ಸೋನಿ ಬ್ರ್ಯಾಂಡ್ ಭಾರತೀಯರಿಗೆ ಚಿರಪರಿಚಿತ. ಸೋನಿ ಟಿವಿ, ಸೋನಿ ಮ್ಯೂಸಿಕ್ ಸಿಸ್ಟಮ್, ಸೋನಿ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಜನಪ್ರಿಯವಾಗಿದೆ. ಇದೀಗ ಸೋನಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಸೋನಿ ಅಫೀಲಾ ಕಾರಿನ ಬುಕಿಂಗ್ ಆರಂಭಗೊಂಡಿದೆ.
ಸೋನಿ ಅಫೀಲಾ 1 ಕಾರು ಸೆಡಾನ್ ಎಲೆಕ್ಟ್ರಿಕ್ ಕಾರಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 482 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಕಟ್ಟಿಂಗ್ ಎಡ್ಜ್ ಟೆಕ್ನಾಲಜಿ, ಅತ್ಯಾಕರ್ಷಕ ವಿನ್ಯಾಸ, ಉತ್ತಮ ಎಲೆಕ್ಟ್ರಿಕ್ ಮೋಟಾರ್ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಸೋನಿ ಅಫೀಲಾ1 ಕಾರು ಎರಡು ವೇರಿಯೆಂಟ್‌ನಲ್ಲ ಹೊರ ತರಲಾಗಿದೆ. ಅಫೀಲಾ ಒರಿಜಿನ್ ಹಾಗೂ ಸೋನಿ ಅಫೀಲಾ 1 ಸಿಗ್ನೇಚರ್ ಎಂಬ ಎರಡು ಮಾಡೆಲ್ ಕಾರುಗಳು ಲಭ್ಯವಿದೆ. ಸುರಕ್ಷತೆ, ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಅಢಾಸ್ ಲೆವೆಲ್ ಟೆಕ್ ಬಳಸಿಕೊಳ್ಳಲಾಗಿದೆ.
ಸೋನಿ ಅಫೀಲಾ ಕಾರು ಸೋನಿ ಹಾಗೂ ಹೋಂಡಾ ಸಹಯೋಗದಲ್ಲಿ ನಿರ್ಮಾಣಗೊಂಡಿದೆ. ಸೋನಿ ಹೋಂಡಾ ಮೊಬಿಲಿಟಿಯ ಉತ್ಪಾದನೆ ಇದಾಗಿದೆ. ಮೂಲಗಳ ಪ್ರಕಾರ ಸೋನಿ ಅಫೀಲಾ1 ಕಾರು ವಿಶ್ವದ ಆಟೋ ಮಾರುಕಟ್ಟೆಯಲ್ಲಿ ಹೊಸ ಅಧ್ಯಾ ಬರೆಯಲಿದೆ ಎಂದು ಹೇಳಲಾಗುತ್ತಿದೆ.
ಸೋನಿ ಆಫೀಲಾ 1 ಬೆಲೆ
ಸೋನಿ ಅಫೀಲಾ 1 ಒರಿಜಿನ್ ಕಾರಿನ ಆರಂಭಿಕ ಬೆಲೆ 77 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಸಿಗ್ನೇಚರ್ ವೇರಿಯೆಂಟ್ ಕಾರಿನ ಬೆಲೆ 94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರನ್ನು 17,145 ರೂಪಾಯಿ ನೀಡಿ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಸದ್ಯ ಸೋನಿ ಅಫೀಲಾ1 ಕಾರು ಅನಾವರಣಗೊಂಡಿದೆ.
ಸೋನಿ ಅಫೀಲಾ ಕಾರು ಬುಕಿಂಗ್ ಸದ್ಯ ಅಮೆರಿಕ ಕ್ಯಾಲಿಫೋರ್ನಿಯಾ ಮಂದಿಗೆ ಮಾತ್ರ. ಇಲ್ಲಿ ಮಾತ್ರ ಲಭ್ಯವಿದೆ. ಆದರೆ 2026ರಿಂದ ಸೋನಿ ಅಫೀಲಾ ಕಾರು ಭಾರತ ಸೇರಿದಂತೆ ಇತರ ದೇಶಗಳಲ್ಲೂ ಲಭ್ಯವಾಗಲಿದೆ. ಈಗ ಬುಕಿಂಗ್ ಮಾಡುವ ಗ್ರಾಹಕರಿಗೆ 2026ರಿಂದ ಡೆಲಿವರಿ ಪ್ರಾರಂಭಗೊಳ್ಳಲಿದೆ.