ಐಷಾರಾಮಿ ಕಾರಿಗೆ ಲೆಕ್ಕವೇ ಇಲ್ಲ,ಪಂಜಾಬಿ ಉದ್ಯಮಿ ಬಳಿ ಇದೆ ಒಟ್ಟು 200 ಕೋಟಿ ಮೌಲ್ಯದ ವಾಹನ!

First Published Nov 21, 2023, 5:22 PM IST

ಪಂಜಾಬಿ ಮೂಲದ ಉದ್ಯಮಿ ಪೀಟರ್ ವೀರ್‌ದೇ. ಲಂಡನ್‌ನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಪೀಟರ್ ಬಳಿ ಇರುವ ಐಷಾರಾಮಿ ಕಾರುಗಳಿಗೆ ಲೆಕ್ಕವೇ ಇಲ್ಲ. 5 ರೋಲ್ಸ್ ರಾಯ್ಸ್, 2 ಬುಗಾಟಿ, ಫೆರಾರಿ, ರೇಂಜ್ ರೋವರ್ ಸೇರಿದಂತೆ ಕೋಟಿ ಕೋಟಿ ರೂಪಾಯಿ ಕಾರುಗಳೇ ಮನೆಯಲ್ಲಿ ತುಂಬಿಕೊಂಡಿದೆ. ಈ ಪಂಜಾಬಿಯ ಕಾರು ಸಂಗ್ರಹ ಸಂಪೂರ್ಣ ವಿವರ ಇಲ್ಲಿದೆ.

ಉದ್ಯಮಿಗಳು, ಶ್ರೀಮಂತರು, ಸೆಲೆಬ್ರೆಟಿಗಳಲ್ಲಿ ಐಷಾರಾಮಿ ಕಾರು ಸಂಗ್ರಹ ಹೆಚ್ಚೇ ಇರುತ್ತದೆ. ವಿವಿಧ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸಿ ಬಳಕೆ ಮಾಡುತ್ತಾರೆ. ಆದರೆ ಈ ಪಂಜಾಬಿ ಉದ್ಯಮಿ ಬಳಿ ಒಂದೆರೆಡಲ್ಲ, 25 ಕ್ಕೂ ಹೆಚ್ಚು ಐಷಾರಾಮಿ ವಾಹನಗಳಿವೆ.

ಪಂಜಾಬ್ ಮೂಲದ ಲಂಡನ್ ಉದ್ಯಮಿ ಪೀಟರ್ ವೀರ್‌ದೇ ತಮ್ಮ ಶ್ರೀಮಂತಿಕೆ, ಉದ್ಯಮ ಸಾಮ್ರಾಜ್ಯದ ಜೊತೆ ಕಾರು ಸಂಗ್ರಹದಿಂದಲೂ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ಪೀಟರ್ ಬಳಿ 5 ರೋಲ್ಸ್ ರಾಯ್ಸ್, 2 ಬುಗಾಟಿ ವೆಯ್ರಾನ್ಸ್, ಫೆರಾರಿ ಎನ್ಜೋ, ನಾಲ್ಕು ರೇಂಜ್ ರೋವರ್, ಮರ್ಸಡಿಸ್ ಬೆಂಜ್ ಸೇರಿದಂತೆ ಹಲವು ಐಷಾರಾಮಿ   ಹಾಗೂ ವಿಂಟೇಜ್ ಕಾರುಗಳನ್ನು ಹೊಂದಿದ್ದಾರೆ.

ರೋಲ್ಸ್ ರಾಯ್ಸ್ ಫಾಂಟಮ್ ಡ್ರಾಪ್ಡ್ ಕೂಪ್, ರೋಲ್ಸ್ ರಾಯ್ಸ್ ಕಲ್ಲಿನಾನ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಸೇರಿಂತೆ ರೋಲ್ಸ್ ರಾಯ್ಸ್ 5 ಮಾಡೆಲ್ ಕಾರುಗಳು ಮಾಲೀಕ ಈ ಪೀಟರ್.

ಲಂಡನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಇತರ ಹಲವು ಉದ್ಯಮಗಳಲ್ಲಿ ಪೀಟರ್ ವೀರ್‌ದೇ ತೊಡಗಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪೀಟರ್ ಉದ್ಯಮಿಗಳು ಭಾರಿ ಆದಾಯಗಳಿಸುತ್ತಿದೆ.
 

2 ವರ್ಷಗಳ ಹಿಂದೆ ಪೀಟರ್ ವೀರ್‌ದೇಗೆ ಯುಕೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ತೆರಿಗೆ ವಂಚನೆ ಪ್ರಕರಣದಲ್ಲಿ ಪೀಟರ್ ವಿರುದ್ಧ ಕೋರ್ಟ್ ತೀರ್ಪು ನೀಡಿತ್ತು. ದುಬಾರಿ ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಿದ್ದಾರೆ.

ಪೀಟರ್ ಬಳಿ ಇರುವ ಬುಗಾಯಿ ವೆಯ್ರಾನ್ ಕಾರುಗಳ ಬೆಲೆ 12 ಕೋಟಿ ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಆನ್ ರೋಡ್ ಬೆಲೆ ಸರಿಸುಮಾರು 15 ರಿಂದ 20 ಕೋಟಿ. ಇನ್ನು ರೋಲ್ಸ್ ರಾಯ್ಸ್ ಕಾರಿನ ಬೆಲೆ 6 ಕೋಟಿ ರೂಪಾಯಿಂದ ಆರಂಭಗೊಳ್ಳುತ್ತದೆ.ಆನ್ ರೋಡ್ ಬೆಲೆ 10 ರಿಂದ 15 ಕೋಟಿ.
 

ಪೀಟರ್ ಜೆ ಹಲವು ಬಾರಿ ಖಾಸಗಿ ಜೆಟ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಬೇಸಿಕ್ ಮಾಡೆಲ್ ಖಾಸಗಿ ಜೆಟ್‌ ಬೆಲೆ ಸರಿಸುಮಾರು 98 ಕೋಟಿ ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಪೀಟರ್ ಬಳಿ ಇರುವ ಒಟ್ಟು ಕಾರುಗಳ ಮೌಲ್ಯ ಸರಿಸುಮಾರು 200 ಕೋಟಿ ರೂಪಾಯಿಗೂ ಅದಿಕವಾಗಲಿದೆ. 

click me!