ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಖರೀದಿಸಿದ ಪ್ರಭು ದೇವಾ, ಈ ಕಾರಿನ ಬೆಲೆ, ವಿಶೇಷತೆ ಏನು?

Published : Jun 19, 2026, 06:50 PM IST

ನಟ, ನಿರ್ದೇಶಕ, ಕೊರಿಯೋಗ್ರಾಫರ್, ಅದ್ಭುತ ಡ್ಯಾನ್ಸರ್ ಪ್ರಭು ದೇವಾ ಹೊಸ ಕಾರು ಎಂಜಿ ಎಂ9 ಲಿಮೋಸಿನ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಎಷ್ಟು? ಏನಿದರ ವಿಶೇಷತೆ? ಸೆಲೆಬ್ರೆಟಿಗಳು ಯಾಕೆ ಈ ಕಾರನ್ನು ಇಷ್ಟಪಡುತ್ತಿದ್ದಾರೆ?

PREV
15
ಎಂಜಿ ಎ9 ಕಾರು ಖರೀದಿಸಿದ ಪ್ರಭು ದೇವಾ

ಸಿನಿ ರಂಗದ ಸ್ಟಾರ್ ಪ್ರಭು ದೇವಾ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ತಮ್ಮ ಆರಾಮದಾಯಕ ಪ್ರಯಾಣಕ್ಕೆ ಪ್ರಭು ದೇವಾ ಹೊಚ್ಚ ಹೊಸ ಎಂಜಿ ಎ9 ಪ್ರಸಿಡೆನ್ಶಿಯಲ್ ಲಿಮೋಸಿನ್ ಕಾರು ಖರೀದಿಸಿದ್ದಾರೆ. ಹಲವು ಸೆಲೆಬ್ರೆಟಿಗಳು ಇಷ್ಟಪಡುತ್ತಿರುವ ಲಿಮೋಸಿನ್ ಕಾರು ಇದೀಗ ಪ್ರಭು ದೇವಾ ಕೈಸೇರಿದೆ.

25
ದುಬಾರಿ ಹಾಗೂ ಐಷಾರಾಮಿ ಕಾರು

ಅದ್ಭುತ ಡ್ಯಾನ್ಸ್ ಮೂಲಕ ದೇಶದಲ್ಲೆ ಭಾರಿ ಜನಪ್ರಿಯರಾಗಿರುವ ಪ್ರಭು ದೇವಾ, ಸಿನಿಮಾ ನಿರ್ದೇಶನ, ಕೊರಿಯೋಗ್ರಾಫ್ ಸೇರಿದಂತೆ ಹಲವು ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಸೆಟ್, ಲೋಕೇಶನ್ ಸೇರಿದಂತೆ ಹಲವೆಡೆ ಪ್ರಯಾಣಿಸಲು ಆರಾಮದಾಯಕ ಕಾರು ಖರೀದಿಸಿದ್ದಾರೆ. ಎಂಜಿ ಕಾರುಗಳ ಪೈಕಿ ಎ9 ಲಿಮೋಸಿನ್ ದುಬಾರಿ ಹಾಗೂ ಐಷಾರಾಮಿ ಕಾರಾಗಿದೆ.

35
ಹೊಸ ಕಾರಿನ ಬೆಲೆ ಎಷ್ಟು?

ಪ್ರಭು ದೇವಾ ಖರೀದಿಸಿದ ಎ9 ಪ್ರಸಿಡೆನ್ಶಿಯಲ್ ಲಿಮೋಸಿನ್ ಕಾರಿನ ಆರಂಭಿಕ ಬೆಲೆ 75 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಪ್ರಭು ದೇವಾ ಖರೀದಿಸಿದ ವೇರಿಯೆಂಟ್ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೂ ಆನ್‌ರೋಡ್ ಬೆಲೆ ಸರಿಸುಮಾರು 1.2 ಕೋಟಿ ರೂಪಾಯಿ ದಾಟಲಿದೆ.

45
ಕಾರಿನ ಫೀಚರ್ಸ್

ಪ್ರೆಸಿಡೆನ್ಶಿಯಲ್ ಸೀಟುಗಳು' 16-ವೇ ಅಡ್ಜಸ್ಟ್‌ಮೆಂಟ್ (16-way adjustment), ಎಂಟು ಮಸಾಜ್ ಮೋಡ್‌ಗಳು, ಹೀಟಿಂಗ್ ಮತ್ತು ವೆಂಟಿಲೇಶನ್ ಸೌಲಭ್ಯವನ್ನು ಹೊಂದಿವೆ.ಕಾರಿನ ಒಳಗೆ ಕಾಗ್ನ್ಯಾಕ್ ಬ್ರೌನ್ (Cognac Brown) ಪ್ರೀಮಿಯಂ ಲೆದರ್ ಇಂಟೀರಿಯರ್ಸ್ ಇದ್ದು, ಯಾಚ್ ಶೈಲಿಯ ಡ್ಯುಯಲ್ ಸನ್‌ರೂಫ್ (Dual Sunroof) ಮತ್ತು ಆಂಬಿಯೆಂಟ್ ಲೈಟಿಂಗ್ ಕಾರಿನ ಅಂದವನ್ನು ಹೆಚ್ಚಿಸಿದೆ. ಜೊತೆಗೆ ಇಂಟೆಲಿಜೆಂಟ್ ಆರ್ಮ್‌ರೆಸ್ಟ್ ಕಂಟ್ರೋಲ್‌ಗಳನ್ನು ಇದು ಹೊಂದಿದೆ.

55
7 ಏರ್‌ಬ್ಯಾಗ್, 5 ಸ್ಟಾರ್ ರೇಟಿಂಗ್

ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಎಂಜಿ ಎಂ9 ಕಾರನ್ನು ಅಲ್ಟ್ರಾ-ಹೈ-ಸ್ಟ್ರೆಂತ್ ಸ್ಟೀಲ್ ಬಳಸಿ ನಿರ್ಮಿಸಲಾಗಿದೆ. ಇದು 7 ಏರ್‌ಬ್ಯಾಗ್‌ಗಳು, ಲೆವೆಲ್ 2 ಎಡಿಎಎಸ್ (Level 2 ADAS) ತಂತ್ರಜ್ಞಾನವನ್ನು ಹೊಂದಿದ್ದು, ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5-ಸ್ಟಾರ್ ಯುರೋ ಎನ್‌ಸಿಎಪಿ (EURO NCAP) ಮತ್ತು ಆನ್‌ಕ್ಯಾಪ್ (ANCAP) ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಬೋಲ್ಡ್ ಟ್ರಾಪೆಜೋಯ್ಡಲ್ ಗ್ರಿಲ್, ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ವಾಟರ್‌ಫಾಲ್ ಮಾದರಿಯ ಟೇಲ್‌ಲೈಟ್ಸ್ ಹಾಗೂ 19-ಇಂಚಿನ ಕಾಂಟಿಸೀಲ್ (ContiSeal™) ಟೈರ್‌ ಹೊಂದಿದೆ.

Read more Photos on
click me!

Recommended Stories