ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ, ಹೊಚ್ಚ ಹೊಸ Nexon ev ಬಿಡುಗಡೆ ಮಾಡಿದೆ. ಡಿಜಿಟಲ್ ವಿನ್ಯಾಸ , ಭವಿಷ್ಯಾತ್ಮಕ, ತಂತ್ರಜ್ಞಾನ- ಪ್ರೇರಿತ ಚಾಲನೆ ಅನುಭವ; ಮತ್ತು ಗ್ಯಾಜೆಟ್‌ಗಳ ಮೂಲಕ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಿರುವ ಹೊಸ ಎಲೆಕ್ಟ್ರಿಕ್ ಕಾರು ಇದು. ಹೊಸ ಕಾರಿನ ಆರಂಭಿಕ ಬೆಲೆ 14.74 ಲಕ್ಷ ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 465ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.