ಕರ್ವ್.ಇವಿ ಎಲೆಕ್ಟ್ರಿಕ್, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಕರ್ವ್ ಕಾರುಗಳನ್ನು ಮುಂಬೈನ ಮ್ಯಾರೆಯೆಟ್ ಹೋಟೆಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ. ಎಸ್‌ಯುವಿಯ ದೃಢತೆ ಮತ್ತು ಕೂಪೆ ಸೊಬಗಿನ ಮಿಶ್ರಣವಾಗಿರುವ ಈ ಹೊಸ ವಾಹನವು ಟಾಟಾ ಮೋಟಾರ್ಸ್‌ನ ಎಸ್‌ಯುವಿ ಶ್ರೇಣಿಗೆ ಹೊಸ ಸೇರ್ಪಡೆಯಾಗಿದೆ. ಎಸ್‌ಯುವಿತ ಸಾಂಪ್ರದಾಯಿಕ ಸ್ಟೈಲ್ ಬಿಟ್ಟು ವಿಶಿಷ್ಟ ದೇಹ ಶೈಲಿಯ ಭಾರತದ ಮೊದಲ ಎಸ್‌ಯುವಿ ಕೂಪೆ ಅನ್ನು ದೇಶಕ್ಕೆ ಪರಿಚಯಿಸಿದ ಮೊದಲ ಓಇಎಂ (ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್) ಎಂಬ ಹೆಗ್ಗಳಿಕೆಯನ್ನು ಟಾಟಾ ಮೋಟಾರ್ಸ್ ಕಂಪನಿ ತನ್ನ ಮುಡಿಗೇರಿಸಿಕೊಂಡಿದೆ. ಕರ್ವ್.ಇವಿ ಬೆನ್ನಲ್ಲೇ ಶೀಘ್ರವಾಗಿ ಐಸಿಇ ಆವೃತ್ತಿಗಳು ಬಿಡುಗಡೆ ಆಗಲಿವೆ. ಟಾಟಾ ಕರ್ವ್.ಇವಿ ₹17.49 ಲಕ್ಷವಿದ್ದು, ಆ.12ರಿಂದ ಬುಕಿಂಗ್ ಆರಂಭವಾಗಲಿದೆ. ಇದರ ಡೆಲಿವರಿ ಆ.23ರಿಂದ ಆರಂಭವಾಗಲಿದೆ. ಟಾಟಾ ಕರ್ವ್ ಎಸ್‌ಯುವಿ ಕೂಪೆ ಬೆಲೆಯನ್ನು ಸೆ.12ರಂದು ಘೋಷಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಕರ್ವ್.ಇವಿ 45 ಕಿಲೋವ್ಯಾಟ್ ಹಾಗೂ 55 ಕಿಲೋವ್ಯಾಟ್ ಬ್ಯಾಟರಿ ಬ್ಯಾಟರಿ ಹೊಂದಿದೆ. 45 ಕಿಲೋ ವ್ಯಾಟ್ ಬ್ಯಾಟರಿ ಕಾರು 506 ಕಿ.ಮೀ. 55 ಕಿಲೋವ್ಯಾಟ್ 585 ಕಿ.ಮೀ ರೇಂಜ್ ಹೊಂದಿದೆ. ಕೇವಲ 40 ನಿಮಿಷಗಳಲ್ಲಿ ಶೇ.10 - 80ವರೆಗೆ ಅಥವಾ ಕೇವಲ 15 ನಿಮಿಷಗಳಲ್ಲಿ 150 ಕಿ.ಮೀ. ವರೆಗೆ ಹೋಗುವಷ್ಟು (70 ಕಿಲೋವ್ಯಾಟ್ ಚಾರ್ಜರ್‌ನಲ್ಲಿ) ಜಾರ್ಜ್ ಮಾಡಬಹುದಾಗಿದೆ.
ಸ್ಮಾರ್ಟ್ ಚಾರ್ಜಿಂಗ್ ಅನಿಮೇಷನ್, ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್‌ಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್ಸ್, ಎಲೆಕ್ಟ್ರಿಕ್ ಫ್ರಂಟ್ ಚಾರ್ಜಿಂಗ್ ಲಿಡ್ ಜೊತೆಗೆ ಆಟೋ ಓಪನ್/ಕ್ಲೋಸಿಂಗ್, ಡಿಜಿಟಲ್ ಡ್ಯಾಶ್‌ಬೋರ್ಡ್, ಫಿಜಿಟಲ್ ಕಂಟ್ರೋಲ್ ಪ್ಯಾನಲ್, ಮೂಡ್ ಲೈಟಿಂಗ್ ಜೊತೆಗೆ ವಾಯ್ಸ್ ಅಸಿಸ್ಟೆಡ್ ಪ್ಯಾನೋರಮಿಕ್ ಸನ್‌ರೂಫ್ ಇದರಲ್ಲಿದೆ. ಅತ್ಯುತ್ತಮವಾದ 500 ಲೀಟರ್‌ಗಳಷ್ಟು ದೊಡ್ಡ ಬೂಟ್ ಸ್ಪೇಸ್ ಹೊಂದಿದೆ.
ಕರ್ವ್ ಅನ್ನು 2 ಪೆಟ್ರೋಲ್ ಮತ್ತು 1 ಡೀಸೆಲ್ ಎಂಜಿನ್ ಆಯ್ಕೆಯಲ್ಲಿ (1.5ಲೀ. ಕ್ರಯೋಜೆಟ್ ಡೀಸೆಲ್ ಎಂಜಿನ್) ಒದಗಿಸಲಾಗುತ್ತದೆ. ಎರಡೂ ವಿಭಾಗಗಳಲ್ಲೂ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ದೊರೆಯಲಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಜಿಡಿಐ ಎಂಜಿನ್ ಇದಾಗಿದೆ.
ಟಾಟಾ ಕರ್ವ್ಅನ್ನು ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಕಂಪ್ಲಿಶ್ಡ್ ಎಂಬ 4 ವೇರಿಯಂಟ್ ಗಳಲ್ಲಿ ಒದಗಿಸಲಾಗುತ್ತಿದೆ. ಗೋಲ್ಡ್ ಎಸೆನ್ಸ್, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಪ್ಯೂರ್ ಗ್ರೇ ಮತ್ತು ಒಪೇರಾ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ.