
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು ಟೊಯೋಟಾ ಗ್ಲಾಂಜಾಗೆ ಪೆಸ್ಟೀಜ್ ಎಡಿಶನ್ ಆಫರ್ ನೀಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ಮತ್ತು ಹೆಚ್ಚಿನ ಪ್ರಯೋಜನ ಘೋಷಿಸಿದೆ. ಹೆಚ್ಚುವರಿ ಫೀಚರ್ ಗಳ ಮೂಲಕ ನವೀಕರಣಗೊಂಡಿರುವ ಟೊಯೋಟಾ ಗ್ಲಾಂಜಾದ ಆರಂಭಿಕ ಬೆಲೆ 6.90 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.
ಸುರಕ್ಷತೆ ಮೊದಲು: ಗ್ಲಾಂಜಾದ ಎಲ್ಲಾ ವೇರಿಯಂಟ್ ಗಳಲ್ಲಿ ಆರು ಏರ್‌ಬ್ಯಾಗ್ ಗಳು ಸ್ಟ್ಯಾಂಡರ್ಡ್
ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಬದ್ಧವಾಗಿರುವ ಟೊಯೋಟಾ ಸಂಸ್ಥೆಯು ತನ್ನ ಟೊಯೋಟಾ ಗ್ಲಾಂಜಾದ ಎಲ್ಲಾ ವೇರಿಯಂಟ್ ಗಳಲ್ಲಿ ಆರು ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಿದ್ದು, ಈ ಮೂಲಕ ಚಾಲಕ ಮತ್ತು ಪ್ರಯಾಣಿಕರಿಗೆ ಸಮಗ್ರ ರಕ್ಷಣೆಯನ್ನು ಒದಗಿಸುತ್ತದೆ. ತನ್ನ ಪ್ರೀಮಿಯಂ ಸ್ಟೈಲಿಂಗ್ ಮತ್ತು ಸಂಪೂರ್ಣ ತಂತ್ರಜ್ಞಾನ ಫೀಚರ್ ಗಳಿಗೆ ಜನಪ್ರೀತಿ ಗಳಿಸಿರುವ ಟೊಯೋಟಾ ಗ್ಲಾಂಜಾ, ಮೊದಲ ಬಾರಿಗೆ ಕಾರು ಖರೀದಿಸುವವರ, ಯುವ ವೃತ್ತಿಪರರ ಮತ್ತು ನಗರ ಸಂಚಾರಿಗಳ ಆದ್ಯತೆಯ ಆಯ್ಕೆಯಾಗಿದೆ. ತನ್ನ ಸೊಗಸಾದ ವಿನ್ಯಾಸ, ಇಂಧನ ದಕ್ಷತೆ ಮತ್ತು ತೊಂದರೆ ಮುಕ್ತ ಮಾಲೀಕತ್ವ ಗುಣಗಳಿಂದಾಗಿ ಗ್ರಾಹಕರ ಹೃದಯ ಗೆದ್ದಿರುವ ಈ ಕಾರು, ಆರು ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಸೇರಿಸಿರುವುದರಿಂದ ಇನ್ನಷ್ಟು ಆಕರ್ಷಕವಾಗಲಿದೆ.
ಹೊಸ ‘ಪ್ರೆಸ್ಟೀಜ್ ಪ್ಯಾಕೇಜ್’ ಅನಾವರಣ
ಮಾಲೀಕತ್ವದ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸಲು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸೀಮಿತ ಅವಧಿಯ ‘ಪ್ರೆಸ್ಟೀಜ್ ಪ್ಯಾಕೇಜ್’ ಅನ್ನು ಅನಾವರಣಗೊಳಿಸಿದ್ದು, ಇದು ಗ್ಲಾಂಜಾದ ಸ್ಟೈಲ್, ಅನುಕೂಲತೆ ಮತ್ತು ಸೌಲಭ್ಯವನ್ನು ಹೆಚ್ಚಿಸಲು ರೂಪಿಸಲಾದ ಆಕ್ಸೆಸರಿ ಬಂಡಲ್ ಆಗಿದೆ. ಜೂನ್ ನಿಂದ ಜುಲೈ 31 ರವರೆಗೆ ಲಭ್ಯವಿರುವ ಈ ಪ್ರೆಸ್ಟೀಜ್ ಪ್ಯಾಕೇಜ್ ಡೀಲರ್-ಫಿಟ್ಟೆಡ್ ಆಕ್ಸೆಸರಿಗಳನ್ನು ಒಳಗೊಂಡಿದೆ, ಆ ಆಕ್ಸೆಸರಿಗಳು ಹೀಗಿವೆ:
1. ಪ್ರೀಮಿಯಂ ಡೋರ್ ವೈಸರ್‌ಗಳು
2. ಕ್ರೋಮ್ ಮತ್ತು ಬ್ಲಾಕ್ ಆಕ್ಸೆಂಟ್ ಜೊತೆಗೆ ಬಾಡಿ ಸೈಡ್ ಮೌಲ್ಡಿಂಗ್
3. ರೇರ್ ಲ್ಯಾಂಪ್ ಗಾರ್ನಿಶ್
4. ಓ ಆರ್ ವಿ ಎಂಗಳಿಗೆ ಮತ್ತು ಫೆಂಡರ್ ಗಳಿಗೆ ಕ್ರೋಮ್ ಗಾರ್ನಿಶ್ ಗಳು
5. ರೇರ್ ಸ್ಕಿಡ್ ಪ್ಲೇಟ್
6. ಇಲ್ಯೂಮಿನೇಟೆಡ್ ಡೋರ್ ಸಿಲ್ ಗಳು
7. ಲೋವರ್ ಗ್ರಿಲ್ ಗಾರ್ನಿಶ್
ಟೊಯೋಟಾ ಗ್ಲಾಂಜಾವನ್ನು ರಸ್ತೆಯಲ್ಲಿ ಆಕರ್ಷಕವಾಗಿ ಕಾಣಿಸುವಂತೆ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ಮಾನಸಿಕ ಶಾಂತಿಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. 3-ವರ್ಷ/ 100,000 ಕಿಮೀ ವಾರಂಟಿಯೊಂದಿಗೆ—5 ವರ್ಷ/ 220,000 ಕಿಮೀವರೆಗೆ ವಿಸ್ತರಿಸಬಹುದಾದ ವಾರಂಟಿ ಒದಗಿಸುತ್ತದೆ. ಈ ಮೂಲಕ ಆನಂದದಾಯಕ ಮಾಲೀಕತ್ವದ ಅನುಭವವನ್ನು ಒದಗಿಸುತ್ತದೆ. ಟೊಯೋಟಾದ ವಿಶೇಷ 60-ನಿಮಿಷದ ಎಕ್ಸ್ ಪ್ರೆಸ್ ಮೇಂಟೆನೆನ್ಸ್ ಸೇವೆ, 24/7 ರೋಡ್‌ಸೈಡ್ ಅಸಿಸ್ಟೆನ್ಸ್, ಮತ್ತು ಗ್ರಾಹಕ-ಸ್ನೇಹಿ ಹಣಕಾಸು ಆಯ್ಕೆಗಳು ದೊರೆಯುತ್ತಿದ್ದು, ಈ ಮೂಲಕ ಗ್ಲಾಂಜಾವನ್ನು ಒಂದು ಪರಿಪೂರ್ಣ ಆಯ್ಕೆಯಾಗಿದೆ.
ಟೊಯೋಟಾ ಗ್ಲಾಂಜಾ - ಸ್ಮಾರ್ಟ್ ಸಾರಿಗೆ ವ್ಯವಸ್ಥೆ ಮತ್ತು ಪ್ರಾಯೋಗಿಕತೆಯ ಸಮ್ಮಿಲನ
ಭಾರತದಲ್ಲಿ ಆರು ವರ್ಷಗಳ ಪರಂಪರೆ ಹೊಂದಿರುವ ಟೊಯೋಟಾ ಗ್ಲಾಂಜಾ, 2 ಲಕ್ಷಕ್ಕೂ ಹೆಚ್ಚು ಯೂನಿಟ್ ಗಳ ಮಾರಾಟ ಕಂಡಿದೆ. ಭಾರತೀಯ ಕುಟುಂಬಗಳಲ್ಲಿ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದ್ದು, ಈ ಕಾರು ಅತ್ಯುತ್ತಮ ವಿನ್ಯಾಸ, ಇಂಧನ ದಕ್ಷತೆ, ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. 1.2-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿರುವ ಗ್ಲಾಂಜಾ, 22.94 ಕಿಮೀ/ಲೀ (ಎಎಂಟಿ) ಮತ್ತು 30.61 ಕಿಮೀ/ ಕೆಜಿ (ಸಿ ಎನ್ ಜಿ) ವರೆಗಿನ ಆಕರ್ಷಕ ಮೈಲೇಜ್ ಒದಗಿಸುತ್ತದೆ. ವಿಶೇಷವಾಗಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್-ಅಪ್ ಡಿಸ್‌ಪ್ಲೇ (ಎಚ್ ಯು ಡಿ), 360-ಡಿಗ್ರಿ ಕ್ಯಾಮೆರಾ, ಮತ್ತು 45+ ಕನೆಕ್ಟೆಡ್ ಫೀಚರ್ ಗಳಿರುವ ಟೊಯೋಟಾ ಐ-ಕನೆಕ್ಟ್ ನಂತಹ ವಿಭಾಗ-ಪ್ರಮುಖ ವೈಶಿಷ್ಟ್ಯವನ್ನು ಹೊಂದಿದೆ.
ಇಂದಿನ ನಗರ ಜೀವನಶೈಲಿಗಾಗಿ ವಿನ್ಯಾಸಗೊಳಿಸಲಾದ ಈ ಕಾರು ಆಕರ್ಷಕ ಹೊರಾಂಗಣ ವಿನ್ಯಾಸ ಹೊಂದಿದ್ದು, ವಿಶಿಷ್ಟ ಟೊಯೋಟಾ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, 16-ಇಂಚಿನ ಅಲಾಯ್ ವೀಲ್ ಗಳನ್ನು ಹೊಂದಿದೆ. ಸ್ಪೋರ್ಟಿಂಗ್ ರೆಡ್, ಇನ್‌ಸ್ಟಾ ಬ್ಲೂ, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಮತ್ತು ಕೆಫೆ ವೈಟ್ ನಂತಹ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಪ್ರೀಮಿಯಂ ಡ್ಯುಯಲ್-ಟೋನ್ ಕ್ಯಾಬಿನ್ ವಿಶಾಲವಾದ ಜಾಗ, ರೇರ್ ಏಸಿ ವೆಂಟ್ ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಟಿಲ್ಟ್ & ಟೆಲಿಸ್ಕೋಪಿಕ್ ಸ್ಟೀರಿಂಗ್ ನೊಂದಿಗೆ ಹೆಚ್ಚಿನ ಚಾಲನಾ ಸೌಕರ್ಯವನ್ನು ಒದಗಿಸುತ್ತದೆ. ಆರು ಏರ್ ಬ್ಯಾಗ್ ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿ ಎಸ್ ಸಿ), ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ದೃಢವಾದ ಟೆಕ್ಟ್ (ಟಿಇಸಿಟಿ) ಬಾಡಿ ಸ್ಟ್ರಕ್ಚರ್ ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿರುವ ಗ್ಲಾಂಜಾ ಸುರಕ್ಷಿತ ಚಾಲನಾ ಅನುಭವವನ್ನು ಒದಗಿಸುತ್ತದೆ.