ಕಾರು ಹೊತ್ತಿ ಉರಿಯಲು ಇದೆ 3 ಸಾಮಾನ್ಯ ಕಾರಣ, ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ!

First Published | Sep 21, 2023, 11:31 AM IST

ಕಾರು ಬೆಂಕಿಗೆ ಆಹುತಿಯಾಗುವ ಪ್ರಕರಣ ದೇಶದ ಹಲೆವೆಡೆ ದಾಖಲಾಗುತ್ತಿದೆ. ಈ ಕುರಿತು ತನಿಖೆ ನಡೆಸಿರುವ ಅಧಿಕಾರಿಗಳ ಮಹತ್ವದ ವರದಿ ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಹಿಂದೆ 3 ಸಾಮಾನ್ಯ ಕಾರಣ ಪತ್ತೆಯಾಗಿದೆ. ಈ ಸಾಮಾನ್ಯ ಕಾರಣ ನಿಮ್ಮ ಕಾರಿನಲ್ಲೂ ಇದೆಯಾ ಈಗಲೇ ಚೆಕ್ ಮಾಡಿ.

ಕಾರಿಗೆ ಬೆಂಕಿ ಹೊತ್ತಿಕೊಳ್ಳುವ, ಚಲಿಸುತ್ತಿರುವ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆಗಳು ದೇಶದ ಮೂಲೆ ಮೂಲೆಯಲ್ಲಿ ದಾಖಲಾಗಿದೆ. ಹಲವರು ಈಗಾಗಲೇ ಹಲವರು ಬೆಂಕಿಗೆ ಆಹುತಿಯಾಗಿದ್ದಾರೆ.

ಪದೇ ಪದೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಕೇರಳದಲ್ಲಿ ತುಸು ಹೆಚ್ಚು. ಹೀಗಾಗಿ ತನಿಖಾಧಿಕಾರಿಗಳ ತಂಡ ಈ ಕುರಿತು ಅಧ್ಯಯನ ನಡೆಸಿ ಮಹತ್ವದ ವರದಿ ಬಹಿರಂಗಪಡಿಸಿದ್ದಾರೆ. ಒಟ್ಟು 207 ಕಾರುಗಳು ಬೆಂಕಿಗೆ ಆಹುತಿಯಾದ ಪ್ರಕರಣದ ತನಿಖೆ ನಡೆಸಿದ್ದಾರೆ.

Tap to resize

ಕಾರು ಬೆಂಕಿಗೆ ಆಹುತಿಯಾಗಲು 3 ಸಾಮಾನ್ಯ ಕಾರಣಗಳನ್ನು ತನಿಖಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಇದರಲ್ಲಿ ಮೊದಲ ಕಾರಣ ಕಾರಿನ ಮಾಡಿಫಿಕೇಶನ್. ಹಲವರು ಬೇಸ್ ಮಾಡೆಲ್ ಕಾರು ಖರೀದಿಸಿ, ಅಧಿಕೃತ ಡೀಲರ್ ಬಿಟ್ಟು ಹೊರಭಾಗದ ಶಾಪ್‌ಗಳಲ್ಲಿ ಮಾಡಿಫಿಕೇಶನ್ ಮಾಡಿಸುತ್ತಾರೆ.

ಶೋ ರೂಂಗಿಂತ ಕಡಿಮೆ ಬೆಲೆಯಲ್ಲಿ ಕಾರಿಗೆ ಬೇಕಾದ ಆಕ್ಸಸರಿ ಹಾಕಲಾಗುತ್ತದೆ. ಕಾರಿನ ವೈಯರಿಂಗ್ ಕಟ್ ಮಾಡಿ ಹೆಚ್ಚುವರಿ ಲೈಟ್, ಇಂಟಿರೀಯರ್, ಸಿಸ್ಟಮ್, ರೇರ್ ಎಸಿ ಸೇರಿದಂತೆ ಹಲವು ಆ್ಯಕ್ಸಸರಿ ಹಾಕಿ ಮಾಡಿಫೈಡ್ ಮಾಡಲಾಗುತ್ತದೆ. ಇದು ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಹಾಗೂ ಮೊದಲ ಕಾರಣವಾಗಿದೆ.

ಕಂಪನಿಯಿಂದ ಬರುವ ವೈಯರಿಂಗ್ ಕಟ್ ಮಾಡಿ ಮಾಡಿಫಿಕೇಶನ್ ಮಾಡುವಾಗ ಮಾಡುವ ವೈಯರಿಂಗ್‌ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅತೀ ಹೆಚ್ಚಿನ ಕಾರು ಹೊತ್ತಿ ಉರಿದ ಪ್ರಕರಣದಲ್ಲಿ ಇದೇ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ ಎಂದು ವರದಿ ಹೇಳುತ್ತಿದೆ.
 

ಕೇರಳದಲ್ಲಿ ಕಾರಿನಲ್ಲಿ ಇಂಧನ ಸಾಗಿಸುವುದು ಬೆಂಕಿ ಹೊತ್ತಿಕೊಳ್ಳಲು ಮತ್ತೊಂದು ಕಾರಣವಾಗಿದೆ. ಕೇರಳದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿರುವ ಕಾರಣ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಂದ ಪೆಟ್ರೋಲ್ ಸಾಗಿಸಲಾಗುತ್ತದೆ. ಇದರಿಂದಲೂ ಕೆಲ ಕಾರಿನ ಬೆಂಕಿ ಅಪಘಾತ ಪ್ರಕರಣಗಳು ದಾಖಲಾಗಿದೆ.

ಮೂರನೇ ಕಾರಣ ಎಂದರೆ ಕಾರು ನಿಲ್ಲಿಸದ ವೇಳೆ ಇಲಿ ಅಥವಾ ಇತರ ಕೆಲ ಜಂತುಗಳು ಇಂಧನ ಟ್ಯಾಂಕ್ ಪೈಪ್ ಸೇರಿದಂತೆ ಇತರ ಕೆಲ ವೈಯರ್‌ಗಳನ್ನು ಕಚ್ಚಿ ಹಾಳುಮಾಡುತ್ತಿದೆ. ಇದರಿಂದಲೂ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ತನಿಖಾ ವರದಿ ಹೇಳಿದೆ.
 

ಈ ಮೂರು ಕಾರಣಗಳು ಸಾಮಾನ್ಯ ಕಾರಣಗಳಾಗಿದೆ. ಹೀಗಾಗಿ ಈ ಕಾರಣಗಳು ನಿಮ್ಮ ಕಾರಿನಲ್ಲಿದ್ದರೆ ಅಧಿಕೃತ ಸರ್ವೀಸ್ ಸೆಂಟರ್‌ನಲ್ಲಿ ಕಾರನ್ನು ಪರಿಶೀಲಿಸುವುದು ಅತೀ ಅಗತ್ಯ.

Latest Videos

click me!