ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಹೀರೋ ರಿಜೆಕ್ಟ್ ಮಾಡಿದ ಕಥೆ ಇನ್ನೊಬ್ಬ ಹೀರೋ ಹತ್ರ ಹೋಗೋದು ಸಾಮಾನ್ಯ. ಬೇರೆ ಹೀರೋಗಳಿಗೆ ಆಗಬೇಕಿದ್ದ ಕಥೆಯನ್ನ ಬೇರೆ ಹೀರೋಗಳಿಂದ ಮಾಡಿಸಿ ಸೂಪರ್ ಹಿಟ್ ಕೊಟ್ಟಿರೋ ಉದಾಹರಣೆಗಳು ತುಂಬಾನೇ ಇವೆ. ಕಥೆಗಳು ಮಾತ್ರ ಅಲ್ಲ, ಹಾಡುಗಳು ಕೂಡ ಎಕ್ಸ್‌ಚೇಂಜ್ ಆಗ್ತಿರ್ತಾವೆ. ಲಿರಿಕ್ಸ್ ಸರಿಯಿಲ್ಲ ಅಂದ್ರೆ, ಸನ್ನಿವೇಶಕ್ಕೆ ಹೊಂದಿಕೊಳ್ಳಲಿಲ್ಲ ಅಂದ್ರೆ, ಡೈರೆಕ್ಟರ್, ಮ್ಯೂಸಿಕ್ ಡೈರೆಕ್ಟರ್ ಪಕ್ಕಕ್ಕೆ ಇಡ್ತಾರೆ. ಬೇರೆ ಸಿನಿಮಾಗಳಲ್ಲಿ ಅವುಗಳನ್ನ ಉಪಯೋಗಿಸ್ತಾರೆ.