ಹಲವು ಲಕ್ಷುರಿ ಕಾರು ಮಾಲೀಕ ಸಿಜೆ ರಾಯ್ ತುಕ್ಕು ಹಿಡಿದ ಮಾರುತಿ 800ಗೆ 10 ಲಕ್ಷ ರೂ ಕೊಟ್ಟಿದ್ದು ಯಾಕೆ?

Published : Jan 30, 2026, 07:54 PM IST

ಹಲವು ಲಕ್ಷುರಿ ಕಾರು ಮಾಲೀಕ ಸಿಜೆ ರಾಯ್ ತುಕ್ಕು ಹಿಡಿದ ಮಾರುತಿ 800ಗೆ 10 ಲಕ್ಷ ರೂ ಕೊಟ್ಟಿದ್ದು ಯಾಕೆ? ಈ ಮಾರುತಿ 800 ಕಾರಿನ ಹಿಂದೆ ಸ್ಮರಣೀಯ ಘಟನೆಗಳಿವೆ. ಜೊತೆಗೆ ಈ ಕಾರು ಸಿಜೆ ರಾಯ್‌ಗೆ ಅತ್ಯಂತ ವಿಶೇಷವಾಗಿತ್ತು.

PREV
15
ಲುಕ್ಷರಿ ಕಾರುಗಳ ಮೇಲೆ ಪ್ರೀತಿ

ದುರಂತ ಅಂತ್ಯಕಂಡ ಬೆಂಗಳೂರು ಉದ್ಯಮಿ ಸಿಜೆ ರಾಯ್ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿದ್ದರು. ಸಿಜೆ ರಾಯ್‌ಗೆ ಐಷಾರಾಮಿ ಕಾರುಗಳೆಂದರೆ ಪಂಚ ಪ್ರಾಣ. ಹೀಗಾಗಿ ತಮ್ಮ ಬಳಿಕ ಬುಹುತೇಕ ಎಲ್ಲಾ ಲಕ್ಷುರಿ ಬ್ರ್ಯಾಂಡ್ ಕಾರುಗಳಿತ್ತು. ರೋಲ್ಸ್ ರಾಯ್ಸ್, ಬುಗಾಟಿ, ಬೆಂಟ್ಲಿ, ಬೆಂಜ್ ಸೇರಿದಂತೆ ಎಲ್ಲಾ ದುಬಾರಿ ಕಾರುಗಳು ಸಿಜೆ ರಾಯ್ ಬಳಿ ಇದೆ. ಆದರೆ ಇತ್ತೀಚೆಗೆ ಸಿಜೆ ರಾಯ್ 10 ಲಕ್ಷ ರೂಪಾಯಿ ನೀಡಿ ತುಕ್ಕು ಹಿಡಿದ ಮಾರುತಿ 800 ಕಾರು ಖರೀದಿಸಿದ್ದರು.

25
ಸಿಜೆ ರಾಯ್ ಮೊದಲ ಕಾರು ಮಾರುತಿ 800

ಸಿಜೆ ರಾಯ್ ಉದ್ಯಮ ಅಧಿಪತಿಯಾಗುವ ಮೊದಲು ಕೆಂಪು ಬಣ್ಣದ ಮಾರುತಿ 800 ಕಾರಿತ್ತು. ಬಳಿಕ ಸಿಜೆ ರಾಯ್ ಉದ್ಯಮ ಸಾಮ್ರಾಜ್ಯ ಆರಂಭಿಸಿ ಯಶಸ್ಸಿನ ದಾಪುಗಾಲಿಟ್ಟಿದ್ದರು. ಈ ವೇಳೆ ಮಾರುತಿ 800 ಕಾರು ಮಾರಾಟ ಮಾಡಿ ಹೊಸ ಹೊಸ ಕಾರು ಖರೀದಿಸುತ್ತಾ ಹೋಗಿದ್ದರು. ಇತ್ತೀಚೆಗೆ ತಮ್ಮ ಮೊದಲ ಕಾರು ಮರಳಿ ಪಡೆಯಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಇದರಂತೆ ತಾವು ಬಳಸಿದ್ದ ಮೊದಲ ಮಾರುತಿ 800 ಕಾರನ್ನು 10 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು.

35
10, 20 ಸಾವಿರದ ಮೌಲ್ಯದ ಕಾರಿಗೆ 10 ಲಕ್ಷ ರೂ ಯಾಕೆ

ತಮ್ಮ ಮೊದಲ ಕಾರಿನ ಬಗ್ಗೆ ಸಿಜೆ ರಾಯ್ ಪ್ರತಿ ಬಾರಿ ನೆನಪಿಸಿಕೊಳ್ಳುತ್ತಿದ್ದರು. ತಮ್ಮ ಹಳೆಯ ಮಾರುತಿ 800 ಅನ್ನು ಹುಡುಕಿ ಕೊಡುವವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಕಳೆದ 2025ರ ನವೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದರು. ಸೋಶಿಯಲ್ ಮೀಡಿಯಾದ ಶಕ್ತಿಯಿಂದ ಕೇವಲ ಒಂದೇ ವಾರದಲ್ಲಿ ಕಾರನ್ನು ಪತ್ತೆಹಚ್ಚಲಾಯಿತು. ಆ ಮಾರುತಿ ಕಾರನ್ನು ಅದರ ಈಗಿನ ಮಾಲೀಕರು ಕೈಬಿಟ್ಟ ಸ್ಥಿತಿಯಲ್ಲಿತ್ತು. ಕಾರು ಈಗ ಓಡುವ ಸ್ಥಿತಿಯಲ್ಲಿಲ್ಲದಿದ್ದರೂ, ಕೊಟ್ಟ ಮಾತಿನಂತೆ ಹತ್ತು ಲಕ್ಷ ರೂಪಾಯಿ ನೀಡಿ ಅದನ್ನು ಖರೀದಿಸಿದರು.

45
1994ರಲ್ಲಿ ಬಳಸಿದ್ದ ಮಾರುತಿ 800 ಕಾರು

1994ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಸಿ.ಜೆ. ರಾಯ್ ಅವರು CKJ 3637 ನೋಂದಣಿ ಸಂಖ್ಯೆಯ ಕೆಂಪು ಮಾರುತಿ 800 ಅನ್ನು ಮೊದಲ ಬಾರಿಗೆ ಖರೀದಿಸಿದ್ದರು. ಆಗ ಅದರ ಬೆಲೆ 1.10 ಲಕ್ಷ ರೂಪಾಯಿ. ಕೆಲವು ವರ್ಷಗಳ ಕಾಲ ಬಳಸಿದ ನಂತರ ಅವರು ಆ ಕಾರನ್ನು ಮಾರಾಟ ಮಾಡಿದರು. ನಂತರ ಜೀವನದಲ್ಲಿ ದೊಡ್ಡ ಯಶಸ್ಸು ಅವರನ್ನು ಹುಡುಕಿಕೊಂಡು ಬಂತು. ಉದ್ಯಮ ಸಾಮ್ರಾಜ್ಯ ಬೆಳೆದಂತೆ, ಬುಗಾಟಿ ವೇರಾನ್, ರೋಲ್ಸ್ ರಾಯ್ಸ್, ಲಂಬೋರ್ಗಿನಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ಗೆ ಸೇರಿದವು.

55
ಮೊದಲ ಕಾರಿನ ಸಂಭ್ರಮ ಬೇರೆ

ನನ್ನ ಬಳಿ ಈಗ ಬುಗಾಟಿ ವೇರಾನ್ ಸೇರಿದಂತೆ ಹಲವು ಕಾರುಗಳಿವೆ, ಆದರೆ ಈ ಮಾರುತಿ 800 ನೀಡುವ ಸಂತೋಷ ಬೇರೆ ಯಾವುದಕ್ಕೂ ಇಲ್ಲ' ಎಂಬುದು ಅಂದಿನ ಅವರ ಪ್ರತಿಕ್ರಿಯೆಯಾಗಿತ್ತು. ದುಬೈ ಮತ್ತು ಭಾರತದಲ್ಲಿ ಹರಡಿರುವ ಅವರ ವಾಹನ ಸಂಗ್ರಹದ ಒಟ್ಟು ಮೌಲ್ಯ ಸುಮಾರು 10 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಅಂದಾಜಿಸಲಾಗಿದೆ.

Read more Photos on
click me!

Recommended Stories