ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ರೇಸರ್ ಕಾರು ಲಾಂಚ್, ಇದರ ಬೆಲೆ ಎಷ್ಟು?

First Published | Jun 11, 2024, 8:08 PM IST

ಟಾಟಾ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಅಲ್ಟ್ರೋಜ್ ಸ್ಪೆಷಲ್ ಎಡಿಶನ್ ಕಾರು ಲಾಂಚ್ ಆಗಿದೆ. ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಕಾರು ಬಿಡುಗಡೆಯಾಗಿದೆ. ಅತ್ಯಾಕರ್ಷಕ ಕಾರಿನ ಬೆಲೆ, ವಿಶೇಷ ಇಲ್ಲಿದೆ.
 

ಟಾಟಾ ಮೋಟಾರ್ಸ್ ಇದೀಗ  ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಕಾರು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಪರ್ಫಾಮೆನ್ಸ್ ನೀಡಲಿದೆ.
 

ರೇಸ್ ಕಾರ್‌ಗಳಿಂದ ಸ್ಫೂರ್ತಿ ಪಡೆದು ಇದರ ಇಂಟೀರಿಯರ್ ಹಾಗೂ ಹೊರಾಂಗಣ ವಿನ್ಯಾಸಗೊಂಡಿದೆ.120 ಪಿಎಸ್ ಪವರ್ ಹಾಗೂ 170 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. 
 

Tap to resize

ಅಲ್ಟ್ರೋಜ್ ರೇಸರ್ ವೇರಿಯೆಂಟ್ ಬೆಲೆ(ಎಕ್ಸ್ ಶೋ ರೂಂ)
ಆರ್1:9,49,000 ರೂಪಾಯಿ
ಆರ್2:10,49,000 ರೂಪಾಯಿ
ಆರ್3:10,99,000 ರೂಪಾಯಿ
 

ಅಲ್ಟ್ರೋಜ್ ವಿಸ್ತರಿಸಿದ  ಹೊಸ ವೇರಿಯೆಂಟ್ ಬೆಲೆ(ಎಕ್ಸ್ ಶೋ ರೂಂ)
ಎಕ್ಸ್‌ ಝಡ್‌ ಎಲ್‌ಯುಎಕ್ಸ್ (ಹೊಸತು) 8,99,900 ರೂಪಾಯಿ
ಎಕ್ಸ್‌ ಝಡ್‌+ಎಸ್ ಎಲ್‌ಯುಎಕ್ಸ್ (ಹೊಸತು) 9,64,990 ರೂಪಾಯಿ
ಎಕ್ಸ್‌ ಝಡ್‌+ಓಎಸ್ (ಅಪ್ ಗ್ರೇಡೆಡ್) 9,98,900 ರೂಪಾಯಿ
 

360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು (ರೇಸರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ) ಹೀಗೆ ಹಲವಾರು ಫೀಚರ್ ಗಳನ್ನು ಹೊಂದಿರುವ ರೇಸರ್ ಆವೃತ್ತಿಯು ಆಲ್ಟ್ರೊಜ್‌ ಕಾರು ಆವೃತ್ತಿಗಳಲ್ಲಿಯೇ ಅಗ್ರಸ್ಥಾನದಲ್ಲಿದೆ. 
 

ಇದು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ನಗರದ ಟ್ರಾಫಿಕ್ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಹ್ಯಾಚ್‌ಬ್ಯಾಕ್‌ನಲ್ಲಿ ಕ್ಲಾಸ್-ಲೀಡಿಂಗ್ ಸುರಕ್ಷತೆಯನ್ನು ಹೊಂದಿರುವ ಆಲ್ಟ್ರೋಜ್ ರೇಸರ್ 3 ವೇರಿಯಂಟ್ ಗಳಲ್ಲಿ (ಆರ್1, ಆರ್2 ಮತ್ತು ಆರ್3) ಲಭ್ಯವಿರುತ್ತದೆ. 
 

ಮೂರು ಬಣ್ಣಗಳ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಆಯ್ಕೆ ಗ್ರಾಹಕರಿಗೆ ಸಿಗುತ್ತದೆ. ಇದರ ಜೊತೆಗೆ ಅಲ್ಟ್ರೋಜ್ ಶ್ರೇಣಿಯನ್ನು ವಿಸ್ತರಿಸುತ್ತಾ ಟಾಟಾ ಮೋಟಾರ್ಸ್ ಎರಡು ಹೊಸ ವೇರಿಯಟ್ ಗಳನ್ನು (ಎಕ್ಸ್‌ ಝಡ್‌ ಎಲ್‌ಯುಎಕ್ಸ್‌ ಮತ್ತು ಎಕ್ಸ್‌ ಝಡ್‌+ಎಸ್‌ ಎಲ್‌ಯುಎಕ್ಸ್‌) ಪರಿಚಯಿಸಿದೆ ಮತ್ತು ಅಲ್ಟ್ರೋಜ್ ಶ್ರೇಣಿಯ ಒಂದು ವೇರಿಯಂಟ್ ಅನ್ನು (ಎಕ್ಸ್‌ ಝಡ್‌+ಓಎಸ್) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ವೇರಿಯಂಟ್ ಗಳು ಪೆಟ್ರೋಲ್ ಮ್ಯಾನ್ಯುವಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಮತ್ತು ಸಿ ಎನ್ ಜಿ ವಿಭಾಗಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ.
 

ಪ್ರಮುಖ ವಿಶೇಷತೆಗಳು:
• 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್ 
• ಪವರ್ - 120 ಪಿಎಸ್ @ 5500 ಆರ್‌ಪಿಎಂ
• ಟಾರ್ಕ್ - 170 ಎನ್ಎಂ @ 1750 ರಿಂದ 4000 ಆರ್‌ಪಿಎಂ
• 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್
• ಸ್ಪೋರ್ಟಿ ಎಕ್ಸಾಸ್ಟ್ ನೋಟ್
 

Latest Videos

click me!