ಮಾರುತಿ ಸುಜುಕಿ ಭಾರತದಲ್ಲಿ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಟಾಪ್ 10 ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳೇ ಸ್ಥಾನ ಪಡೆದಿರುತ್ತದೆ. ಕಳೆದ 40 ವರ್ಷಗಳಿಂದ ಭಾರತದಲ್ಲಿ ಗರಿಷ್ಠ ಮಾರಾಟವಾಗುವ ಕಾರು ಅನ್ನೋ ಪಟ್ಟ ಮಾರುತಿ ಸುಜಿಕಿ ಕಾರಿಗೆ ಸಂದಿದೆ. ಆದರೆ 2024ರಲ್ಲಿ ಈ ದಾಖಲೆಯನ್ನು ಟಾಟಾ ಮೋಟಾರ್ಸ್ ಮುರಿದಿದೆ. ಇದೀಗ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಪಂಚ್ ಕಾರು ಭಾರತದಲ್ಲಿ ಗರಿಷ್ಠ ಮಾರಾಟವಾದ ನಂಬರ್ 1 ಕಾರು ಅನ್ನೋ ದಾಖಲೆ ಬರೆದಿದೆ
ಭಾರತದದಲ್ಲಿ ಮಾರುತಿ ಸುಜುಕಿಯ ಆರಂಭಿಕ ದಿನಗಳಿಂದ ಒಂದಲ್ಲ ಒಂದು ಕಾರು ಮಾರಾಟದಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಮಾರುತಿ ಸುಜುಕಿ ವ್ಯಾಗನಆರ್ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ ಗರಿಷ್ಠ ಮಾರಾಟ ದಾಖಲೆ ಮೂಲಕ ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಆದರೆ 2024ರ ಸಾಲಿನಲ್ಲಿ ವ್ಯಾಗನಆರ್, ಸ್ವಿಫ್ಟ್ ಕಾರುಗಳನ್ನು ಹಿಂದಿಕ್ಕಿರುವ ಟಾಟಾ ಪಂಚ್ ಮೊದಲ ಸ್ಥಾನಕ್ಕೇರಿದೆ.
2024ರಲ್ಲಿ ಟಾಟಾ ಪಂಚ್ ಬರೋಬ್ಬರಿ 2,02,030 ಕಾರಗಳು ಮಾರಾಟವಾಗಿದೆ. ಇನ್ನು ಎರಡನೇ ಸ್ಥಾನಕ್ಕೆ ಕುಸಿದಿರುವ ಮಾರುತಿ ವ್ಯಾಗನಆರ್ ಕಾರು 1,90,855 ಕಾರುಗಳು ಮಾರಾಟವಾಗಿದೆ. ಟಾಟಾ ಪಂಚ್ 2 ಲಕ್ಷ ಗಡಿ ದಾಟಿದ್ದರೆ, ಮಾರುತಿ 1.90 ಲಕ್ಷಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇದರೊಂದಿಗೆ ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
2024ರಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ
ಟಾಟಾ ಪಂಚ್: 2,02,030
ಮಾರುತಿ ವ್ಯಾಗನಆರ್: 1,90855
ಮಾರುತಿ ಎರ್ಟಿಗಾ:1,90,091
ಮಾರುತಿ ಬ್ರೆಜಾ:1,88,160
ಹ್ಯುಂಡೈ ಕ್ರೆಟಾ:1,86,919
ಟಾಟಾ ಪಂಚ್ 2021ರಲ್ಲಿ ಬಿಡುಗಡೆಯಾಗಿದೆ. ಬಳಿಕ ಹಂತ ಹಂತವಾಗಿ ಭಾರಿ ಜನಪ್ರಿಯತೆ ಹಾಗೂ ಮಾರಾಟದಲ್ಲಿ ಪ್ರಗತಿ ಸಾಧಿಸಿದೆ. ಸಬ್ 4 ಮೀಟರ್ ಎಸ್‌ಯುವಿ ಕಾರು ಭಾರತದ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. 5 ಸ್ಟಾರ್ ಸೇಫ್ಟಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.
2024ರಲ್ಲಿ ಮಾರಾಟವಾದ ಟಾಪ್ 5 ಕಾರುಗಳಲ್ಲಿ ಮೂರು ಕಾರು ಎಸ್‌ಯುವಿ ಕಾರು ಅನ್ನೋದು ವಿಶೇಷ. ಇದೀಗ ಜನ ಎಸ್‌ಯುವಿ ಕಾರುಗಳ ಮೇಲೆ ಹಚ್ಚು ಆಕರ್ಷಿತರಾಗಿದ್ದಾದರೆ. ಭಾರತದ ರಸ್ತೆ, ಸ್ಪೋರ್ಟೀವ್ ಲುಕ್ ಸೇರಿದಂತೆ ಹಲವು ಕಾರಣಗಳಿಂದ ಜನ ಎಸ್‌ಯುವಿ ಬಯಸುತ್ತಿದ್ದಾರೆ ಅನ್ನೋದು ಸ್ಪಷ್ವವಾಗಿದೆ.