UPSCಗೆ ತಯಾರಿ ನಡೆಸುತ್ತೀರೆಂದಾದರೆ ನೀವು ಯಾವತ್ತೂ ಸೋಲಲ್ಲ
ತನ್ನ ಬಾಲ್ಯದಲ್ಲಿ ತಾನು ಹೆಚ್ಚು ಮೇಧಾವಿ ಹುಡುಗಿಯಾಗಿರಲಿಲ್ಲ ಎಂದು ಇಶಾ ಹೇಳಿದ್ದಾರೆ. 10, 12 ಮತ್ತು ಲಾ ಸ್ಕೂಲ್‌ನಲ್ಲಿ ಉತ್ತಮ ಫಲಿತಾಂಶ ಬಂದಿತ್ತು. ಆದರೆ ಯುಪಿಎಸ್‌ಸಿ ಅಧ್ಯಯನ ನಡೆಸಲು ಉತ್ತಮ ಅವಕಾಶವನ್ನು ನೀಡಿದೆ. ನೀವು ಯುಪಿಎಸ್ಸಿಯಲ್ಲಿ ಆಯ್ಕೆಯಾಗುತ್ತೀರೋ, ಇಲ್ಲವೋ ಆದರೆ ಇದು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ನೀವು ಅರ್ಥಶಾಸ್ತ್ರ, ರಾಜಕೀಯ, ಭೂಗೋಳ, ಸಾಮಾನ್ಯ ಅಧ್ಯಯನ ಮತ್ತು ಇತಿಹಾಸದಂತಹ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುತ್ತೀರಿ. ಇದು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಅದು ಯಾವಾಗಲೂ ಉಪಯುಕ್ತವಾಗಿದೆ. ಈ ಪರೀಕ್ಷೆಗೆ ಹಾಜರಾದ ನಂತರ ನೀವು ಎಂದಿಗೂ ಸೋಲಲು ಸಾಧ್ಯವಿಲ್ಲ. ನೀವು ಯುಪಿಎಸ್‌ಸಿಗೆ ಅಧ್ಯಯನ ಮಾಡಿದ್ದರೆ ಅದು ನಿಮ್ಮ ನಿತ್ಯದ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ. ನಿಮ್ಮನ್ನು ನೀವು ವೈಯಕ್ತಿಕವಾಗಿ ಅಭಿವೃದ್ಧಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕಷ್ಟೇ ಎಂದು ಹೇಳಿದ್ದಾರೆ.