ಹೊಸ ವರ್ಷದಲ್ಲಿ ಕಾರು ದುಬಾರಿ; 8 ಕಂಪನಿಗಳಿಂದ ಬೆಲೆ ಏರಿಕೆ ಘೋಷಣೆ!

First Published Dec 22, 2020, 3:19 PM IST

ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ವರ್ಷಕ್ಕಿಂತ ತುಸು ಹೆಚ್ಚೇ ಉತ್ಸುಕರಾಗಿದ್ದಾರೆ. ಕಾರಣ 2020 ಬಹುತೇಕರಿಗೆ ಸಂಕಷ್ಟದ ಮೇಲೆ ಸಂಕಷ್ಟ ಕೊಟ್ಟ ವರ್ಷವಾಗಿದೆ. 2021ರ ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸಲು ಹಲವರು ಸಜ್ಜಾಗಿದ್ದಾರೆ. ಆದರೆ 2021ರಲ್ಲಿ ಕಾರು ಖರೀದಿ ದುಬಾರಿಯಾಗಲಿದೆ. ಕಾರಣ ಈಗಾಗಲೇ 8 ಕಾರು ಕಂಪನಿಗಳು ಬೆಲೆ ಏರಿಕೆ ಪ್ರಕಟಿಸಿದೆ. 

ಹೊಸ ವರ್ಷದ ಆರಂಭದಿಂದಲೇ ಕಾರುಗಳ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ ಹಲವರು ಈಗಲೇ ಕಾರು ಖರೀದಿಗೆ ಮುಂದಾಗಿದ್ದಾರೆ. ಜನವರಿಯಿಂದ ಮಾರುತಿ ಸೇರಿದಂತೆ ಪ್ರಮುಖ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದೆ.
undefined
20201ರ ಜನವರಿ 1 ರಿಂದ ಮಾರುತಿ ಸುಜುಕಿ ತನ್ನ ಕಾರುಗಳ ಮೇಲೆ ಬೆಲೆ ಏರಿಕೆ ಮಾಡಲು ಮುಂದಾಗಿದೆ. ಆಲ್ಟೋ ಹಾಗೂ ವ್ಯಾಗನ್ಆರ್ ಕಾರಿನ ಈಗಿನ ದರ ಹಾಗೂರ ಏರಿಕೆ ದರದಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಸಿಯಾಝ್, XL6 ಕಾರಿನ ಬೆಲೆ ಕೊಂಚ ದುಬಾರಿಯಾಗಲಿದೆ.
undefined
ಭಾರತದಲ್ಲಿ 2ನೇ ಅತೀ ದೊಡ್ಡ ಕಾರು ತಯಾರಿಕ ಕಂಪನಿಯಾಗಿರುವ ಹ್ಯುಂಡೈ ತನ್ನ ಎಲ್ಲಾ ಕಾರುಗಳ ಬೆಲೆ ಹೆಚ್ಚಿಸುತ್ತಿದೆ. ಜನವರಿ 1, 2020ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ.
undefined
ಸೆಲ್ಟೋಸ್, ಸೊನೆಟ್, ಕಾರ್ನಿವಲ್ ಸೇರಿದಂತೆ ಬಹುಬೇಡಿಕೆ ಕಾರು ಬಿಡುಗಡೆ ಮಾಡಿರುವ ಕಿಯಾ ಮೋಟಾರ್ಸ್, ಜನವರಿಯಿಂದ ಬೆಲೆ ಏರಿಕೆ ಮಾಡಲು ಮುಂದಾಗಿದೆ. ಆದರೆ ಕಂಪನಿ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
undefined
ಮಹೀಂದ್ರ ಥಾರ್ ಬಳಿಕ ಭಾರತದಲ್ಲಿ ಮಹೀಂದ್ರ ಬೇಡಿಕೆ ಹೆಚ್ಚಾಗಿದೆ. ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಅನಿವಾರ್ಯವಾಗಿ ಮಹೀಂದ್ರ ಕಾರುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದಿದೆ. ಜನವರಿಯಿಂದ ನೂತನ ದರ ಜಾರಿಯಾಗಲಿದೆ. ಆದರೆ ಬೆಲೆ ಏರಿಕೆ ಪ್ರಮಾಣ ಬಹಿರಂಗವಾಗಿಲ್ಲ.
undefined
ರೆನಾಲ್ಟ್ ಇಂಡಿಯಾ ಕೂಡ ಜನವರಿಯಿಂದ ಬೆಲೆ ಏರಿಕೆ ಮಾಡುತ್ತಿದೆ. ಗರಿಷ್ಠ 28,000 ರೂಪಾಯಿ ಹೆಚ್ಚಾಗಲಿದೆ ಎಂದು ಕಂಪನಿ ಹೇಳಿದೆ. ರೆನಾಲ್ಟ್ ಭಾರತದಲ್ಲಿ ಕ್ವಿಡ್, ಡಸ್ಟರ್ ಹಾಗೂ ಟ್ರೈಬರ್ ಕಾರು ಮಾರಾಟ ಮಾಡುತ್ತಿದೆ.
undefined
ಹೆಕ್ಟರ್, ಗ್ಲೋಸ್ಟರ್ ಕಾರಿನ ಮೂಲಕ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಎಂಜಿ ಮೋಟಾರ್ಸ್ ಜನವರಯಿಂದ ತನ್ನ ಎಲ್ಲಾ ಕಾರುಗಳ ಮೇಲೆ ಬೆಲೆ ಹೆಚ್ಚಿಸುತ್ತಿದೆ.
undefined
ಕಚ್ಚಾ ವಸ್ತು, ಕಾರಿನ ಬಿಡಿ ಭಾಗ ಸೇರಿದಂತೆ ಎಲ್ಲಾ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಹೊಂಡಾ ಕೂಡ ಭಾರತದಲ್ಲಿ ತನ್ನ ಎಲ್ಲಾ ಕಾರುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದೆ.
undefined
ಫೋರ್ಡ್ ಇಂಡಿಯಾ ಭಾರತದಲ್ಲಿ ಗರಿಷ್ಠ 3% ಬೆಲೆ ಏರಿಕೆ ಮಾಡಲು ಮುಂದಾಗಿದೆ. ಹೀಗಾದಲ್ಲಿ ಫೋರ್ಡ್ ಕಾರುಗಳ ಬೆಲೆ 5,000 ರೂಪಾಯಿಂದ 35,000 ರೂಪಾಯಿ ವರೆಗೆ ಹೆಚ್ಚಾಗಲಿದೆ.
undefined
ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬೆಲೆ ಏರಿಕೆ ಮಾಡಿದೆ. ಇದರ ಜೊತೆಗೆ ಹಲವು ಆಟೋಮೊಬೈಲ್ ಕಂಪನಿಗಳು ಕೂಡ ಬೆಲೆ ಏರಿಕೆ ಮಾಡಲು ಮುಂದಾಗಿದೆ.
undefined
click me!