ ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸನ್ ಪಿಕ್ಚರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಆ.14ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.
‘ಕೂಲಿ’ ಚಿತ್ರದಲ್ಲಿ ನಟಿಸಲು ರಜನಿಕಾಂತ್ 150 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. 350 ಕೋಟಿ ರು. ಬಜೆಟ್‌ನಲ್ಲಿ ಹೊರಬರುತ್ತಿರುವ ಈ ಸಿನಿಮಾವನ್ನು ಲೋಕೇಶ್ ಕನಗರಾಜು ನಿರ್ದೇಶಿಸಿದ್ದಾರೆ. ಅವರು ಈ ಸಿನಿಮಾಗಾಗಿ 50 ಕೋಟಿ ರು. ಪಡೆದಿದ್ದಾರಂತೆ.
25
ಆದರೆ ಸಿನಿಮಾ ರಿಲೀಸ್‌ಗೆ ಸಾಕಷ್ಟು ದಿನ ಮೊದಲೇ ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್‌ನಿಂದ 240 ಕೋಟಿಗೂ ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸನ್ ಪಿಕ್ಚರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಆ.14ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಸಿನಿಮಾದ ಕತೆಯ ಬಗ್ಗೆ ಮಾತಾಡದೇ, ಅವರಿವರ ಸಂಭಾವನೆ ಬಗ್ಗೆ ಹೇಳುವುದು ಇತ್ತೀಚಿನ ಟ್ರೆಂಡ್!
35
ಈ ಸಿನಿಮಾದಲ್ಲಿ ತಲೈವಾ ಜೊತೆ ನಾಗಾರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ರೆಬಾ, ಪೂಜಾ ಹೆಗ್ಡೆ, ಆಮೀರ್ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಆ.14ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.
45
ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ರಜನಿಕಾಂತ್ ನಾಯಕನ ಪಾತ್ರಗಳಿಂದ ಹೊರಗುಳಿದು ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ದೇವನ ಪಾತ್ರವು ಚಿತ್ರದ ಪ್ರಮುಖ ಹೈಲೈಟ್ ಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
55
'ಕೂಲಿ' ಒಂದು ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಆಗಿದ್ದು, ಚಿನ್ನದ ಕಳ್ಳಸಾಗಣೆ ಹಿನ್ನೆಲೆಯಲ್ಲಿ ನಡೆಯುತ್ತದೆ ಮತ್ತು ಎಲ್ಲಾ ನಾಯಕರಿಂದ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಲಿಯೋ ಚಿತ್ರದ ಮಿಶ್ರ ಪ್ರತಿಕ್ರಿಯೆಯ ನಂತರ ಲೋಕೇಶ್ ಕನಕರಾಜ್ 'ಕೂಲಿ' ಚಿತ್ರದೊಂದಿಗೆ ಮರುಪಡೆಯುವ ಗುರಿ ಹೊಂದಿದ್ದಾರೆ.