ಲೇಟಾದರೂ ನಯನತಾರಾಗೆ ದುಬಾರಿ ಗಿಪ್ಟ್, ಪತಿಯ 3.4 ಕೋಟಿ ರೂ ಉಡುಗೊರೆಗೆ ನಟಿ ಫುಲ್ ಖುಷ್!

Published : Nov 30, 2023, 01:15 PM IST

ನಟಿ ನಯನತಾರಾಗೆ ಪತಿ ವಿಘ್ನೇಶ್ ಶಿವನ್ ಬರೋಬ್ಬರಿ 3.4 ಕೋಟಿ ರೂಪಾಯಿ ಮೌಲ್ಯದ ಗಿಫ್ಟ್ ನೀಡಿದ್ದಾರೆ. ನ.18ರಂದು ಹುಟ್ಟುಹಬ್ಬ ಆಚರಿಸಿಕೊಂಡ ಪತ್ನಿಗೆ 10 ದಿನದ ಬಳಿಕ ಬರ್ತ್‌ಡೇ ಗಿಫ್ಟ್ ನೀಡಿದ್ದಾರೆ. ವಿಘ್ನೇಶ್ ಶಿವನ್ ದುಬಾರಿ ಗಿಫ್ಟ್ ಮಾಹಿತಿ ಇಲ್ಲಿದೆ.

PREV
18
ಲೇಟಾದರೂ ನಯನತಾರಾಗೆ ದುಬಾರಿ ಗಿಪ್ಟ್, ಪತಿಯ 3.4 ಕೋಟಿ ರೂ ಉಡುಗೊರೆಗೆ ನಟಿ ಫುಲ್ ಖುಷ್!

ಸೌತ್ ನಟಿ ನಯನತಾರ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜವಾನ್ ಯಶಸ್ಸಿನ ಅಲೆಯಲ್ಲಿರುವ ನಯನತಾರ ನವೆಂಬರ್ 18 ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

28

39ನೇ ವಸಂತಕ್ಕೆ ಕಾಲಿಟ್ಟಿರುವ ನಯತನತಾರಾ ಪತ್ನಿ ವಿಘ್ನೇಶ್ ಶಿವನ್ ಹಾಗೂ ಇಬ್ಬರು ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬ ಆಚರಿಸಿದ 10 ದಿನದ ಬಳಿಕ ಪತ್ನಿಗೆ ಶಿವನ್ ದುಬಾರಿ ಗಿಫ್ಟ್ ನೀಡಿದ್ದಾರೆ.

38

ನಯನತಾರಾಗೆ ಪತಿ ಬರೋಬ್ಬರಿ 3.4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಮೌಲ್ಯದ ಐಷಾರಾಮಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.
 

48

ಪತಿಯ ಪ್ರೀತಿಯ ಉಡುಗೊರೆಗೆ ನಟಿ ಫುಲ್ ಖುಷ್ ಆಗಿದ್ದಾರೆ. ಪ್ರೀತಿಯ ಪತಿ, ನನ್ನ ಹುಟ್ಟುಹಬ್ಬಕ್ಕೆ ಅತ್ಯಂತ ಸುಮಧುರ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ, ಲವ್ ಯು ಎಂದು ನಯನತಾರ ಪ್ರತಿಕ್ರಿಯೆ ನೀಡಿದ್ದಾರೆ.
 

58

ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಐಷಾರಾಮಿ ಸೆಡಾನ್ ಕಾರು. 2.69 ಕೋಟಿ ರೂಪಾಯಿ ಆರಂಭಿಕ ಬೆಲೆಯಿಂದ 3.4 ಕೋಟಿ ರೂಪಾಯಿ (ಎಕ್ಸ್  ಶೋ ರೂಂ) ಗರಿಷ್ಠ ಬೆಲೆಯಲ್ಲಿ ಈ ಕಾರು ಲಭ್ಯವಿದೆ.

68

ದುಬಾರಿ ಕಾರಿನ ಫೋಟೋ ಹಂಚಿಕೊಂಡಿರುವ ನಯನತಾರ ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಬಿಡುಗಡೆಯಾದ ನಯನತಾರಾ ಅಭಿಯನದ 2 ಚಿತ್ರದ ಪೈಕಿ ಜವಾನ್ ಬ್ಲಾಕ್‌ಬಸ್ಟರ್ ಹಿಟ್ ಕಂಡಿದೆ. 

78

ಇದೀಗ ನಯನತಾರಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಅನ್ನಪೂರಣಿ ಚಿತ್ರ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ಟೆಸ್ಟ್ ಸೇರಿದಂತೆ 2 ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ.
 

88

ಪತಿ ವಿಘ್ನೇಶ್ ಶಿವನ್ ನಿರ್ದೇಶನದ ಮುಂಬರುವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇಬ್ಬರು ತಮ್ಮ ಕರಿಯರ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ತಮ್ಮ ಕುಟುಂಬ ಹಾಗೂ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
 

Read more Photos on
click me!

Recommended Stories