ಅಮೆರಿಕ ಟೆಸ್ಲಾ ಎಲೆಕ್ಟ್ರಿಕ್ ಕಾರು ವಿಶ್ವದಲ್ಲೇ ಅತ್ಯಂತ ಜನಪ್ರಿಯ ಕಾರಾಗಿದೆ. ಅತ್ಯುತ್ತಮ ಮೈಲೇಜ್ ರೇಂಜ್, ಆರಾಮದಾಯಕ ಪ್ರಯಾಣ, ಉತ್ತಮ ಗುಣಟ್ಟ ಸೇರಿದಂತೆ ಹಲವು ಕಾರಣಗಳಿಂದ ಟೆಸ್ಲಾ ಕಾರುಗಳಿಗೆ ಬೇಡಿಕೆ ಹೆಚ್ಚಿದೆ.
2015ರಿಂದ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಯಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. 2018ರ ವೇಳೆ ಟೆಸ್ಲಾ ಸಿಇಓ ಎಲನ್ ಮಸ್ಕ್ ಕೂಡ ಟ್ವೀಟ್ ಮೂಲಕ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ಮಾಹಿತಿ ನೀಡಿದ್ದರು.
ಆದರೆ 2020ರ ಅಂತ್ಯವಾಗುತ್ತಿದ್ದರೂ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಇದರ ನಡುವೆ ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿತು.
ಟೆಸ್ಲಾ ಸೇರಿದಂತೆ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬೆಂಗಳೂರಿನ ಪ್ರವೈಗ್ ಸ್ಟಾರ್ಟ್ ಅಪ್ ಕಂಪನಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆಗೆ ಮುಂದಾಗಿದೆ
ಪ್ರವೈಗ್ ಒಂದು ಬಾರಿ ಚಾರ್ಜ್ ಮಾಡಿದರೆ 504 ಕಿ.ಮೀ ಪ್ರಯಾಣ ಮಾಡಬುಹುದು. ಹೀಗಾಗಿ ಪ್ರವೈಗ್ ಕಾರನ್ನು ಭಾರತದ ಟೆಸ್ಲಾ ಎಂದೇ ಕರೆಯಲಾಗುತ್ತಿದೆ.
ಸದ್ಯ ರೋಡ್ ಟೆಸ್ಟ್ ಪೂರ್ಣಗೊಳಿಸಿರು ಪ್ರವೈಗ್ ಎಲೆಕ್ಟ್ರಿಕ್ ಕಾರು 2021ರ ನವೆಂಬರ್ ತಿಂಗಳೊಳಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಪ್ರವೈಗ್ ಕಾರಿಗಿಂತ ಮೊದಲು ಅಮೆರಿಕ ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.
ಟೆಸ್ಲಾದ ಜನಪ್ರಿಯ ಹಾಗೂ ಬಹು ಬೇಡಿಕೆಯ ಮಾಡೆಲ್ 3 ಕಾರನ್ನು 2021ರ ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಟೆಸ್ಲಾ ಮುಂದಾಗಿದೆ. ಈ ಕುರಿತು ಎಲನ್ ಮಸ್ಕ್ ಖಚಿತಪಡಿಸಿದ್ದಾರೆ.
ಮುಂದಿನ ತಿಂಗಳು ಅಂದರೆ, 2021ರ ಜನವರಿಯಿಂದ ಭಾರತದಲ್ಲಿ ಟೆಸ್ಲಾ ಮಾಡೆಲ್ 3 ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ಈ ಮೂಲಕ ಪ್ರವೈಗ್ ಕಾರಿಗಿಂತ ಮೊದಲು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಟೆಸ್ಲಾ ಮುಂದಾಗಿದೆ.
ಟೆಸ್ಲಾ ಮಾಡೆಲ್ 3 ಬೆಲೆ ಅಂದಾಜುು 40 ರಿಂದ 60 ಲಕ್ಷ ರೂಪಾಯಿ. ಇನ್ನು ಪ್ರವೈಗ್ ಕಾರಿನ ಬೆಲೆ ಬಹಿರಂಗವವಾಗಿಲ್ಲ. ಆದರೆ ಮೈಲೇಜ್ ಟೆಸ್ಲಾ ಕಾರು 507 ಕಿ.ಮೀ ನೀಡಿದರೆ ಕರ್ನಾಟಕದ ಪ್ರವೈಗ್ 504 ಕಿ.ಮೀ ನೀಡಲಿದೆ.