ಭಾರತದಲ್ಲಿ ಟೋಯೋಟಾದ ಎಲೆಕ್ಟ್ರಿಕ್ ಕಾರು ಎಬೆಲ್ಲಾ ಡೆಲಿವರಿ ಆರಂಭಗೊಂಡಿದೆ. ಅತ್ಯಂತ ಆಕರ್ಷಕ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 543 ಕಿಲೋಮೀಟರ ಮೈಲೇಜ್ ನೀಡಲಿದೆ. ಇದರ ಬೆಲೆ ಎಷ್ಟು? ಫೀಚರ್ಸ್ ಏನು?
ಟೋಯೋಟಾ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಬಹು ಬೇಡಿಕೆ ಕಾರಾಗಿದೆ. ಇದೀಗ ಸಂಪೂರ್ಣ ಎಲೆಕ್ಟ್ರಿಕ್ ಕಾರು ರಸ್ತೆಗಳಿಸಿದೆ. ಟೋಯೋಟಾದ ಬಹುನಿರೀಕ್ಷಿತ ಎಬೆಲ್ಲಾ ಇವೆ ಕಾರು ಭಾರತದಲ್ಲಿ ಡೆಲಿವರಿ ಆರಂಭಗೊಂಡಿದೆ.ಮಾರುತಿ ಸುಜುಕಿ ಇ ವಿಟಾರ ಫೀಚರ್ಸ್ ಹೊಂದಿರುವ ಈ ಟೊಯೋಟಾ ಎಬೆಲ್ಲಾ ಕಾರಿನ ಬುಕಿಂಗ್ ಹಾಗೂ ಬೇಡಿಕೆ ಎರಡೂ ಹೆಚ್ಚಾಗಿದೆ.
26
ಭಾರತದಲ್ಲಿ ಎಬೆಲ್ಲಾ ಇವೆ ಬೆಲೆ ಎಷ್ಟು?
ಟೊಯೋಟಾ ಎಬೆಲ್ಲಾ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 23.60 ಲಕ್ಷ ರೂಪಾಯಿ. ಡ್ಯುಯೆಲ್ ಟೋನ್ ವೇರಿಯೆಂಟ್ ಕಾರಿನ ಬೆಲೆ 23.80 ಲಕ್ಷ ರೂಪಾಯಿ. ಎರಡೂ ಬೆಲೆಗಳು ಎಕ್ಸ್ ಶೋ ರೂಂ. ಆನ್ ರೋಡ್ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ ಇದರ ಆನ್‌ರೋಡ್ ಬೆಲೆ ಸರಿಸುಮಾರು 26.85 ಲಕ್ಷ ರೂಪಾಯಿ.
36
ಎಬೆಲ್ಲಾ ಬ್ಯಾಟರಿ ಹಾಗೂ ಮೈಲೇಜ್ ರೇಂಜ್
ಎಬೆಲ್ಲಾ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 61kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 543 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 49kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 440 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದು ಕಂಪನಿ ಟೆಸ್ಟಿಂಗ್ ಮೂಲಕ ನೀಡಿದ ಮೈಲೇಜ್ ರೇಂಜ್. ರಿಯಲ್ ಮೈಲೇಜ್ ರೇಂಜ್ ಇನ್ನಷ್ಟೆ ಬಹಿರಂಗವಾಗಬೇಕಿದೆ.
ಎಬೆಲ್ಲಾ ಮೊದಲೇ ಹೇಳಿದಂತೆ ಎರಡು ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಿದೆ. 61kWh ಬ್ಯಾಟರಿ ಕಾರು 172 hp ಪವರ್ ಹಾಗೂ 193 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 49kWh ಬ್ಯಾಟರಿ ಕಾರು 142 hp ಪವರ್ ಹಾಗೂ 193 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಈ ಮೂಲಕ ಉತ್ತಮ ಪರ್ಫಾಮೆನ್ಸ್ ನೀಡಲಿದೆ ಅನ್ನೋದು ಪವರ್ ಹಾಗೂ ಟಾರ್ಕ್ ಸ್ಪಷ್ಟಪಡಿಸುತ್ತಿದೆ.
56
ಎಬೆಲ್ಲಾ ಕಾರಿನ ಫೀಚರ್ಸ್
10.1 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈಯರ್‌ಲೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಟೋ ಕಾರ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್, ಜೆಬಿಎಲ್ ಸೌಂಡ್ ಸಿಸ್ಟಮ್, 12 ವಿವಿದ ಬಣ್ಣಗಳ ಆ್ಯಂಬಿಯೆಂಟ್ ಲೈಟ್,ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
66
ಸುರಕ್ಷತೆಗೆ ಆದ್ಯತೆ ನೀಡಿದ ಟೋಯೋಟಾ
ಎಬೆಲ್ಲಾ ಕಾರು 7 ಏರ್‌ಬ್ಯಾಗ್ಸ್ ಹೊಂದಿದೆ. ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ. 360 ಡಿಗ್ರಿ ಕ್ಯಾಮೆರಾ, ಲೆವೆಲ್ 2 ಅಡಾಸ್ ತಂತ್ರಜ್ಞಾನ ಹೊಂದಿದೆ. ಎಬೆಲ್ಲಾ ಕಾರು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಟಾಟಾ ಹ್ಾರಿಯರ್ ಇವಿಗೆ ಪ್ರತಿಸ್ಪರ್ಧಿಯಾಗಿದೆ.