Actor Venkatesh: ಸಾವಿರ ರೂಪಾಯಿ ಕೊಟ್ಟರೆ ಮಾತ್ರ ನಟನೆ ಮಾಡ್ತೀನಿ, ತಂದೆಗೆ ಕಂಡಿಷನ್ ಹಾಕಿದ್ದ ನಟ ವೆಂಕಟೇಶ್‌!

Published : Sep 30, 2026, 12:28 PM IST

ನಟ ವೆಂಕಟೇಶ್ ಅವರ 'ಆದರ್ಶ ಕುಟುಂಬಂ ಇಂಟಿ ನಂಬರ್ 47' ಸಿನಿಮಾ ಅಕ್ಟೋಬರ್ 9ರಂದು ಬಿಡುಗಡೆಯಾಗಲಿದೆ. 'ಪ್ರೇಮ ನಗರಂ' ಚಿತ್ರದಲ್ಲಿ ಬಾಲನಟನಾಗಿ 1000 ರೂ. ಸಂಭಾವನೆ ಪಡೆದು ಚಿತ್ರರಂಗ ಪ್ರವೇಶಿಸಿದ ಇವರು, ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.

PREV
15
ಆದರ್ಶ ಕುಟುಂಬ ಸಿನಿಮಾ ಬಿಡುಗಡೆಗೆ ಸಿದ್ಧ

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳೊಂದಿಗೆ ನಟ ವಿಕ್ಟರಿ ವೆಂಕಟೇಶ್ ಮುನ್ನುಗುತ್ತಿದ್ದಾರೆ. 'ಸಂಕ್ರಾಂತಿಗೆ ವಸ್ತುನಾಂ' ಸಿನಿಮಾದಿಂದ ಫಾರ್ಮ್‌ಗೆ ಬಂದಿದ್ದ ವೆಂಕಟೇಶ್, 'ಮನ ಶಂಕರವರ ಪ್ರಸಾದ್' ಮೂವಿಯಲ್ಲಿ ಮಾಡಿದ್ದರು. ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಆದರ್ಶ ಕುಟುಂಬಂ ಇಂಟಿ ನಂಬರ್ 47' ಎಕೆ 47 ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಅಕ್ಟೋಬರ್ 09ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದರೊಂದಿಗೆ ಸಿನಿಮಾ ಪ್ರಚಾರದಲ್ಲಿ ವೆಂಕಟೇಶ್ ಹಾಗೂ ಸಿನಿಮಾ ತಂಡ ಬ್ಯುಸಿಯಾಗಿದೆ.

25
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ನಿರ್ಮಾಪಕ

ವೆಂಕಟೇಶ್ ಅವರ ತಂದೆ ರಾಮಾನಾಯುಡು ಟಾಲಿವುಡ್‌ನಲ್ಲಿ ಅತೀ ದೊಡ್ಡ ನಿರ್ಮಾಪಕರು. ಸುರೇಶ್ ಪ್ರೋಡಕ್ಷನ್ ಅಡಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಿರ್ಮಿಸಿದ್ದಾರೆ. 1971ರಲ್ಲಿ ರಾಮಾನಾಯುಡು ಅವರು ನಟ ಅಕ್ಕಿನೇನಿ ನಾಗೇಶ್ವರಾವ್ ಅವರೊಂದಿಗೆ 'ಪ್ರೇಮ ನಗರಂ' ಸಿನಿಮಾ ಮಾಡಿದ್ದರು. ಈ ಸಿನಿಮಾ ಬಿಗ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಒಂದು ಚೈಲ್ಡ್ ಆರ್ಟಿಸ್ಟ್ ಪಾತ್ರ ಇತ್ತು.

35
ಪ್ರೇಮ ನಗರಂ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ವೆಂಕಟೇಶ್ ಎಂಟ್ರಿ

ಪ್ರೇಮ ನಗರಂ ಸಿನಿಮಾದಲ್ಲಿ ಎಎನ್‌ಆರ್ ಅವರೊಂದಿಗೆ ಕೈಕಾಲ ಸತ್ಯನಾರಾಯಣ ಅವರು ಕೂಡ ನಟಿಸಿದ್ದರು. ಕೈಕಾಲ ಸತ್ಯನಾರಾಯಣ ಅವರ ನಟಿಸಿದ್ದ ಕೇಶವ ಪಾತ್ರದ ಬಾಲ್ಯದ ಭಾಗದಲ್ಲಿ ವೆಂಕಟೇಶ್ ಚೈಲ್ಟ್ ಆರ್ಟಿಸ್ಟ್ ಆಗಿ ನಟಿಸಿದ್ದರು. ಇದು ವೆಂಕಟೇಶ್ ಅವರ ಮೊದಲ ಸಿನಿಮಾ. ಸಿನಿಮಾ ಶೂಟಿಂಗ್ ಸಮಯದಲ್ಲಿ ಬಾಲಕನ ಅಗತ್ಯವಿದ್ದಾಗ, ಬೇರೆ ಯಾರನ್ನೋ ಆಯ್ಕೆ ಮಾಡುವುದು ಏಕೆ? ಈ ಪಾತ್ರ ವೆಂಕಟೇಶ್ ಅವರನ್ನೇ ಆಯ್ಕೆ ಮಾಡೋಣಾ ಅಂತ ನಿರ್ದೇಶಕರು ಹೇಳಿದ್ದರಂತೆ. ಇದಕ್ಕೆ ರಾಮನಾಯುಡು ಕೂಡ ಓಕೆ ಎಂದಿದ್ದರಂತೆ.

45
ನಟಿಸಲು ಸಾವಿರ ರೂಪಾಯಿ ಸಂಭಾವನೆಗೆ ಬೇಡಿಕೆ

ಇದರೊಂದಿಗೆ ಅವರ ಮ್ಯಾನೇಜರ್ ನಿಮ್ಮ ಅಪ್ಪ ಕರೆಯುತ್ತಿದ್ದಾರೆ ಅಂತ ಶಾಲೆಯಿಂದ ವೆಂಕಟೇಶ್ ಅವರನ್ನು ಕರೆದುಕೊಂಡು ಹೋಗಿದ್ದರಂತೆ. ಆದರೆ ಸಿನಿಮಾದಲ್ಲಿ ನಟಿಸಲು ಆಗ ವೆಂಕಟೇಶ್ ನೋ ಎಂದಿದ್ದರಂತೆ. ಸಿನಿಮಾದಲ್ಲಿ ನಟಿಸಲು ಸಾವಿರ ರೂಪಾಯಿ ಕೊಟ್ಟರೆ ಕೊಡಬೇಕು ಎಂದು ಷರತ್ತು ಹಾಕಿದ್ದರಂತೆ. ಶಾಲೆ ಇಲ್ಲ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ ನೋಡಲು ತೆರಳುತ್ತಿದ್ದ ವೆಂಕಟೇಶ್, ಜ್ಯೂನಿಯರ್ ನಟರಿಗೆ ಹಣ ಕೊಡುವುದನ್ನು ನೋಡಿದ್ದರಂತೆ. ಇದರಂತೆ ತಮಗೆ ನಟಿಸಲು ಅವಕಾಶ ಸಿಕ್ಕಾಗ ಹಣ ತೆಗೆದುಕೊಂಡು ಆ ಬಳಿಕವೇ ನಟಿಸಲು ಒಕೆ ಎಂದಿದ್ದರಂತೆ.

55
ಸಾವಿರದಿಂದ ಕೋಟಿ ಕೋಟಿ ಸಂಭಾವನೆ ವರೆಗೂ ವೆಂಕಟೇಶ್

ವೆಂಕಟೇಶ್, ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಆದರ್ಶ ಕುಟುಂಬ' ಸಿನಿಮಾ, ಪ್ಯಾಮಿಲಿ ಅಡಿಯನ್ಸ್‌ಗಾಗಿಯೇ ಮಾಡಿದ ಸಿನಿಮಾ ಆಗಿದ್ದು, ತನ್ನ ಕುಟುಂಬಕ್ಕೆ ಕಷ್ಟ ಎದುರಾದರೆ, ಹೀರೋ ತನ್ನ ಸಾಮರ್ಥ್ಯಕ್ಕೂ ಮೀರಿ ಹೇಗೆ ತನ್ನವರನ್ನು ರಕ್ಷಣೆ ಮಾಡುತ್ತಾರೆ ಅನ್ನೋದು ಸಿನಿಮಾದ ಕಥೆಯಾಗಿದೆ. ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದು, ಈ ಸಿನಿಮಾಗೆ ವೆಂಕಟೇಶ್ 30-40 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಒಂದು ಸಾವಿರ ರೂಪಾಯಿಯೊಂದಿಗೆ ಶುರುವಾದ ಅವರ ಕೆರಿಯರ್, ಈಗ ಒಂದು ಸಿನಿಮಾಗೆ ಸುಮಾರು ನಾಲವತ್ತು ಕೋಟಿ ರೂಪಾಯಿ ವರೆಗೂ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories