ಟೆಸ್ಲಾದ ಐಷಾರಾಮಿ ಟ್ರಕ್‌ನಲ್ಲಿ ಎಲಾನ್‌ ಮಸ್ಕ್‌ ಜತೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಪತ್ನಿ ಸವಾರಿ

First Published | Sep 19, 2023, 7:55 PM IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುನೈಟೆಡ್ ಸ್ಟೇಟ್ಸ್ ಪ್ರವಾಸದ ಸಮಯದಲ್ಲಿ ಟೆಸ್ಲಾ ಸಿಇಒ ಬಿಲಿಯನೇರ್ ಹಾಗೂ ಜಗತ್ತಿನ ನಂ. 1 ಶ್ರೀಮಂತ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ತಮ್ಮ ಯುನೈಟೆಡ್ ಸ್ಟೇಟ್ಸ್ ಪ್ರವಾಸದ ಸಮಯದಲ್ಲಿ ಟೆಸ್ಲಾ ಸಿಇಒ ಬಿಲಿಯನೇರ್ ಹಾಗೂ ಜಗತ್ತಿನ ನಂ. 1 ಶ್ರೀಮಂತ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಇಸ್ರೇಲಿ ಪ್ರಧಾನಿ ಮತ್ತು ಅವರ ಪತ್ನಿ ಸಾರಾ ನೆತನ್ಯಾಹು ನೆತನ್ಯಾಹು ಅವರನ್ನು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಟೆಸ್ಲಾ ಕಾರ್ಖಾನೆಯ ಪ್ರವಾಸಕ್ಕೆ ಎಲಾನ್‌ ಮಸ್ಕ್‌ ಕರೆದೊಯ್ದಿದ್ದು, ಅಲ್ಲಿ ಅವರು ಕಂಪನಿಯ ಬೆಳವಣಿಗೆಗಳು ಮತ್ತು ಹಲವಾರು ಮಾದರಿಗಳ ಅವಲೋಕನವನ್ನು ನೀಡಿದರು. ಕಾರ್ಖಾನೆಯ ಸುತ್ತಲೂ ಬ್ಯಾಟರಿ-ಎಲೆಕ್ಟ್ರಿಕ್ ಪೂರ್ಣ-ಗಾತ್ರದ ಪಿಕಪ್ ಟ್ರಕ್‌ನಲ್ಲಿ ಮೂವರು ಸವಾರಿ ಮಾಡಿದರು.

ಇಸ್ರೇಲ್ ಪ್ರಧಾನ ಮಂತ್ರಿಯ ಅಧಿಕೃತ X ಖಾತೆಯಲ್ಲಿ ಈ ಮೀಟಿಂಗ್‌ನ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. "ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಟೆಸ್ಲಾ ಸಿಇಒ, ಉದ್ಯಮಿ @ElonMusk ಜೊತೆಗೆ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ @ ಟೆಸ್ಲಾ ಮೋಟಾರ್ಸ್ ಸ್ಥಾವರಕ್ಕೆ ಪ್ರವಾಸ ಮಾಡಿದರು," ಎಂದು ಪೋಸ್ಟ್‌ ಮಾಡಲಾಗಿದೆ.

Latest Videos


ಹಾಗೂ, ''ಪ್ರಧಾನಿ ಮತ್ತು ಅವರ ಪತ್ನಿಗೆ ಎಲಾನ್‌ ಮಸ್ಕ್‌ ಕಂಪನಿಯ ಬೆಳವಣಿಗೆಗಳು ಮತ್ತು ವಿವಿಧ ಮಾಡೆಲ್‌ಗಳ  ಕುರಿತು ವಿವರಿಸಿದರು ಮತ್ತು ಸುಧಾರಿತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಅಸೆಂಬ್ಲಿ ಮಾರ್ಗವನ್ನು ವೀಕ್ಷಿಸಿದರು ಎಂದೂ ಮತ್ತೊಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. 
 

ಅಲ್ಲದೆ, ಇಸ್ರೇಲ್ ಪ್ರಧಾನಿ ಮತ್ತು ಅವರ ಪತ್ನಿ ಸಾರಾ ಅವರು ಇನ್ನೂ ಬಿಡುಗಡೆಯಾಗಬೇಕಿರುವ 'ಸೈಬರ್‌ಟ್ರಕ್' ಕಾರಿನಲ್ಲಿ ಸವಾರಿ ಮಾಡಿದರು. ಟೆಸ್ಲಾ 2019 ರಲ್ಲಿ ಸೈಬರ್‌ಟ್ರಕ್ ಅನ್ನು ಅನಾವರಣಗೊಳಿಸಿದ್ದು, ಇದು. ಫ್ಯೂಚರಿಸ್ಟಿಕ್-ಲುಕಿಂಗ್ ಟ್ರಕ್ ಅನ್ನು ರಾಕೆಟ್‌ಗಳಲ್ಲಿ ಬಳಸಲಾಗುವ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗುತ್ತದೆ. ಮತ್ತು ಎಲೆಕ್ಟ್ರಿಕ್ ವಾಹನವು ವಿಶಿಷ್ಟವಾದ, ಜಿಯೋಮೆಟ್ರಿಕ್‌ ವಿನ್ಯಾಸವನ್ನು ಹೊಂದಿದೆ.

ಟೆಸ್ಲಾ ವೆಬ್‌ಸೈಟ್ ಟ್ರಕ್ "ಸ್ಪೋರ್ಟ್ಸ್ ಕಾರ್‌ಗಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಟ್ರಕ್‌ಗಿಂತ ಉತ್ತಮ ಉಪಯುಕ್ತತೆ" ನೀಡುತ್ತದೆ ಎಂದೂ ಹೇಳುತ್ತದೆ.ಸೈಬರ್‌ಟ್ರಕ್, ಈ ವರ್ಷ ಲಾಂಛ್‌ ಆಗಲಿದೆ ಎಂದು ತಿಳಿದುಬಂದಿದ್ದು, ಇದು 250–500 ಮೈಲುಗಳು (400–800 ಕಿಮೀ) ಮತ್ತು 0 ರಿಂದ 60 ಮೈಲಿ ಸ್ಪೀಡ್‌ಗೆ ಹೋಗಲು ಕೇವಲ 2.9–6.5 ಸೆಕೆಂಡುಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.  

''ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ, ಎಲಾನ್ ಮಸ್ಕ್ ಅವರೊಂದಿಗೆ, ಇನ್ನೂ ಮಾರುಕಟ್ಟೆಯಲ್ಲಿಲ್ಲದ 'ಸೈಬರ್ ಟ್ರಕ್' ವಾಹನದಲ್ಲಿ ಸವಾರಿ ಮಾಡಿದರು’' ಎಂದು ಪೋಸ್ಟ್‌ನ ಶೀರ್ಷಿಕೆ ಹೇಳುತ್ತದೆ.

ಟೆಸ್ಲಾ 2019 ರಲ್ಲಿ ಸೈಬರ್‌ಟ್ರಕ್ ಅನ್ನು ಅನಾವರಣಗೊಳಿಸಿದ್ದು, ಇದು. ಫ್ಯೂಚರಿಸ್ಟಿಕ್-ಲುಕಿಂಗ್ ಟ್ರಕ್ ಅನ್ನು ರಾಕೆಟ್‌ಗಳಲ್ಲಿ ಬಳಸಲಾಗುವ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗುತ್ತದೆ. ಮತ್ತು ಎಲೆಕ್ಟ್ರಿಕ್ ವಾಹನವು ವಿಶಿಷ್ಟವಾದ, ಜಿಯೋಮೆಟ್ರಿಕ್‌ ವಿನ್ಯಾಸವನ್ನು ಹೊಂದಿದೆ. ಟೆಸ್ಲಾ ವೆಬ್‌ಸೈಟ್ ಟ್ರಕ್ "ಸ್ಪೋರ್ಟ್ಸ್ ಕಾರ್‌ಗಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಟ್ರಕ್‌ಗಿಂತ ಉತ್ತಮ ಉಪಯುಕ್ತತೆ" ನೀಡುತ್ತದೆ ಎಂದೂ ಹೇಳುತ್ತದೆ.

ಈ ಮಧ್ಯೆ, ಇಸ್ರೇಲ್‌ ಪ್ರಧಾನಿ ನೆತನ್ಯಾಹು ಕೃತಕ ಬುದ್ಧಿಮತ್ತೆಯ ಬಗ್ಗೆ ಟೆಕ್‌ ಉದ್ಯಮಿ ಎಲಾನ್‌ ಮಸ್ಕ್‌ ಜತೆ ಚರ್ಚಿಸಿದ್ದಾರೆ. ಎಲಾನ್ ಮಸ್ಕ್ ಮಾತ್ರವಲ್ಲದೆ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಅಮೆರಿಕ ಭೇಟಿಯ ಸಮಯದಲ್ಲಿ ಇತರ ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ.
 

click me!