ನಟ ವಿಜಯ್ ಹೊಸ ಕಾರಿನಲ್ಲಿದೆ ವಿಮಾನದ ರೀತಿ ಸವಲತ್ತು, ಖರೀದಿಗಿದೆ ವಿಶೇಷ ಕಾರಣ!

First Published Nov 1, 2024, 12:43 PM IST

ತಮಿಳು ನಟ ವಿಜಯ್ ಇತ್ತೀಚೆಗೆ ಭರ್ಜರಿಯಾಗಿ ತಮ್ಮ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಹೊಸ ಪಕ್ಷದ ಮೂಲಕ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಇದರ ಜೊತೆಗೆ ವಿಜಯ್ ದುಬಾರಿ ಹಾಗೂ ಅತ್ಯಂತ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಕಾರು ಖರೀದಿಸಿದ್ದು ಯಾಕೆ? ಇದರ ಬೆಲೆ, ಐಷಾರಾಮಿ ಸವಲತ್ತು ಹೇಗಿದೆ?

ಕಾರ್ ರೇಸ್​ನಲ್ಲಿ ಅಜಿತ್​ಗೆ ಆಸಕ್ತಿ ಜಾಸ್ತಿ ಅಂದ್ರೆ, ವಿಜಯ್​ಗೆ ಹೊಸ ಕಾರ್​ ಖರೀದಿ ಮೇಲೆ ಹೆಚ್ಚಿನ ಒಲವು. ಹೊಸದಾಗಿ ಬಿಡುಗಡೆಯಾಗೋ ಕಾರ್​ಗಳನ್ನ ಖರೀದಿಸೋದ್ರಲ್ಲಿ ಆಸಕ್ತಿ ಹೊಂದಿರೋ ವಿಜಯ್​, ಸುಮಾರು 20ಕ್ಕೂ ಹೆಚ್ಚು ಕಾರ್​ಗಳನ್ನ ಹೊಂದಿದ್ದಾರೆ. ಇದ್ರಲ್ಲಿ 2 ಕೋಟಿಗೂ ಹೆಚ್ಚು ಬೆಲೆ ಬಾಳೋ 5 ಕಾರ್​ಗಳೂ ಇವೆ.

2012ರಲ್ಲಿ ಲಂಡನ್​ನಿಂದ ರೋಲ್ಸ್​ ರಾಯ್ಸ್​ ಗೋಸ್ಟ್​ ಕಾರನ್ನ ಆಮದು ಮಾಡಿಕೊಂಡಿದ್ರು ವಿಜಯ್​. ಈ ಕಾರ್​ಗೆ ಸರಿಯಾಗಿ ತೆರಿಗೆ ಕಟ್ಟಿಲ್ಲ ಅನ್ನೋ ಆರೋಪ ಕೇಳಿಬಂದು, ಕೋರ್ಟ್​ವರೆಗೂ ಹೋಗಿತ್ತು. ಬಳಿಕ ಆ ಕಾರನ್ನ ಮಾರಿ, ಲೆಕ್ಸಸ್ LM 350h ಕಾರನ್ನ ಖರೀದಿಸಿದ್ದಾರೆ. ಮಾರ್ಚ್​ನಲ್ಲಿ ಭಾರತದಲ್ಲಿ ಲಾಂಚ್​ ಆದ ಈ ಕಾರನ್ನ ಮೊದಲೇ ಬುಕ್​ ಮಾಡಿದ್ದ ವಿಜಯ್​, ಲಾಂಚ್​ ಆದ ಕೂಡಲೇ ಡೆಲಿವರಿ ಪಡೆದಿದ್ದಾರೆ. ಈ ಕಾರಿನಲ್ಲೇನಿದೆ ಅನ್ನೋದನ್ನ ನೋಡೋಣ.

Latest Videos


ಐಷಾರಾಮಿ ಕಾರ್​ಗಳಾದ ಆಡಿ, ಬಿಎಂಡಬ್ಲ್ಯೂ, ರೋಲ್ಸ್​ ರಾಯ್ಸ್​ಗೆ ಪೈಪೋಟಿ ನೀಡಲು ಲೆಕ್ಸಸ್​ ಕಂಪನಿ ತಯಾರಿಸಿರೋ ಈ ಕಾರ್​, ವಿಮಾನದಂತೆಯೇ ಇದೆ. ನಾಲ್ಕು ಮತ್ತು ಏಳು ಸೀಟುಗಳ ವೇರಿಯೆಂಟ್​ಗಳಲ್ಲಿ ಬಂದಿರೋ ಈ ಕಾರಿನ 4 ಸೀಟರ್​ ವೇರಿಯೆಂಟ್​ ಖರೀದಿಸಿದ್ದಾರೆ ನಟ ವಿಜಯ್​. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಈ ಕಾರನ್ನ ವಿನ್ಯಾಸಗೊಳಿಸಲಾಗಿದೆ. ಕಾರಿನ ಒಳಗೆ 48 ಇಂಚಿನ ಡಿಸ್​ಪ್ಲೇ ಟಿವಿ, 23 ಸ್ಪೀಕರ್​ಗಳ ಆಡಿಯೋ ಸಿಸ್ಟಮ್​ ಇದೆ.

ಡ್ರೈವರ್​ ಸೀಟ್​ ಮತ್ತು ಹಿಂದಿನ ಸೀಟ್​ ನಡುವೆ ತಡೆಗೋಡೆ ಇದೆ. ಫೋಲ್ಡ್​ಔಟ್​ ಟೇಬಲ್​ಗಳು, ವೈರ್​ಲೆಸ್​ ಚಾರ್ಜರ್​, ರೀಡಿಂಗ್​ ಲೈಟ್​, ಹಲವು ಕನ್ನಡಿಗಳು ಸೇರಿದಂತೆ ಸಕಲ ಸವಲತ್ತುಗಳಿವೆ. ಇನ್ನೂ ವಿಶೇಷ ಅಂದ್ರೆ, ಕಾರಿನ ಒಳಗೆ ನೀರು, ಕೋಲ್ಡ್​ ಡ್ರಿಂಕ್ಸ್​ ಇಡಲು ಫ್ರಿಡ್ಜ್​ ಕೂಡ ಇದೆ. ಫುಲ್​ ಸ್ಯಾಟಲೈಟ್​ ಎಸಿ, ವಾರ್ಮ್​ ವೆದರ್​ ಸಿಸ್ಟಮ್​ ಕೂಡ ಇದೆ.

ಲೆಕ್ಸಸ್ LM 350h

ಈ ಕಾರಿನ ಪ್ರಮುಖ ಅಂಶ ಅಂದ್ರೆ ಅದರ ಸೀಟುಗಳು. ಮೆತ್ತನೆಯ ಸೀಟುಗಳಲ್ಲಿ ಮಲಗಿಕೊಂಡೇ ಪ್ರಯಾಣಿಸಬಹುದು. ಸೀಟನ್ನ ಅಡ್ಜಸ್ಟ್​ ಮಾಡಿದ್ರೆ, ಬೆಡ್​ರೂಮ್​ ರೀತಿ ಆಗುತ್ತೆ. ಮಾಲ್​ನಲ್ಲಿರೋ ರೀತಿ ಮಸಾಜ್​ ಮಾಡಿಕೊಳ್ಳೋ ವ್ಯವಸ್ಥೆ ಕೂಡ ಇದೆ. ಐಷಾರಾಮಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಎಲ್ಲಾ ವ್ಯವಸ್ಥೆಗಳು ಈ ಕಾರಿನಲ್ಲಿದೆ. ಇನ್ನು ಆಕರ್ಷಕ ವಿನ್ಯಾಸ ಹೊಂದಿದೆ. 
 

ಹಿಂದಿನ ಸೀಟಿನ ಬಾಗಿಲುಗಳು ಸ್ಲೈಡಿಂಗ್​ ಮಾದರಿಯಲ್ಲಿವೆ. ರಿಮೋಟ್​ ಕೀ ಬಳಸಿ ಬಾಗಿಲು ತೆರೆಯಬಹುದು. ಪೆಟ್ರೋಲ್​ ಮತ್ತು ಎಲೆಕ್ಟ್ರಿಕ್​ನಲ್ಲಿ ಚಲಿಸುವ ಈ ಕಾರಿನ ಫ್ಯುಯೆಲ್​ ಟ್ಯಾಂಕ್​ 60 ಲೀಟರ್​ ಸಾಮರ್ಥ್ಯ ಹೊಂದಿದೆ. ಮೋಸ್ಟ್ ಪವರ್‌ಫುಲ್ ಹಾಗೂ ಕ್ರೂಸ್ ಕಂಟ್ರೋಲ್ ಫೀಚರ್ಸ್ ಹೊಂದಿದೆ. ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಏರ್‌ಬ್ಯಾಗ್, ಎಬಿಸಿ, ಇಬಿಡಿ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇದರಲ್ಲಿದೆ. 

360 ಡಿಗ್ರಿ ಕ್ಯಾಮೆರಾ ಸಿಸ್ಟಮ್​ ಕೂಡ ಇದೆ. ಬಿಎಂಡಬ್ಲ್ಯೂ, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರ್​ಗಳನ್ನ ಹೊಂದಿರೋ ವಿಜಯ್​,  ಹೆಚ್ಚಾಗಿ ಇನ್ನೋವಾ, ಮಾರುತಿ ಸುಜುಕಿ ಕಾರ್​ಗಳನ್ನ ಬಳಸುತ್ತಾರೆ. ಲೆಕ್ಸಸ್​ ಕಾರನ್ನ ಖರೀದಿಸಿದ್ದಕ್ಕೆ ರಾಜಕೀಯ ಪ್ರವೇಶದ ಕಾರಣಕ್ಕಾಗಿ ಈ ಲೆಕ್ಸಾಸ್ ಕಾರು ಖರೀದಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಜನರ ಸಂಪರ್ಕ, ಪ್ರವಾಸ, ಪಕ್ಷ ಕಟ್ಟಬೇಕಾದ ಜವಾಬ್ದಾರಿಯಿಂದ ಈ ಕಾರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

click me!