ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ ಚೇರ್ಮೆನ್ ಕುಮಾರ್ ಮಂಗಲಂ ಬಿರ್ಲಾ, ಅತೀ ದೊಡ್ಡ ಉದ್ಯಮ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಕುಮಾರ್ ಬಿರ್ಲಾ 1.4 ಲಕ್ಷ ಕೋಟಿ ಸಂಪತ್ತು ಹೊಂದಿದ್ದಾರೆ.
ಭಾರತ ಹಾಗೂ ವಿದೇಶಗಳಲ್ಲಿ ಉದ್ಯಮ ಕಟ್ಟಿರುವ ಕುಮಾರ್ ಬಿರ್ಲಾ , ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಕುಮಾರ ಮಂಗಲಂ ಬಿರ್ಲಾ ಬಳಿ ದುಬಾರಿ ಹಾಗೂ ಐಷಾರಾಮಿ ಕಾರಗಳ ಅತೀ ದೊಡ್ಡ ಸಂಗ್ರಹವಿದೆ. ಬ್ರಿಟಿಷ್ ರೋಲ್ಸ್ ರಾಯ್ಸ್, ಬೆಂಟ್ಲಿ, ಪೋರ್ಶೆ ಸೇರಿದಂತೆ ಹಲವು ಐಷಾರಾಮಿ ಕಾರು ಹೊಂದಿದ್ದಾರೆ.
ಇತ್ತೀಚೆಗೆ ಕುಮಾರ್ ಬಿರ್ಲಾ ತಮ್ಮ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ರಸ್ತೆಯಲ್ಲಿ ಕಾಣಿಸಿಕೊಂಡ ಬಿರ್ಲಾಗೆ ರೇಂಜ್ ರೋವರ್ ಸೇರಿದಂತೆ ಇತರ ಕಾರುಗಳು ಬೆಂಗಾವಲಾಗಿ ತೆರಳಿತ್ತು.
ಸಾಮಾನ್ಯವಾಗಿ ಕುಮಾರ್ ಬಿರ್ಲಾ ತಮ್ಮ ಐಷಾರಾಮಿ ಕಾರುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ರೋಲ್ಸ್ ರಾಯ್ಸ್, ಬೆಂಟ್ಲಿ, ಪೋರ್ಶೆ ಕಾರುಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ.
ಕುಮಾರ್ ಬಿರ್ಲಾ ತಮ್ಮ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರನ್ನು ಈ ವರ್ಷದ ಆರಂಭದಲ್ಲಿ ಖರೀದಿಸಿದ್ದರು. ಈ ಕಾರಿನ ಎಕ್ಸ್ ಶೋ ರೂ ಬೆಲೆ 5.25 ಕೋಟಿ ರೂಪಾಯಿಯಿಂದ 7.60 ಕೋಟಿ ರೂಪಾಯಿ.
ಬಿರ್ಲಾ ಬಳಿ ಇರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಕಸ್ಟಮೈಸ್ಡ್ ಆಗಿದೆ. ಈ ಕಾರನ್ನು ಕುಮಾರ್ ಬಿರ್ಲಾ 2021ರಲ್ಲಿ ಖರೀದಿಸಿದ್ದಾರೆ. ಇದರ ಎಕ್ಸ್ ಶೋ ರೂಂ ಬೆಲೆ 6.95 ಕೋಟಿ ರೂಪಾಯಿ.
ಇದರ ಜೊತೆಗೆ BMW, ಮರ್ಸಿಡಿಸ್ ಬೆಂಜ್ ಸೇರಿದಂತೆ ಇತರ ಕಾರುಗಳನ್ನು ಕುಮಾರ್ ಮಂಗಲಂ ಬಿರ್ಲಾ ಹೊಂದಿದ್ದಾರೆ. 1995ರಲ್ಲಿ ತಂದೆ ನಿಧನದ ಬಳಿಕ ತಮ್ಮ 28 ವಯಸ್ಸಿಗೆ ಬಿರ್ಲಾ ಗ್ರೂಪ್ ಜವಾಬ್ದಾರಿ ವಹಿಸಿಕೊಂಡ ಕುಮಾರ್ ಬಿರ್ಲಾ ಹಂತ ಹಂತವಾಗಿ ಯಶಸ್ಸು ಸಾಧಿಸಿದ್ದಾರೆ.