592 ಕಿ.ಮೀ ಮೈಲೇಜ್, ಬೆಂಗಳೂರಿನಲ್ಲಿ ತಯಾರಾದ ವೋಲ್ವೋ XC40 ರಿಚಾರ್ಜ್ ಕಾರು ಬಿಡುಗಡೆ!

First Published | Mar 7, 2024, 4:32 PM IST

ವೋಲ್ವೋ ಇಂಡಿಯಾ ಭಾರತದಲ್ಲಿ ಸಾಮ್ರಾಜ್ಯ ವಿಸ್ತರಿಸುತ್ತಿದೆ. ಇದೀಗ ವೋಲ್ವೋ ಎಲೆಕ್ಟ್ರಿಕ್ ಕಾರಾಗಿರುವ  XC40 ಕಾರಿನ ಹೊಸ ವೇರಿಯೆಂಟ್ ಬಿಡುಗಡೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 592 ಕಿ.ಮೀ ಮೈಲೇಜ್ ನೀಡಲಿದೆ. 
 

ವೋಲ್ವೋ ಕಾರ್ ಇಂಡಿಯಾ XC40 ರಿಚಾರ್ಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಆನ್‌ಲೈನ್ ಮೂಲಕ ಅಥವಾ ಡೀಲರ್ ಬಳಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು. ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 592 ಕಿ.ಮೀ ಮೈಲೇಜ್ ನೀಡಲಿದೆ.
 

ವೋಲ್ವೋ XC40 ರಿಚಾರ್ಜ್ ಕಾರನ್ನು ಬೆಂಗಳೂರಿನ ಹೊಸಕೋಟೆಯ ಅತ್ಯಾಧುನಿಕ ಸ್ಥಳೀಯ ಉತ್ಪಾದನಾ ಘಟಕದಲ್ಲಿ ಜೋಡಣೆ ಮಾಡಲಾಗುತ್ತದೆ. 54.95 ಲಕ್ಷ ರೂಪಾಯಿ ಆರಂಭಿಕ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.
 

Latest Videos


XC40 ರಿಚಾರ್ಜ್  8 ವರ್ಷಗಳ ಬ್ಯಾಟರಿ ವಾರೆಂಟಿ, 3 ವರ್ಷಗಳ ಸಮಗ್ರ ಕಾರು ವಾರೆಂಟಿ, 3 ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್, 3 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್, ಡಿಜಿಟಲ್ ಸೇವೆಗಳಿಗೆ  ವರ್ಷಗಳ ಚಂದಾದಾರಿಕೆ ಹೊಂದಿದೆ. 
 

ಒಂದು ಬಾರಿ ಚಾರ್ಜ್ ಮಾಡಿದರೆ ಎಲ್.ಟಿ.ಪಿ ಮಾನದಂಡಗಳಂತೆ 475 ಕಿ.ಮೀ ಹಾಗೂ ಐಸಿಎಟಿ ಪರೀಕ್ಷೆಯಂತೆ 592 ಕಿಲೋಮೀಟರ್ ಮೈಲೇಜ್ ದೃಢೀಕರಿಸಿದೆ.

100 ಕಿ.ಮೀ ವೇಗವನ್ನು ಕೇವಲ 7.3 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುವ ಮೂಲಕ ಸುಸ್ಥಿರತೆಗೆ ಆದ್ಯತೆ ನೀಡಿ ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ.  238 hpಪವರ್ ಹಾಗೂ 420 NM ಟಾರ್ಕ್ ಸಾಮರ್ಥ್ಯ ಹೊಂದಿದೆ.  

2022ರಲ್ಲಿ ಬಿಡುಗಡೆಯಾದ XC40 ರೀಚಾರ್ಜ್ ಅಪಾರ ಯಶಸ್ಸಿನ ನಂತರ ನಾವು XC40 ರೀಚಾರ್ಜ್ ಸಿಂಗಲ್ ಮೋಟಾರ್ ವೇರಿಯೆಂಟ್ ಬಿಡುಗಡೆ ಮಾಡಿದ್ದೇವೆ.ವಾಹನವು ನಮ್ಮ ಗ್ರಾಹಕರ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ ಎಂದು  ವೋಲ್ವೋ ಕಾರ್ ಇಂಡಿಯಾದ  ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ

 ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲಾಗಿದೆ ಮತ್ತು ಭಾರತದಲ್ಲಿ ವಾರ್ಷಿಕ ಒಂದು ಹೊಸ ಎಲೆಕ್ಟ್ರಿಕ್ ಮಾಡೆಲ್ ಬಿಡುಗಡೆ ಮಾಡುವ ನಮ್ಮ ಭರವಸೆಯನ್ನು ಮರು ದೃಢೀಕರಿಸುತ್ತದೆ ಎಂದಿದ್ದಾರೆ. 
 

ಈ ಕಾರು ಭಾರತೀಯ ಗ್ರಾಹರಿಗೆ ಕಾರ್ಯಕ್ಷಮತೆ, ಸುಸ್ಥಿರತೆ ಮತ್ತು ಅನುಕೂಲದ ಅಸಾಧಾರಣ ಸಂಯೋಜನೆಯಾಗಿದೆ. ಆರಾಮಾದಾಯಕಪ್ರಯಾಣ ಒದಗಿಸಲಿದೆ ಎಂದು ಮಲ್ಹೋತ್ರ ಹೇಳಿದ್ದಾರೆ.   
 

click me!