ಅತೀ ಸಣ್ಣ C+Pod ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಟೊಯೋಟಾ!

First Published | Dec 27, 2020, 3:38 PM IST

ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ಕಂಪನಿಗಳು ಕೂಡ ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟೊಯೋಟಾ ಅತೀ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಭಾರತ ಸೇರಿದಂತೆ ವಿಶ್ವದಲ್ಲಿ ಎಲೆಕ್ಟ್ರಿಕ್ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜನಪ್ರಿಯ ಆಟೋ ಕಂಪನಿಗಳು, ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ.
ವಿಶ್ವದ ಅತೀ ದೊಡ್ಡ ಕಾರು ತಯಾರಕ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಟೊಯೋಟಾ ಇದೀಗ ಅತಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿಗೆ C+Pod ಹೆಸರಿಡಲಾಗಿದೆ.
Tap to resize

ಅಲ್ಟ್ರಾ ಕಂಪಾಕ್ಟ್ ಎಲೆಕ್ಟ್ರಿಕ್ ವಾಹನವಾಗಿರುವ ಈ ಕಾರು 2 ಸೀಟು ಸಾಮರ್ಥ್ಯ ಹೊಂದಿದೆ. ನಗರ ಪ್ರದೇಶಗಳಿಗೆ ಈ ಕಾರು ಸೂಕ್ತವಾಗಿದ್ದು, ನಿರ್ವಹಣೆ ವೆಚ್ಚ ಹಾಗೂ ಖರ್ಚು ಕಡಿಮೆಯಾಗಲಿದೆ
C+Pod ಎಲೆಕ್ಟ್ರಿಕ್ ಕಾರು 2,490 mm ಉದ್ದ, 1,550 mm ಎತ್ತರ, 1,290 mm ಅಗಲ ಹೊಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ನ್ಯಾನೋ ಕಾರಿಗಿಂತ ಚಿಕ್ಕದು, ಭಾರತದಲ್ಲಿ ಲಭ್ಯವಿದ್ದ ರೇವಾ ಎಲೆಕ್ಟ್ರಿಕ್ ಕಾರಿಗಿಂತ ಕೊಂಚ ದೊಡ್ದದು.
C+Pod ಎಲೆಕ್ಟ್ರಿಕ್ ಕಾರಿನಲ್ಲಿ 2 ವೇರಿಯೆಂಟ್ ಲಭ್ಯವಿದೆ. X ಹಾಗೂ G. ಇದರಲ್ಲಿ X ವೇರಿಯೆಂಟ್ ಬೆಲೆ ಭಾರತೀಯ ರೂಪಾಯಿಗಳಲ್ಲಿ 11.75 ಲಕ್ಷ ರೂಪಾಯಿ.
ಇನ್ನು ಎರಡನೇ ವೇರಿಯೆಂಟ್ G ಕಾರಿನ ಬೆಲೆ ಭಾರತೀಯ ರೂಪಾಯಿಗಳಲ್ಲಿ 12.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಂದಿದೆ. ಸದ್ಯ ಬಿಡುಗಡೆಯಾಗಿರುವ ಕಾರು 2022ರಿಂದ ಪ್ರೊಡಕ್ಷನ್ ಹಾಗೂ ವಿತರಣೆ ಆರಂಭಿಸಲಿದೆ.
ಜಪಾನ್‌ನಲ್ಲಿ ಬಿಡುಗಡೆಯಾಗಿರುವ ಈ ಕಾರು ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದರ ಭಾರತದಲ್ಲಿ ಈ ಕಾರು ನಿರ್ಮಾಣ ಮಾಡಿ ಬಿಡುಗಡೆ ಮಾಡಿದರೆ, ಇದರ ಬೆಲೆ ಕಡಿಮೆಯಾಗಲಿದೆ.
ಸದ್ಯ ಭಾರತದಲ್ಲಿ ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್, ಎಂಜಿ ಮೋಟಾರ್ಸ್ ZS, ಹ್ಯುಂಡೈ ಕೋನಾ ಕಾರುಗಳು ಲಭ್ಯವಿದೆ. ಇದರಲ್ಲಿ ನೆಕ್ಸಾನ್ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

Latest Videos

click me!