300 ಕೋಟಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಮೀನಾಕ್ಷಿ ಚೌಧರಿ ಹೆಸರು ಬದಲಿಸಿಕೊಂಡಿದ್ದೇಕೆ: ನ್ಯೂಮರಾಲಜಿ ಕಾರಣಾನಾ?

Published : Jun 25, 2025, 09:23 PM ISTUpdated : Jun 25, 2025, 09:24 PM IST

ಸೂಪರ್ ಹಿಟ್ ನಟಿ ಮೀನಾಕ್ಷಿ ಚೌಧರಿ ಈಗ ನ್ಯೂಮರಾಲಜಿ ಫಾಲೋ ಮಾಡ್ತಿದ್ದಾರೆ. ಹೆಸರಿನಲ್ಲಿ ಒಂದು 'a' ಜಾಸ್ತಿ ಮಾಡಿ 'ಮೀನಾಕ್ಷಿ' ಆಗಿದ್ದಾರೆ. ಇದು ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಂತಾ ಕಾದು ನೋಡಬೇಕು.

PREV
15

ಮೀನಾಕ್ಷಿ ಚೌಧರಿ ಈಗ ಸೂಪರ್ ಹಿಟ್ ನಟಿ. ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿ. ಕೆರಿಯರ್ ಚೆನ್ನಾಗಿಲ್ಲ ಅಂದ್ರೆ ಸೆಲೆಬ್ರಿಟಿಗಳು ಜ್ಯೋತಿಷ್ಯ, ನ್ಯೂಮರಾಲಜಿ ಫಾಲೋ ಮಾಡ್ತಾರೆ. ಹೆಸರು ಬದಲಿಸಿದ್ರೆ ಲಕ್ ಬರುತ್ತೆ ಅಂತಾ ನಂಬ್ತಾರೆ.

25

ಮೀನಾಕ್ಷಿ ಚೌಧರಿಗೆ ಹಿಟ್ ಸಿನಿಮಾಗಳೇನೂ ಕಮ್ಮಿ ಇಲ್ಲ. ಆದ್ರೂ ನ್ಯೂಮರಾಲಜಿ ಫಾಲೋ ಮಾಡ್ತಿದ್ದಾರೆ. ಹೆಸರಿಗೆ ಒಂದು 'a' ಜಾಸ್ತಿ ಮಾಡಿ ‘Meenaakshi Chaudhary’ ಅಂತ ಇನ್ಸ್ಟಾಗ್ರಾಮ್ ನಲ್ಲಿ ಬದಲಾಯಿಸಿದ್ದಾರೆ.

35

ಹೆಸರು ಬದಲಿಸಿದ್ರೆ ಕೆರಿಯರ್ ಚೆನ್ನಾಗಿರುತ್ತೆ, ಹೊಸ ಅವಕಾಶಗಳು ಬರುತ್ತೆ, ಪಾಸಿಟಿವ್ ಎನರ್ಜಿ ಜಾಸ್ತಿ ಆಗುತ್ತೆ ಅಂತಾ ಮೀನಾಕ್ಷಿ ನಂಬ್ತಿದ್ದಾರೆ. ಈಗಾಗಲೇ ದುಲ್ಕರ್ ಸಲ್ಮಾನ್, ವಿಜಯ್ ಜೊತೆ ಸಿನಿಮಾ ಮಾಡಿದ್ದಾರೆ. ದೊಡ್ಡ ನಿರ್ದೇಶಕರ ಫೇವರಿಟ್ ಆಗ್ತಿದ್ದಾರಂತೆ.

45

ಸಂಕ್ರಾಂತಿಗೆ ಬಂದ 'ಸಂಕ್ರಾಂತಿಗೆ ವಸ್ತುನ್ನಾಂ' ಸಿನಿಮಾ 300 ಕೋಟಿ ಗಳಿಸಿದೆ. ಮೀನಾಕ್ಷಿ ಈಗ ನಾಗ ಚೈತನ್ಯ, ನವೀನ್ ಪೊಲಿಶೆಟ್ಟಿ ಜೊತೆ ಸಿನಿಮಾ ಮಾಡ್ತಿದ್ದಾರೆ. ಸದ್ಉ ಇವರು ಟಾಲಿವುಡ್‌ನಲ್ಲಿ ಬೇಡಿಕೆಯ ನಟಿ.

55

ನ್ಯೂಮರಾಲಜಿಗಾಗಿ ಹೆಸರು ಬದಲಿಸಿಕೊಂಡ ಸೆಲೆಬ್ರಿಟಿಗಳ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹೃತಿಕ್ ರೋಷನ್, ರಾಣಿ ಮುಖರ್ಜಿ, ಆಯುಷ್ಮಾನ್ ಖುರಾನಾ ಹೆಸರು ಬದಲಿಸಿಕೊಂಡವರಲ್ಲಿ ಕೆಲವರು. ಸಾಯಿ ಧರಮ್ ತೇಜ್ ಕೂಡ ಹೆಸರು ಬದಲಿಸಿಕೊಂಡಿದ್ದಾರೆ.

Read more Photos on
click me!

Recommended Stories