ಜೈಲು ಪಾಲಾದ ಸುಕೇಶ್ ರೋಲ್ಸ್ ರಾಯ್ಸ್ ಸೇರಿ ಐಷಾರಾಮಿ ಕಾರು ಹರಾಜು, ಕೇವಲ 2 ಲಕ್ಷ ರೂ!

First Published | Nov 23, 2023, 3:51 PM IST

200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದೀಗ ವಶಕ್ಕೆ ಪಡೆದಿರುವ ಐಷಾರಾಮಿ ಕಾರುಗಳನ್ನು ಹರಾಜು ಹಾಕಲಾಗುತ್ತಿದೆ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ಬ್ಯಾಂಬೋರ್ಗಿನಿ ಸೇರಿದಂತೆ ಕೋಟಿ ಕೋಟಿ ರೂಪಾಯಿ ಕಾರುಗಳು ಇದೀಗ 2.03 ಲಕ್ಷ ರೂ ಬೆಲೆಯಿಂದ ಖರೀದಿಗೆ ಲಭ್ಯವಿದೆ.

ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ವಂಚನ ಸುಕೇಶ್ ಚಂದ್ರಶೇಖರ್ ಬಹುತೇಕ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಸುಕೇಶ್ ಚಂದ್ರಶೇಖರ್ ತನ್ನ ಐಷಾರಾಮಿ ಜೀವನಕ್ಕೆ ಬಳಸಿದ್ದ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದೀಗ ಈ ಕಾರುಗಳ ಹರಾಜು ನಡೆಯಲಿದೆ.

ಸುಕೇಶ್ ಕಾರ್ಯನಿರ್ವಹಿಸುತ್ತಿದ್ದ ಕಚೇರಿ, ಮನೆ ಎಲ್ಲವೂ ಬೆಂಗಳೂರಿನಲ್ಲಿದೆ. ಹಲವು ಕಾರುಗಳನ್ನು ಬೆಂಗಳೂರಿನಲ್ಲಿ ಜಪ್ತಿ ಮಾಡಲಾಗಿದೆ. ಹೀಗಾಗಿ ನವೆಂಬರ್ 28 ರಂದು ಬೆಂಗಳೂರಿನಲ್ಲಿ ಸುಕೇಶ್ ಚಂದ್ರಶೇಖರ್ ಐಷಾರಾಮಿ ಕಾರುಗಳ ಹರಾಜು ನಡೆಯಲಿದೆ.  

Latest Videos


ಆಸ್ಟನ್ ಮಾರ್ಟಿನ್, ರೇಂಜ್ ರೋವರ್, ರೋಲ್ಸ್ ರಾಯ್ಸ್,  BMW M5, ಜಗ್ವಾರ್ XKR ಕೂಪ್, ಟೊಯೋಟಾ ಇನೋವಾ ಕ್ರಿಸ್ಟಾ, ನಿಸಾನ್ ಟೆನಾ, ಟೋಯೋಟಾ ಫಾರ್ಚುನರ್, ಬೆಂಟ್ಲಿ, ಲ್ಯಾಂಬೋರ್ಗಿನಿ, ಟೋಯೋಟಾ ಪ್ರಾಡೋ ಸೇರಿದಂತೆ ಕೆಲ ಐಷಾರಾಮಿ ಕಾರುಗಳು ಹರಾಜು ನಡೆಯಲಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಕಾರುಗಳನ್ನು ಜಪ್ತಿ ಮಾಡಿದ್ದರು. ಇದೀಗ ಹರಾಜು ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಸುಕೇಶ್ ಚಂದ್ರಶೇಖರ್ ಬಳಿ ಇರುವ ಐಷಾರಾಮಿ ಕಾರುಗಳ ಒಟ್ಟು ಮೌಲ್ಯ ಬರೋಬ್ಬರಿ 80 ಕೋಟಿ ರೂಪಾಯಿಗೂ ಅಧಿಕ.

ಕೋಟಿ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು ಕೇವಲ ಬೆಲೆ 2.03 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಹರಾಜು ನಡೆಯಲಿದೆ. ಅತೀ ಕಡಿಮೆ ಬೆಲೆಯಲ್ಲಿ ಐಷಾರಾಮಿ ಕಾರುಗಳು ಲಭ್ಯವಾಗಲಿದೆ.

ಸುಕೇಶ್ ಚಂದ್ರಶೇಖರ್ ಬಳಿಯಿಂದ ಜಪ್ತಿ ಮಾಡಿದ ಐಷಾರಾಮಿ ಕಾರು ಸೇರಿದಂತೆ ಇತರ ಆಸ್ತಿಗಳ ಹರಾಜು ಮೂಲಕ ಹಣ ವಸೂಲಿ ಮಾಡಲು ತನಿಖಾ ಸಂಸ್ಥೆಗಳು, ಆದಾಯ ಇಲಾಖೆ ಮುಂದಾಗಿದೆ. ಬರೋಬ್ಬರಿ 308.48 ಕೋಟಿ ರೂಪಾಯಿ ವಸೂಲಿಗೆ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.

ಉದ್ಯಮಿ ಶಿವೇಂದರ್‌ ಸಿಂಗ್‌ರನ್ನು ಜಾಮೀನಿನ ಮೇಲೆ ಬಿಡಿಸಲು ವಂಚಕ ಸುಕೇಶ್‌ ಚಂದ್ರಶೇಖರ್‌, ಶಿವೇಂದರ್ ಪತ್ನಿ ಅದಿತಿಗೆ ದೂರವಾಣಿ ಕರೆ ಮಾಡಿ, ತಾನು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ. 200 ಕೋಟಿ ರು. ಕೊಟ್ಟರೆ ನಿಮ್ಮ ಪತಿಗೆ ಜಾಮೀನು ಕೊಡಿಸಲು ನೆರವಾಗುವುದಾಗಿ ನಂಬಿಸಿದ್ದ.

30 ಕಂತುಗಳಲ್ಲಿ 200 ಕೋಟಿ ರು.ಹಣವನ್ನು ದೆಹಲಿಯ ಹಲವು ಭಾಗದಲ್ಲಿ ಪಡೆದಿದ್ದು. ಇದು ಜೈಲಿನೊಳಗಿದ್ದುಕೊಂಡು ನಡೆಸಿದ ಸುಲಿಗೆ. ಇನ್ನು ಬಂಧನಕ್ಕೂ ಮೊದಲು ಸುಕೇಶ್ ಭಾರಿ ವಂಚನೆ ನಡೆಸಿರುವ ಮಾಹಿತಿಗಳು ಹೊರಬಿದ್ದಿದೆ.
 

click me!