ಈಗಿನ 2000ರ ನಂತರದ ಹೊಸ ಜನರೇಷನ್‌ಗೆ ಟಾಟಾ ಸುಮೋ ಹೆಸರು ಗೊತ್ತಿರಲ್ಲ. ಆದರೆ 90ರ ದಶಕದಲ್ಲಿ ಈ ಕಾರು ಫೇಮಸ್. 10 ಜನ ಕೂರುವ ಸೀಟಿಂಗ್ ಕೆಪಾಸಿಟಿ ಇತ್ತು. 1994ರಲ್ಲಿ ಟಾಟಾ ಮೋಟಾರ್ಸ್ ಈ ಕಾರನ್ನು ರಿಲೀಸ್ ಮಾಡಿತ್ತು. ಕೇವಲ 3 ವರ್ಷದಲ್ಲೇ ಒಂದು ಲಕ್ಷಕ್ಕಿಂತ ಹೆಚ್ಚು ಕಾರುಗಳು ಸೇಲ್ ಆಗಿ ದಾಖಲೆ ನಿರ್ಮಿಸಿತ್ತು. 2002ರಲ್ಲಿ ಸುಮೋ+ ಹೆಸರಿನಲ್ಲಿ ಹೊಸ ವರ್ಷನ್ ಬಂತು. ಈಗ ಟಾಟಾ ಸುಮೋ ಹೊಸ ಮಾಡೆಲ್ ಬರುತ್ತಿದೆ.
ಆದರೆ, ಟಾಟಾ ಮೋಟಾರ್ಸ್ ಕಂಪನಿ ಇನ್ನೂ ಅಫೀಷಿಯಲ್ ಆಗಿ ಏನೂ ಹೇಳಿಲ್ಲ. ಆದರೆ ಹೊಸ ಕಾರಿನ ಫೀಚರ್ಸ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಫಾರ್ಚುನರ್‌ಗೆ ಟಕ್ಕರ್ ಕೊಡೋ ರೀತಿ ಹೊಸ ಲುಕ್, ಫೀಚರ್ಸ್‌ಗಳಲ್ಲಿ ಟಾಟಾ ಸುಮೋ ಬರ್ತಿದೆ ಅಂತೆ. ಕೇವಲ 9 ಲಕ್ಷ ರೂಪಾಯಿ ಬೆಲೆಯಲ್ಲಿ ಈ ಕಾರು ಲಾಂಚ್ ಆಗಬಹುದು ಅಂತ ಹೇಳಲಾಗುತ್ತಿದೆ.
2025ರ ಮಧ್ಯ ವರ್ಷದಲ್ಲಿ ಅಥವಾ ಕೊನೆಯಲ್ಲಿ ಈ ಕಾರು ರಿಲೀಸ್ ಆಗಬಹುದು. 2.2 ಲೀಟರ್ 4 ಸಿಲಿಂಡರ್ ಡೀಸೆಲ್ ಮತ್ತು 1.5 ಲೀಟರ್ 3 ಸಿಲಿಂಡರ್ ಡೀಸೆಲ್ ಎಂಜಿನ್ ಇರೋ ಎರಡು ವೇರಿಯಂಟ್‌ಗಳಲ್ಲಿ ಕಾರು ಬರಬಹುದು. 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರಲಿದೆ ಎಂದು ಹೇಳಲಾಗುತ್ತಿದೆ.
ಕಾರಿನ ಒಳಭಾಗದ ವಿನ್ಯಾಸದ ಬಗ್ಗೆ ಜಾಸ್ತಿ ಒತ್ತು ನೀಡಲಾಗಿದೆ. ಇದರಲ್ಲಿ ಸ್ಪೇಷಿಯಸ್ ಕ್ಯಾಬಿನ್ ಇರತ್ತದೆ. ಲಾಂಗ್ ಡ್ರೈವ್‌ಗೆ ಕಂಫರ್ಟಬಲ್ ಸೀಟಿಂಗ್ ಇರತ್ತದೆ. ಪ್ರೀಮಿಯಂ ಫೀಲ್ ಕೊಡೋ ಸಾಫ್ಟ್ ಟಚ್ ಮೆಟೀರಿಯಲ್ ಇರೋ ಸ್ಟೈಲಿಶ್ ಡ್ಯಾಶ್‌ಬೋರ್ಡ್ ಇರಲಿದೆ. ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಸಪೋರ್ಟ್ ಮಾಡೋ 9 ಇಂಚಿನ ಸ್ಕ್ರೀನ್ ಇರತ್ತದೆ ಎಂದು ಹೇಳಲಾಗುತ್ತಿದೆ.
ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ. ಹಳೆಯ ಕಾರಿಗಿಂದ ಹೊಸ ಟಾಟಾ ಸುಮೋ ಕಾರಿನಲ್ಲಿ ಸೇಫ್ಟಿಗೂ ಹೆಚ್ಚು ಒತ್ತು ಕೊಟ್ಟಿದ್ದಾರೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಇರೋ ABS, ಸ್ಟ್ರಾಂಗ್ ಸ್ಟೀಲ್ ಬಾಡಿ, ಪಾರ್ಕಿಂಗ್ ಸೆನ್ಸಾರ್‌ಗಳು ಇರಲಿವೆ.
ಇನ್ನು ಬೆಲೆ ವಿಷಯಕ್ಕೆ ಬಂದರೆ, ಟಾಟಾ ಸುಮೋ ಬೇಸಿಕ್ ಮಾಡೆಲ್ LXI ಬೆಲೆ 9.5 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸುಮೋ VXI ಬೆಲೆ 10.5 ಲಕ್ಷ, ಸುಮೋ ZXI ಬೆಲೆ 11.5 ಲಕ್ಷ, ಸುಮೋ ZXI+ ಬೆಲೆ 12.5 ಲಕ್ಷ ರೂಪಾಯಿ ಇರಬಹುದು.