1.71 ಕೋಟಿ ರೂ ಮೌಲ್ಯದ ಮರ್ಸಡಿಸ್ ಬೆಂಜ್ AMG GLE ಕಾರು ಖರೀದಿಸಿದ ಸೈನಾ ನೆಹ್ವಾಲ್!

Published : Nov 23, 2023, 07:24 PM IST

ಭಾರತದ ಬ್ಯಾಡ್ಮಿಂಟನ್ ಜೋಡಿಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ದುಬಾರಿ ಬೆಲೆಯ ಮರ್ಸಡಿಸ್ ಬೆಂಜ್ AMG GLE ಎಸ್‌ಯುವಿ ಕಾರು ಖರೀದಿಸಿದ್ದಾರೆ. ಕ್ರಿಕೆಟಿಗರು, ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಹೆಚ್ಚಾಗಿ ಈ ಕಾರು ಖರೀದಿಸಲು ಕಾರಣವೇನು?

PREV
18
1.71 ಕೋಟಿ ರೂ ಮೌಲ್ಯದ ಮರ್ಸಡಿಸ್ ಬೆಂಜ್ AMG GLE ಕಾರು ಖರೀದಿಸಿದ ಸೈನಾ ನೆಹ್ವಾಲ್!

ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ದಂಪತಿ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಈ ಬಾರಿ 1.71 ಕೋಟಿ ರೂಪಾಯಿ ಮೌಲ್ಯದ ಮರ್ಸಡಿಸ್ ಬೆಂಜ್ AMG GLE ಎಸ್‌ಯುವಿ ಕಾರು ಬ್ಯಾಡ್ಮಿಂಟನ್ ತಾರೆಯ ಅತಿಥಿಯಾಗಿದೆ.
 

28

ಸೈನಾ ಹಾಗೂ ಕಶ್ಯಪ್ ದುಬಾರಿ ಮೌಲ್ಯದ ಐಷಾರಾಮಿ ಮರ್ಸಿಡೀಸ್ ಕಾರು ಖರೀದಿಸಿದ್ದಾರೆ. ಈ ಮೂಲಕ ಸೈನಾ ದುಬಾರಿ ಕಾರುಗಳ ಸಂಗ್ರಹ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ.

38

ಮರ್ಸಡಿಸ್ ಬೆಂಜ್ AMG GLE ಕಾರಿನ ಜೊತೆಗೆ ಸೈನಾ ನೆಹ್ವಾಲ್ ಬಳಿ BMW X6, BMW 3 ಸೀರಿಸ್, ಮಿನಿ ಕೂಪರ್, ಹ್ಯುಂಡೈ ಕ್ರೇಟಾ ಕಾರುಗಳನ್ನೂ ಹೊಂದಿದ್ದಾರೆ.
 

48

ಮರ್ಸಡಿಸ್ ಬೆಂಜ್ AMG GLE ಕಾರು 21 ಆಲೋಯ್ ವೀಲ್, 12.3 ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

58

3.0 ಲೀಟರ್, 6 ಸಿಲಿಂಡರ್, ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ  ಮರ್ಸಡಿಸ್ ಬೆಂಜ್ AMG GLE ಕಾರು 435 hp ಪವರ್ ಹಾಗೂ 520 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

68

0-100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ನಲ್ಲಿ ಪಡೆಯಲಿದೆ. ಇನ್ನು ಮರ್ಸಡಿಸ್ ಬೆಂಜ್ AMG GLE ಕಾರಿನ ಗರಿಷ್ಠ ವೇಗ 280 ಕಿಲೋಮೀಟರ್ ಪ್ರತಿ ಗಂಟೆಗೆ.

78

ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ. ಎಬಿಎಸ್, ಇಬಿಡಿ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಗ್ಲೋಬಲ್ ಎನ್‌ಕಾಪ್ ಕ್ರಾಶ್ ಟೆಸ್ಟ್ ರೇಟಿಂಗ್ಸ್ ಸೇರಿದಂತೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ.

88

ಕ್ಲೈಮೇಟ್ ಕಂಟ್ರೋಲ್, 13 ಸ್ಪೀಕರ್, ವೆಂಟಿಲೇಟೆಡ್ ಸೀಟ್, 64 ವಿವಿಧ ಬಣ್ಣದ ಆ್ಯಂಬಿಯೆಂಟ್ ಲೈಟ್ ಸೇರಿದಂತೆ ಹಲವು ಫೀಚರ್ಸ್ ಈ ಮರ್ಸಡಿಸ್ ಬೆಂಜ್ AMG GLE ಕಾರಿನಲ್ಲಿದೆ.
 

Read more Photos on
click me!

Recommended Stories