ಮಾಲಿನ್ಯದಲ್ಲಿ ಪೆಟ್ರೋಲ್ ಡೀಸೆಲ್ ಕಾರಿಗಿಂತ ಎಲೆಕ್ಟ್ರಿಕ್ ವಾಹನ ಅಪಾಯಾಕಾರಿ, ಅಧ್ಯಯನ ವರದಿ!

First Published | Mar 6, 2024, 4:12 PM IST

ಎಲೆಕ್ಟ್ರಿಕ್ ವಾಹನ ಖರೀದಿಸಿ ತಾನು ಪರಿಸರಕ್ಕೆ ಪೂರಕವಾಗಿ ನಡೆದುಕೊಂಡಿದ್ದೇನೆ ಎಂದು ಹಿಗ್ಗಿದರೆ ತಪ್ಪು. ಕಾರಣ ಹೊಸ ಅಧ್ಯಯನ ವರದಿ ಬೆಚ್ಚಿ ಬೀಳಿಸುವ ಮಾಹಿತಿ ನೀಡಿದೆ. ಪೆಟ್ರೋಲ್ ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ವಾಹನ ಅತೀ ಹೆಚ್ಚು ಮಾಲಿನ್ಯ ಸೃಷ್ಟಿಸುತ್ತದೆ ಅನ್ನೋ ಮಾಹಿತಿ ಹೊರಬಿದ್ದಿದೆ.
 

ಪೆಟ್ರೋಲ್, ಡೀಸೆಲ್ ಕಾರಿನಿಂದ ಅತೀಯಾದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಜೊತೆಗೆ ತಾಪಮಾನ ಏರಿಕೆ ಅಪಾಯಗಳು ಹೆಚ್ಚು ಅನ್ನೋ ಕಾರಣಕ್ಕೆ ಇದೀಗ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಲಾಗಿದೆ. ಪರಿಸರಕ್ಕೆ ಪೂರಕ ಅನ್ನೋ ಕಾರಣಕ್ಕೆ ಇವಿ ವಾಹನಗಳ ಬಳಕೆಗೆ ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ 

ವಾಹನಗಳ ಎಮಿಶನ್ ಡೇಟಾ ಸಂಗ್ರಹಿಸಿ ಅಧ್ಯಯನ ನಡೆಸುವ ಎಮಿಶನ್ ಎನಾಲಿಟಿಕ್ಸ್ ಸಂಸ್ಥೆ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಈ ವರದಿ ಸರ್ಕಾರ ಸೇರಿದಂತೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಾರಣ ಈ ವರದಿ ಪ್ರಕಾರ ಪೆಟ್ರೋಲ್, ಡೀಸೆಲ್ ಕಾರಿಗಿಂತ ಎಲೆಕ್ಟ್ರಿಕ್ ವಾಹನದಲ್ಲಿನ ಮಾಲಿನ್ಯ ಪ್ರಮಾಣ ಹೆಚ್ಚು ಎಂದಿದೆ.

Latest Videos


ಪೆಟ್ರೋಲ್ ಡೀಸೆಲ್ ವಾಹನಗಳು ಹೊರಸೂಸುವ ಹೊಗೆಗಿಂತ ಎಲೆಕ್ಟ್ರಿಕ್ ವಾಹನಗಳಿಂದ ಸೃಷ್ಟಿಯಾಗುತ್ತಿರುವ ರಾಸಾಯಾನಿಕ 400ಕ್ಕೂ ಪಟ್ಟು ಅಪಾಯಾಕಾರಿ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಎಲೆಕ್ಟ್ರಿಕ್ ವಾಹನಗಳಲ್ಲಿನ ಟೈಯರ್ ಹಾಗೂ ಬ್ರೇಕ್ ಪ್ಯಾಡ್‌ಗಳಿಂದ ಉತ್ಪತ್ತಿಯಾಗುವ ರಾಸಾಯನಿಕಿಗಳು ಪರಿಸರಕ್ಕೆ ಅತ್ಯಂಕ ಮಾರಕ. ಈ ಅಪಾಯಾಕಾರಿ ರಾಸಾಯನಿಕಕ್ಕಿಂತ ಇಂಧನ ವಾಹನಗಳ ಹೊಗೆ ಎಷ್ಟೋ ಮೇಲು ಎಂದು ವರದಿ ಹೇಳುತ್ತಿದೆ.

ಎಲೆಕ್ಟ್ರಿಕ್ ವಾಹನಗಳು ಹೊಗೆ ಸೂಸುವುದಿಲ್ಲ, ಎಂಜಿನ್ ಶಬ್ದ ಮಾಡುವುದಿಲ್ಲ. ಆದರೆ ಈ ವಾಹನಗಳಲ್ಲಿ ಬಳಸುವ ಬ್ಯಾಟರಿ ಅತೀ ಹೆಚ್ಚು ತೂಕ ಹೊಂದಿದೆ. ಈ ತೂಕದ ಕಾರಣದಿದಂ ವಾಹನದ ತೂಕವೂ ಇಂಧನ ವಾಹನಕ್ಕಿಂತ ದುಪ್ಪಟ್ಟು. 

vehicle battery manufacturing unit

ಅತೀಯಾದ ತೂಕದಿಂದ ಎಲೆಕ್ಟ್ರಿಕ್ ವಾಹನಗಳ ಸಂಚರಿಸಿದಾಗ ಈ ಟೈಯರ್‌ಗಳಿಂದ ರಾಸಾಯನಿಕ ಸೃಷ್ಟಿಯಾಗಲಿದೆ. ಇನ್ನು ಅತೀಯಾದ ತೂಕದ ಕಾರಣ ಕಾರನ್ನು ನಿಯಂತ್ರಿಸಲು ಬ್ರೇಕ್ ಕೂಡ ಹೆಚ್ಚು ಬಳಕೆಯಾಗುತ್ತದೆ. ಈ ಬ್ರೇಕ್ ಪ್ಯಾಡ್‌ಗಳಿಂದಲೂ ಅಪಾಯಾಕಾರಿ ರಾಸಾಯನಿಕ ಪರಿಸರ ಸೇರಿಕೊಳ್ಳಲಿದೆ.

ಇವಿಗಳ ಟೈಯರ್ ಹಾಗೂ ಬ್ರೇಕ್ ಪ್ಯಾಡ್ ಕುರಿತು ಉತ್ಪಾದಕರು ಗಮನಹರಿಸಬೇಕು. ಈ ರಾಸಾಯನಿಕಗಳು ಪರಿಸರ ಸೇರದಂತೆ ತಡೆಯಲು ಸಂಶೋಧನೆ ಅಗತ್ಯ. ಈ ನಿಟ್ಟಿನಲ್ಲಿ ಉತ್ಪಾದಕರು ಹಾಗೂ ಸರ್ಕಾರ ಪ್ರಯತ್ನಿಸಬೇಕು ಅನ್ನೋ ಸಲಹೆಯನ್ನು ಎಮಿಶನ್ ಎನಾಲಿಟಿಕ್ಸ್ ನೀಡಿದೆ.
 

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಟೈಯರ್ ಹಾಗೂ ಬ್ರೇಕ್ ಪ್ಯಾಡ್‌ಗಳ ಕುರಿತು ಅಧ್ಯಯನ ನಡೆಸಿ ಈ ವರದಿ ನೀಡಲಾಗಿದೆ. ಇನ್ನು ಇವಿ ವಾಹನಗಳ ಬ್ಯಾಟರಿಯಿಂದ, ಹಾಳಾದಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ ರಾಸಾಯನಿಕಗಳು ಹೊರಸೂಸುವ ಕುರಿತ ಅಧ್ಯಯನಗಳು ನಡೆಯತ್ತಿದೆ. 

click me!