ಒಂದು ಸಂದರ್ಶನದಲ್ಲಿ ನಿಮಗೆ ಅಭಿಮಾನಿಗಳು ಜಾಸ್ತಿ ಇದ್ದಾರೆ, ಸಂದೇಶ ಇರುವ ಸಿನಿಮಾ ಮಾಡೋ ಯೋಚನೆ ಇದೆಯಾ ಅಂತ ನಿರೂಪಕರು ಕೇಳಿದ್ದಕ್ಕೆ, ಬನ್ನಿ ಉತ್ತರಿಸುತ್ತಾ, ಅಭಿಮಾನಿಗಳು ಜಾಸ್ತಿ ಇದ್ದಾರೆ ಅಂತ ಸಂದೇಶ ಇರುವ ಸಿನಿಮಾ ಮಾಡೋ ಯೋಚನೆ ಎಂದೂ ಇರಲಿಲ್ಲ ಅಂತ ಹೇಳಿದ್ದರು. ಅರ್ಜುನ್ ರೆಡ್ಡಿ ತರಹದ ಬೋಲ್ಡ್ ಸಿನಿಮಾಗಳು ನನಗೆ ಸೂಟ್ ಆಗಲ್ಲ ಅಂತಲೂ ಅಲ್ಲು ಅರ್ಜುನ್ ಹೇಳಿದ್ದರು. ನೆಗೆಟಿವ್ ಶೇಡ್ಸ್ ಇರುವ ಪಾತ್ರಗಳಲ್ಲಿ ನಟಿಸ್ತೀನಿ, ಆದ್ರೆ ಅಂಥ ಸಿನಿಮಾಗಳು ದೊಡ್ಡ ಬಜೆಟ್ ನಲ್ಲಿರಬೇಕು ಅಂತ ಹೇಳಿದ್ದರು.