ಚೀನಾ ಕಾರು ಖರೀದಿಸಿದ ಸಿಎಂ BSY ಕಾರ್ಯದರ್ಶಿ ರೇಣುಕಾಚಾರ್ಯ!

First Published Dec 11, 2020, 3:11 PM IST

ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಪರಿಕಲ್ಪನೆಗಳು ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ದೇಶದ ನಾಗರೀಕರು ಭಾರತದ ವಸ್ತುಗಳನ್ನೇ ಖರೀದಿಸಿ, ವೋಕಲ್ ಫಾರ್ ಲೋಕಲ್ ಅನ್ನೋ ಮೋದಿ ಘೋಷವಾಕ್ಯಗಳು ಸ್ವತಃ ಬಿಜೆಪಿಗರೇ ಪಾಲಿಸುತ್ತಿಲ್ಲ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ರೇಣುಕಾಚಾರ್ಯ, ಮೋದಿ ಪರಿಕಲ್ಪನೆಗಳನ್ನು ಗಾಳಿಗೆ ತೂರಿ ಚೀನಾ ಕಾರು ಖರೀದಿಸಿದ್ದಾರೆ.

ಸ್ವದೇಶಿ ವಸ್ತುಗಳ ಬಳಕೆ, ಸ್ವದೇಶಿ ಉತ್ಪನ್ನಕ್ಕೆ ಪ್ರೋತ್ಸಾಹ ಸೇರಿದಂತೆ ಆತ್ಮನಿರ್ಭರ್ ಭಾರತ್ ಯೋಜನೆ ಭಾರತದಲ್ಲಿ ಹೊಸ ಬದಲಾವಣೆ ತಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯ ಈ ಪರಿಕಲ್ಪನೆ ಸ್ವತ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
undefined
ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಿದ್ದಾರೆ. ಇತ್ತ ಪ್ರಧಾನಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡೋ ಮೂಲಕ ಹೊಸ ಭಾರತದ ಸಂಕಲ್ಪ ಮಾಡಿದ್ದರು. ಆದರೆ ಮೋದಿ ಈ ಪರಿಕಲ್ಪನೆಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗಾಳಿಗೆ ತೂರಿದ್ದಾರೆ.
undefined
ಆತ್ಮನಿರ್ಭರತೆ ಮಾತನಾಡುವ ಬಿಜೆಪಿ ನಾಯಕ ರೇಣುಕಾಚಾರ್ಯ, ಚೀನಾ ಖರೀದಿಸಿದ್ದಾರೆ. ಈ ಮೂಲಕ ರಾಜಕಾಣಿಗಳಿಗೆ ಯಾವುದೇ ಅನ್ವಯವಾಗುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಸಾಮಾಜಿಕ ಮಾಧ್ಯಮದಲ್ಲಿ ರೇಣುಕಾಚಾರ್ಯ ಹೊಸ ಕಾರು ಖರೀದಿ ಫೋಟೋಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
undefined
ಲಡಾಖ್ ಗಡಿ ತಂಟೆ, ಭಾರತೀಯ ಯೋಧರ ಮೇಲೆ ದಾಳಿಯಿಂದ ಚೀನಾ ವಿರುದ್ಧ ಭಾರತೀಯ ಆಕ್ರೋಶ ಹೆಚ್ಚಾಗಿದೆ. ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ರೇಣುಕಾಚಾರ್ಯ ಚೀನಾ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಜನರು ಕಮೆಂಟ್ ಮಾಡಿದ್ದಾರೆ.
undefined
ರೇಣಕಾಚಾರ್ಯ ಇತ್ತೀಚೆಗೆ ಹೊಚ್ಚ ಹೊಸ MG ಗ್ಲೋಸ್ಟರ್ 7 ಸೀಟರ್ ಕಾರು ಖರೀದಿಸಿದ್ದಾರೆ. ಇದು ಚೀನಾ ಮೂಲದ ಬ್ರಿಟೀಷ್ ಕಾರಾಗಿದೆ.
undefined
ಚೀನಾ ಮೂಲದ MG ಗ್ಲೋಸ್ಟರ್ ಕಾರಿನ ಆರಂಭಿಕ ಬೆಲೆ 29.98 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ರೇಣುಕಾಚಾರ್ಯ ಖರೀದಿಸಿದ ಕಾರಿನ ಅಂದಾಜು ಬೆಲೆ 35 ಲಕ್ಷ ರೂಪಾಯಿ.
undefined
MG ಗೋಸ್ಟರ್ ಕಾರು ಭಾರತದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಫೀಚರ್ಸ್ ಹೊಂದಿರುವ ಕಾರಾಗಿದೆ.
undefined
click me!