ನಿಸಾನ್ ಮ್ಯಾಗ್ನೈಟ್ ಭಾರತದ ಕೈಗೆಟುಕವ ದರದಲ್ಲಿ ಲಭ್ಯವಿರು ಕಾರು. ಇದೇ ಕಾರಣದಿಂದ ಗ್ರಾಹಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಎಸ್ಯುವಿ ಕಾರನ್ನು ಬುಕ್ ಮಾಡುತ್ತಿದ್ದಾರೆ. ಇದೀಗ ನಿಸಾನ್ ಮ್ಯಾಗ್ನೈಟೆ ಗೆಝಾ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಪ್ರಿಮಿಯಂ SUV ಕಾರಿನಲ್ಲಿರುವ ಎಲ್ಲಾ ಫೀಚರ್ಸ್ ಕೈಗೆಟುಕುವ ದರಲ್ಲಿ ಲಭ್ಯವಾಗಿದೆ.
ನಿಸಾನ್ ಮ್ಯಾಗ್ನೈಟ್ ಗೆಝಾ ಕಾರಿನ ದರ 9.84 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ವೇರಿಯೆಂಟ್ಗಳಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಪ್ರಿಮಿಯಂ ಸಿವಿಟಿ ಟರ್ಬೋ ಕಾರು ಅನ್ನೋ ಹೆಗ್ಗಳಿಕೆಗೆ ಗೆಝಾ ಸ್ಪೆಷಲ್ ಎಡಿಶನ್ ಕಾರು ಪಾತ್ರವಾಗಿದೆ.
Nissan Magnite Red Edition
ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್ಮೆಂಟ್ ಅದ್ಭುತ ಸಂಗೀತ ಅನುಭವ ನೀಡಲಿದೆ.
ಇದೇ ಮೊದಲ ಬಾರಿಗೆ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಅತ್ಯಾಧುನಿಕ ಇನ್ಫೋಟೈನ್ಮೆಂಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಕಾರಣಕ್ಕೆ ಗ್ರಾಹಕರು ಮತ್ತಷ್ಟು ಖುಷಿ ಪಡಬಹುದಾಗಿದೆ. ವಿಶೇಷವಾಗಿ ಇದು ನಿಸ್ಸಾನ್ನ ಅತ್ಯಂತ ಸುಲಭವಾಗಿ ಕೈಗೆಟಕುವ ಬಿ-ಎಸ್ ಯು ವಿ ವಿಭಾಗದ ಪ್ರೀಮಿಯಂ ಸಿವಿಟಿ ಟರ್ಬೊ ಆಗಿದೆ. ಹಣಕ್ಕೆ ತಕ್ಕ ಕಾರು ಎಂಬಂತಿದೆ.
22.86 ಸೆಂಮೀನ ಹೈ-ರೆಸೆಲ್ಯೂಶನ್ ಟಚ್ಸ್ಕ್ರೀನ್, ವೈರ್ಲೆಸ್ ಸಂಪರ್ಕ ಹೊಂದಿರುವ ಆಂಡ್ರಾಯ್ಡ್ ಕಾರ್ ಪ್ಲೇ, ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಸಿಸ್ಟಮ್ ಹಾಗೂ ಟ್ರಾಜೆಕ್ಟರಿ ಲೈನ್ ಹೊಂದಿರುವ ರೇರ್ ಕ್ಯಾಮೆರಾ ಫೀಚರ್ಸ್ ಹೊಂದಿದ.
ನಿಸ್ಸಾನ್ ಆಪ್ ಆಧಾರಿತ ಆಂಬಿಯೆಂಟ್ ಲೈಟಿಂಗ್, ಬೀಜ್ ಬಣ್ಣದ ಪ್ರೀಮಿಯಂ ಸೀಟ್ ಅಪ್ ಹೋಲ್ ಸ್ಟರಿ, ವಿಶಿಷ್ಟವಾದ ಗೆಝಾ ಎಡಿಷನ್ ಬ್ಯಾಡ್ಜ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಇದು ನಿಸ್ಸಾನ್ ಮ್ಯಾಗ್ನೈಟ್ ಸಿವಿಟಿ ವೇರಿಯಂಟ್ ಗಳಲ್ಲಿಯೇ ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಬಯಸುವವರಿಗೆ ಎಚ್ ಆರ್ 10 ಟರ್ಬೋ ಸಿವಿಟಿ ವೇರಿಯಂಟ್ ಲಭ್ಯವಿದೆ. ಈ ಕಾರು ಬಿಡುಗಡೆ ಸಂದರ್ಭದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹರ್ಷ ವ್ಯಕ್ತಪಡಿಸಿದ್ದಾರೆ.
ನಿಸಾನ್ ಮ್ಯಾಗ್ನೈಟ್ ಗೆಝಾ ಎಡಿಶನ್ ಬುಕಿಂಗ್ ಆರಂಭಗೊಂಡಿದೆ. ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಸದ್ಯ ನಿಸಾನ್ ಮ್ಯಾಗ್ನೈಟ್ ಕಾರಿನ ಆರಂಭಿಕ ಬೆಲೆ 6 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)