ಅಂಬಾನಿ, ಅದಾನಿ ಸಾಲಿಗೆ ಸೇರಿದ ರಣಬೀರ್ ಕಪೂರ್, ದುಬಾರಿ ಕಾರು ಖರೀದಿಸಿದ ಬಾಲಿವುಡ್ ಸ್ಟಾರ್!

Published : Aug 18, 2023, 10:54 AM ISTUpdated : Aug 18, 2023, 10:55 AM IST

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಇದೀಗ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಸಾಲಿಗೆ ಸೇರಿಕೊಂಡಿದ್ದಾರೆ. ಇದು ಆದಾಯ ಹಾಗೂ ಉದ್ಯಮದ ಕಾರಣದಿಂದ ಅಲ್ಲ, ರಣಬೀರ್ ಕಪೂರ್ ಖರೀದಿಸಿದ ಕಾರಿನಿಂದ ಇದೀಗ ಈ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ.  

PREV
18
ಅಂಬಾನಿ, ಅದಾನಿ ಸಾಲಿಗೆ ಸೇರಿದ ರಣಬೀರ್ ಕಪೂರ್, ದುಬಾರಿ ಕಾರು ಖರೀದಿಸಿದ ಬಾಲಿವುಡ್ ಸ್ಟಾರ್!

ಯಶಸ್ಸಿನಲ್ಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ದುಬಾರಿ ಕಾರು ಖರೀದಿಸಿದ್ದಾರೆ. ಇದರೊಂದಿಗೆ ರಣಬೀರ್ ಕಪೂರ್ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ರಣಬೀರ್ ಕಪೂರ್ ಖರೀದಿಸಿದ ಕಾರು ಬೇರೆ ಯಾವುದು ಅಲ್ಲ, ರೇಂಜ್ ರೋವರ್ ವೋಗ್. 
 

28

ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಹಾಗೂ ಪತ್ನಿ ಆಲಿಯಾ ಭಟ್ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದ ಜೋಡಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇದೀಗ ರಣಬೀರ್ ಕಪೂರ್ ದುಬಾರಿ ಹಾಗೂ ಐಷಾರಾಮಿ ರೇಂಜ್ ರೋವರ್ ವೊಗ್ ಕಾರು ಖರೀದಿಸಿದ್ದಾರೆ.
 

38

ಈ ಕಾರು ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಬಾಲಿವುಡ್ ನಟ ನಟಿಯರಲ್ಲಿದೆ. ಇದೀಗ ಈ ಸಾಲಿಗೆ ಕಪೂರ್ ಫ್ಯಾಮಿಲಿಯ ಜನಪ್ರಿಯ ನಟ ರಣಬೀರ್ ಕಪೂರ್ ಕೂಡ ಸೇರಿಕೊಂಡಿದ್ದಾರೆ. 

48

ರಣಬೀರ್ ಕಪೂರ್ ಖರೀದಿಸಿದ ರೇಂಜ್ ರೋವರ್ ವೋಗ್ ಕಾರಿನ ಬೆಲೆ 4 ಕೋಟಿ ರೂಪಾಯಿ(ಎಕ್ಸ್  ಶೋ ರೂಂ). ಇದು ಲ್ಯಾಂಡ್ ರೋವರ್ ಕಂಪನಿಯ ಲಾಂಗ್ ವ್ಹೀಲ್‌ಬೇಸ್ ಕಾರಾಗಿದೆ. ಹೀಗಾಗಿ ಹಲವರು ಈ ಕಾರಿನ ಮೊರೆ ಹೋಗುತ್ತಾರೆ.

58

ಬೆಲ್‌ಗ್ರೇವಿಯಾ ಗ್ರೀನ್ ಶೇಡ್ ಬಣ್ಣದ ವೋಗ್ ಕಾರಿನಲ್ಲಿ ಇತ್ತೀಚೆಗೆ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು. ಹಾಗಂತ ಇದು ಮೊದಲನೇ ರೋವರ್ ಅಲ್ಲ. ಇದಕ್ಕೂ ಮೊದಲು ರಣಬೀರ್ ರೇಂಜ್ ರೋವರ್ ವೆಲಾರ್ ಹಾಗೂ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಹೊಂದಿದ್ದಾರೆ.
 

68

ಆರಾಮದಾಯಕ ಪ್ರಯಾಣಕ್ಕೆ ಈ ಕಾರು ಹೇಳಿ ಮಾಡಿಸಿದ ವಾಹನ. ಹೆಚ್ಚಿನ ಸ್ಥಳವಕಾಶ ಈ ಕಾರಿನಲ್ಲಿದೆ. ಜೊತೆಗೆ ಅದೆಷ್ಟೇ ದೂರ ಪ್ರಯಾಣ ಮಾಡಿದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

78

ಸುರಕ್ಷತೆ, ತಂತ್ರಜ್ಞಾನ, ಕನೆಕ್ಟೆಡ್ ಫೀಚರ್ಸ್ ಸೇರಿದಂತೆ ಹಲವು ಅತ್ಯಾಧುನಿಕ ವ್ಯವಸ್ಥೆಗಳು ಈ ಕಾರಿನಲ್ಲಿದೆ. ಟಾಟಾ ಮಾಲೀಕತ್ವದ ಬ್ರಿಟೀಷ್ ಕಾರು ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ.

88
Image: Google

ಆದಿತ್ಯ ರಾಯ್ ಕಪೂರ್, ಸೋನಮ್ ಕಪೂರ್, ಮಹೇಶ್ ಬಾಬು, ಮೋಹನ್ ಲಾಲ್, ಮಲೈಕಾ ಅರೋರಾ ಸೇರಿದಂತೆ ಹಲವು ಸೆಲೆಬ್ರೆಟಿಗಳಲ್ಲಿ ಈ ಕಾರಿದೆ. ರಣಬೀರ್ ಕಪೂರ್ ಕೂಡ ಇದೀಗ ರೋವರ್ ವೋಗ್ ಖರೀದಿಸಿ ತಮ್ಮ ಕಾರು ಕಲೆಕ್ಷನ್ ಹೆಚ್ಚಿಸಿಕೊಂಡಿದ್ದಾರೆ.

Read more Photos on
click me!

Recommended Stories