ಈಗ ಟೆಸ್ಲಾದ ಅತ್ಯಂತ ಕೈಗೆಟುಕುವ ಮಾಡೆಲ್ ಜರ್ಮನಿಯಲ್ಲಿ ಬಿಡುಗಡೆಯಾಗಲಿದೆ. ಬಳಿಕ, ಇದೇ ಮಾಡೆಲ್ ಕಾರು ಭಾರತದಲ್ಲೂ ಮಾರಾಟವಾಗಲಿದೆ ಎಂದು ವರದಿಗಳು ಹೇಳುತ್ತಿವೆ.
ಈ ಕಾರು ಟೆಸ್ಲಾದ ಅತ್ಯಂತ ಕೈಗೆಟುಕುವ ಕಾರು ಆಗಲಿದ್ದು, ಅದು ಯೂರೋಪ್‌ನಲ್ಲಿ ಬಿಡುಗಡೆಯಾಗಲಿದೆ, ನಂತರ ಭಾರತ. ಉತ್ಪನ್ನ ಅಭಿವೃದ್ಧಿ ಪ್ಲ್ಯಾನ್ ಇನ್ನೂ ನಡೆಯುತ್ತಿದ್ದರೂ ಇದು ಎರಡು-ಬಾಗಿಲಿನ ಎಸ್‌ಯುವಿ ಅಥವಾ ಸೆಡಾನ್ ಎಲೆಕ್ಟ್ರಿಕ್ ಕಾರು ಆಗಿರುತ್ತದೆ.
ಮಾಡೆಲ್ Y ಕ್ರಾಸ್ ಓವರ್ ಬಳಿಕ ಈ ಮಾದರಿಯ ಕಾರು ಬಿಡುಗಡೆಯಾದರೆ ಭಾರತದಲ್ಲಿ ಬಿಡುಗಡೆಯಾಗುವ ಎರಡನೇ ಮಾದರಿಯ ಕಾರು ಇದಾಗಲಿದೆ ಎಂದು ತಿಳಿದುಬಂದಿದೆ.
ಜರ್ಮನಿಯ ಬ್ರ್ಯಾಂಡೆನ್‌ಬರ್ಗ್‌ನಲ್ಲಿ ಗಿಗಾಫ್ಯಾಕ್ಟರಿಯನ್ನು ಸ್ಥಾಪಿಸಲು ಟೆಸ್ಲಾ 5 ಬಿಲಿಯನ್ ಯೂರೋ ಹೂಡಿಕೆ ಮಾಡಿದೆ. ಇದು ಯುರೋಪ್‌ನಲ್ಲಿ ಟೆಸ್ಲಾದ ಮೊದಲ ಫ್ಯಾಕ್ಟರಿಯಾಗಿದೆ. ಅಮೆರಿಕ ಆಧಾರಿತ ಇವಿ ತಯಾರಕರು ಆ ಸ್ಥಾವರದಿಂದ ಮಾಡೆಲ್ Y ಕ್ರಾಸ್‌ಒವರ್ ಅನ್ನು ಹೊರತರುತ್ತಾರೆ.
ಇದನ್ನು ವರ್ಷಕ್ಕೆ 1 ಮಿಲಿಯನ್ ಯೂನಿಟ್‌ಗಳಿಗೆ ವಿಸ್ತರಿಸಲಾಗುವುದು. ಬಳಿಕ ಕಂಪನಿಯು ಮಧ್ಯಮ ಅವಧಿಯಲ್ಲಿ ಈ ಫ್ಯಾಕ್ಟರಿಯಿಂದ 25,000 ಯೂರೋ ಮೌಲ್ಯದ ಕಾರನ್ನು ಹೊರತರಲು ಸಜ್ಜಾಗಲಿದೆ ಎಂದು ವರದಿಯಾಗಿದೆ.
ಸುಮಾರು 20 ಲಕ್ಷ ರೂ. ಮೌಲ್ಯಕ್ಕೆ ಈ ಕಾರು ಬಿಡುಗಡೆಯಾದ್ರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಮಾದರಿಯು ಗಣನೀಯ ಪ್ರಮಾಣದಲ್ಲಿ ಮಾರಾಟವಾಗಬಹುದು ಎಂದು ಕಂಪನಿ ನಿರೀಕ್ಷಿಸಿದೆ. ಇದು ಆರಂಭದಲ್ಲಿ ಜರ್ಮನಿಯಿಂದ ಆಮದಾಗಲಿದ್ದು, ಬಳಿಕ ಭಾರತದಲ್ಲಿ ಫ್ಯಾಕ್ಟರಿ ಆರಂಭವಾದ ಬಳಿಕ ದೇಶದಲ್ಲೇ ಉತ್ಪಾದನೆ ಮಾಡಲಾಗುವುದು ಎಂದೂ ತಿಳಿದುಬಂದಿದೆ.
ಭಾರತವು ಟೆಸ್ಲಾ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಇತ್ತೀಚೆಗೆ ವರದಿ ಮಾಡಿತ್ತು. ಅಮೆರಿಕ ಮೂಲದ ವಾಹನ ತಯಾರಕರು ಮುಂದಿನ ವರ್ಷದಿಂದ ದೇಶಕ್ಕೆ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ರವಾನಿಸಲು ಮತ್ತು ಎರಡು ವರ್ಷಗಳಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಪ್ಲ್ಯಾನ್ ಮಾಡ್ತಿದೆ.
ಜನವರಿ 2024 ರಲ್ಲಿ ನಡೆಯುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಘೋಷಣೆಯಾಗಬಹುದು. ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡನ್ನು ಪರಿಗಣಿಸಬಹುದು ಎಂದೂ ಹೇಳಲಾಗ್ತಿದೆ.