SUV ಯ ಒಳಭಾಗವು ಅತ್ಯಾಧುನಿಕತೆಯನ್ನು ಹೊಂದಿದ್ದು, ಸಂಪೂರ್ಣ ಕಪ್ಪು ಬಣ್ಣದ ಲೆದರ್ ನ ಅತ್ಯುತ್ಕೃಷ್ಟವಾದ ಸೀಟುಗಳನ್ನು ಒಳಗೊಂಡಿದೆ. ಇದನ್ನು ಅಲ್ಟ್ರಾ ಆರಾಮವನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಎಸ್ಒಎಸ್ ಕಾಲಿಂಗ್ ಫಂಕ್ಷನ್, ಡಿಜಿಟಲ್ ಕಾಕ್ ಪಿಟ್ ನಲ್ಲಿ ಎಂಬೆಡೆಡ್ ಮ್ಯಾಪ್ಸ್ ವೀಕ್ಷಣೆ, ಪ್ರತಿ ಪ್ರಯಾಣವನ್ನು ಶಾಂತಿಯಿಂದ ಅನುಭವಿಸಲು ಪೂರಕವಾದ ಬ್ಲೈಂಡ್ ಸ್ಪಾಟ್ ವ್ಯೂವ್ ಮಾನಿಟರ್ ಗಳಂತಹ ವಿನೂತನವಾದ ಸುರಕ್ಷತೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.