ಅಟ್ಲಿ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲು ಅಲ್ಲು ಅರ್ಜುನ್, ಇದರ ಬಜೆಟ್ ಎಷ್ಟು?

Published : Mar 02, 2025, 08:25 PM ISTUpdated : Mar 02, 2025, 08:28 PM IST

ನಿರ್ದೇಶಕ ಅಟ್ಲಿ ಮುಂದಿನ ಬಿಗ್ ಬಜೆಟ್ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಹೊಸ ವಿಚಾರ ಏನಪ್ಪ ಅಂದ್ರೆ, ಸಲ್ಮಾನ್ ಬದಲು ಅಲ್ಲು ಅರ್ಜುನ್ ಫೈನಲ್ ಆಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದರ ಬಜೆಟ್ ಎಷ್ಟು ಗೊತ್ತಾ? 

PREV
15
ಅಟ್ಲಿ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲು ಅಲ್ಲು ಅರ್ಜುನ್, ಇದರ ಬಜೆಟ್ ಎಷ್ಟು?

ನಿರ್ದೇಶಕ ಅಟ್ಲಿ ಕುಮಾರ್ ನಿರ್ದೇಶಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಕೊನೆಯದಾಗಿ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ನಿರ್ದೇಶಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಶಾರುಖ್ ಖಾನ್‌ಗೂ ಈ ಚಿತ್ರ ಬ್ರೇಕ್ ನೀಡಿತ್ತು. ಇದೀಗ ಅಟ್ಲಿ ಮತ್ತೊಂದು ಬಿಗ್ ಬಜೆಟ್ ಚಿತ್ರ ನಿರ್ದೇಶದ ತಯಾರಿಗಳು ಆರಂಭಗೊಂಡಿದೆ. ಶಾರುಖ್ ಖಾನ್ ಬಳಿಕ ಅಟ್ಲಿ ಮುಂದಿನ ಚಿತ್ರ ಸಲ್ಮಾನ್ ಖಾನ್ ಜೊತೆಗೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಸಲ್ಮಾನ್ ಖಾನ್ ಬದಲು ಅಲ್ಲು ಅರ್ಜುನ್ ಈ ಚಿತ್ರಕ್ಕೆ ಫೈನಲ್ ಆಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

25

ಅಲ್ಲು ಅರ್ಜುನ್ ಇದೀಗ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸಿದ್ದಾರೆ. ಪುಷ್ಪಾ 2 ಚಿತ್ರದ ಮೂಲಕ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಲ್ಮಾನ್ ಖಾನ್ ಚಿತ್ರಕ್ಕಿಂತ ಅಲ್ಲು ಅರ್ಜುನ್ ಚಿತ್ರಕ್ಕೆ ಅಭಿಮಾನಿಗಳ ಕಾಯುವಿಕೆ ಹೆಚ್ಚಿದೆ. ಇಷ್ಟೇ ಅಲ್ಲ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್ ಕ್ರೇಜ್ ಹೆಚ್ಚಿದೆ. ಹೀಗಾಗಿ ಅಟ್ಲಿ ಮುಂದಿನ ಚಿತ್ರಕ್ಕೆ ಅಲ್ಲು ಅರ್ಜುನ್ ಆಯ್ಕೆ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ. 

35

ಸನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿಶೇಷ ಅಂದರೆ ಈ ಚಿತ್ರದ ಬಜೆಟ್ ಮೊದಲು 600 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ಆದರೆ ಅಲ್ಲು ಅರ್ಜುನ್ ಆಯ್ಕೆಯಿಂದ ಬಜೆಟ್ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಿದೆ. ವರದಿ. ಕಾರಣ ಅಲ್ಲು ಅರ್ಜನ್ ಪುಷ್ಪಾ 2 ಚಿತ್ರಕ್ಕಾಗಿ 300 ಕೋಟಿ ರೂಪಾಯಿ ಸಂಭಾವನೆ ಪಡೆದ್ದಾರೆ.

45

ಈಗಾಗಲೆ 300 ಕೋಟಿ ರೂಪಾಯಿ ಸಂಭಾವನೆ ಪಡೆದಿರುವ ಅಲ್ಲು ಅರ್ಜುನ್ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಅಟ್ಲಿ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಭಾವನೆ 300 ಕೋಟಿ ರೂಪಾಯಿಗಿಂತ ಹೆಚ್ಚಾಗಲಿದೆ ಎಂದು ವರದಿಗಳು ಹೇಳುತ್ತಿದೆ. ಹೀಗಾದರೆ ಇನ್ನುಳಿದ 300 ಕೋಟಿ ಅಥವಾ ಅದಕ್ಕಿಂತ ಕಡಿಮೆ ಹಣದಲ್ಲಿ ಬಿಗ್ ಬಜೆಟ್ ಚಿತ್ರ ನಿರ್ಮಾಣ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಅಟ್ಲಿ.

55

ಕಾರಣ ಈ ಚಿತ್ರ ನಿರ್ದೇಶನಕ್ಕೆ ಅಟ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ. ಹೀಗಾಗಿ ಇಬ್ಬರ ಸಂಭಾವನೆಗೆ ಸರಿಸುಮಾರು 400 ಕೋಟಿ ರೂಪಾಯಿ ಖರ್ಚಾದರೆ ಇನ್ನುಳಿದ 200 ಕೋಟಿ ರೂಪಾಯಿಯಲ್ಲಿ ಇತರರ ಸಂಭಾವನೆ, ಚಿತ್ರ ನಿರ್ಮಾಣ ಅಸಾಧ್ಯ ಎನ್ನುತ್ತಿದೆ. ಹೀಗಾಗಿ ಈ ಬಜೆಟ್ 800 ಕೋಟಿ ರೂಪಾಯಿ ಮೀರಲಿದೆ ಎನ್ನುತ್ತಿದೆ.

Read more Photos on
click me!

Recommended Stories