ತಂಬಾಕು ಉದ್ಯಮಿಯ ಕೆಕೆ ಮಿಶ್ರಾ ಎಲ್ಲಾ ವಾಹನ ನಂಬರ್ 4018, ಏನಿದರ ಸೀಕ್ರೆಟ್!

First Published Mar 4, 2024, 4:44 PM IST

ಉತ್ತರ ಪ್ರದೇಶದ ಅತೀ ದೊಡ್ಡ ತಂಬಾಕು ಉದ್ಯಮಿ ಕೆಕೆ ಮಿಶ್ರಾ ಮನೆ, ಕಚೇರಿ ಸೇರಿದಂತ 20 ಕಡೆ ಐಟಿ ದಾಳಿ ನಡೆಸಿದೆ. 100 ರಿಂದ 150 ಕೋಟಿ ರೂಪಾಯಿ ವ್ಯವಾಹರದ ಕಂಪನಿ ಮೇಲಿನ ಐಟಿ ದಾಳಿಯಿಂದ ಕೆಲ ರೋಚಕ ಮಾಹಿತಿ ಹೊರಬಿದ್ದಿದೆ. ಕೆಕೆ ಮಿಶ್ರಾ ಬಳಿಕ ದುಬಾರಿ ಕಾರುಗಳಿಗೆ ಲೆಕ್ಕವೇ ಇಲ್ಲ. ಎಲ್ಲಾ ಕಾರು ವಾಹನಗಳ ನಂಬರ್ ಮಾತ್ರ 4018. ಇದರ ಹಿಂದಿ ಸೀಕ್ರೆಟ್ ಕೂಡ ಬಯಲಾಗಿದೆ.

ಬನ್ಶೀಧರ್ ತಂಬಾಕು ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥ, ತಂಬಾಕು ಉದ್ಯಮಿ ಎಂದೇ ಜನಪ್ರಿಯವಾಗಿರುವ ಕೆಕೆ ಮಿಶ್ರಾ ಕಚೇರಿ, ಮನೆ ಮೇಲೆ ಐಟಿ ದಾಳಿಯಾಗಿದೆ. 20 ರಿಂದ 30 ಕೋಟಿ ಆದಾಯ ತೋರಿಸಿದ ಕಂಪನಿ, ರಹಸ್ಯವಾಗಿ 100 ರಿಂದ 150 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಕಾನ್ಪುರ, ದೆಹಲಿ, ಮುಂಬೈ, ಗುಜರಾತ್ ಸೇರಿದಂತೆ 20 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 7 ಕೋಟಿಗೂ ಅಧಿಕ ನಗದು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಕೆಕೆ ಮಿಶ್ರಾ ಬಂಗಲೆಯಲ್ಲಿ ಕೋಟಿ ಕೋಟಿ ಮೌಲ್ಯದ ದುಬಾರಿ ಕಾರುಗಳು ಪತ್ತೆಯಾಗಿದೆ.

ಕೆಕೆ ಮಿಶ್ರಾ ಬಂಗಲೆಯಲ್ಲಿ ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ ಸೇರಿದಂತೆ ಐಷಾರಾಮಿ ಹಾಗೂ ಅತೀ ದುಬಾರಿ ಕಾರುಗಳಿವೆ. ದುಬಾರಿ ಬೈಕ್‌ಗಳಿವೆ. ಈ ಎಲ್ಲಾ ವಾಹನಗಳ ರಿಜಿಸ್ಟ್ರೇಶನ್ ನಂಬರ್ 4018. 
 

ತಮ್ಮ ವಾಹನ ಪಾರ್ಕಿಂಗ್‌ನಲ್ಲಿ ಅತ್ಯಂತ ಹಳೇ ಬಜಾಜ್ ಚೇತಕ್ ಸ್ಕೂಟರ್ ಕೂಡ. ಅತ್ಯುತ್ತಮವಾಗಿ ನಿರ್ವಹಣೆ ಮಾಡಿ ಹೊಸ ಸ್ಕೂಟರ್ ರೀತಿ ಇಡಲಾಗಿದೆ. ಈ ಸ್ಕೂಟರ್ ನಂಬರ್ ಕೂಡ 4018. ಐಟಿ ದಾಳಿಯಿಂದ ಇದೀಗ ಕೆಕೆ ಮಿಶ್ರಾ ಅವರ ಎಲ್ಲಾ ವಾಹನಗಳ ನಂಬರ್ 4018 ಯಾಕೆ ಅನ್ನೋದು ಬಯಲಾಗಿದೆ.

ಕೆಕೆ ಮಿಶ್ರಾ ಉದ್ಯಮ ಆರಂಭಿಸಿದ್ದು ತಮ್ಮ ಬಜಾಜ್ ಸ್ಕೂಟರ್ ಮೂಲಕ. ಆದರೆ ಹಂತ ಹಂತವಾಗಿ ಉದ್ಯಮ ಬೆಳೆದು ಹಲವು ರಾಜ್ಯಗಳಿಗೆ ವಿಸ್ತರಿಸಿತು. ಬಂಗಲೆ, ಕಚೇರಿ, ಆಸ್ತಿಗಳು ದುಪ್ಟಟ್ಟಾಯಿತು. ಐಷಾರಾಮಿ ಕಾರುಗಳು ಆಗಮಿಸಿತು. ತಮ್ಮ ಬಜಾಜ್ ಸ್ಕೂಟರ್ ಖರೀದಿಸಿದಾಗ ಆರ್‌ಟಿಒ ಕಚೇರಿ ನೀಡಿದ ನಂಬರ್ 4018.

ಕೆಕೆ ಮಿಶ್ರಾ ಬಳಿ ಯಾವುದೇ ಆಸ್ತಿ, ಅಂತಸ್ತು, ಉದ್ಯಮ ಇಲ್ಲದಿದ್ದಾಗ, ಇದೇ ಸ್ಕೂಟರ್ ಮೂಲಕವೇ ಓಡಾಡುತ್ತಿದ್ದರು. ಬಳಿಕ ಇದೇ ಸ್ಕೂಟರ್ ಮೂಲಕವೇ ಉದ್ಯಮ ಬೆಳೆಸಿದರು.
 

ಈ ಬಜಾಜ್ ಸ್ಕೂಟರ್ ತಮ್ಮ ಅದೃಷ್ಟ. ಹೀಗಾಗಿ ಈ ಸ್ಕೂಟರ್‌ನ್ನೇ ಅದೇ ರೀತಿ ಹೊಚ್ಚ ಹೊಸದಾಗಿ ಇಡಲಾಗಿದೆ. ಬಳಿಕ ತಾವು ಖರೀದಿಸಿದ ಎಲ್ಲಾ ವಾಹನಗಳಿಗೆ 4018 ನಂಬರ್ ಖರೀದಿಸಿದ್ದಾರೆ. ಲಕ್ಷ ಲಕ್ಷ ರೂಪಾಯಿ ನೀಡಿ ಆರ್‌ಟಿಒ ಕಚೇರಿಯಿಂದ ಈ ನಂಬರ್ ಖರೀದಿಸಿದ್ದಾರೆ. 
 

ಕೆಕೆ ಮಿಶ್ರಾ ಬಳಿ 2.5 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ವಾಚ್, ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಐಷಾರಾಮಿ ವಸ್ತುಗಳು ಈ ಉದ್ಯಮಿ ಬಳಿ ಇದೆ.
 

click me!