ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!

First Published | Jan 14, 2021, 2:39 PM IST

ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ, ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆಯ ಕಾರು ನೀಡುತ್ತಿದೆ. ದೇಶದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ suv ಕಾರು ಕೂಡ ಟಾಟಾ ನೆಕ್ಸಾನ್. ಇದೀಗ ಎಲೆಕ್ಟ್ರಿಕ್ ಕಾರು ಪ್ರೀಯರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ. ಅಗ್ಗದ ದರದಲ್ಲಿ ಟಾಟಾ 200 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅತ್ಯಂತ ಜನಪ್ರೀಯವಾಗಿದೆ. ಕೈಗೆಟುಕುವ ದರ, 5 ಸ್ಟಾರ್ ಸೇಫ್ಟಿ, 312 ಕಿ.ಮೀ ಮೈಲೇಜ್ ಸೇರಿದಂತೆ ಹಲುವ ವಿಶೇಷತೆಗಳು ಈ ಕಾರಿನಲ್ಲಿದೆ.
undefined
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 13.99 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಕಾರಾಗಿದೆ.
undefined

Latest Videos


ಇದೀಗ ಟಾಟಾ ಮೋಟಾರ್ಸ್ ಅಗ್ಗದ ದರದ ಜನಾಸಾಮಾನ್ಯರಿಗೂ ಖರೀದಿ ಮಾಡಬಹುದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ಘೋಷಿಸಿದೆ.
undefined
ಟಾಟಾ ನೆಕ್ಸಾನ್ ಕಾರು 312 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದರೆ, ನೂತನ ಟಾಟಾ ಎಲೆಕ್ಟ್ರಿಕ್ ಕಾರು 200 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.
undefined
ಟಾಟಾ ಮೋಟಾರ್ಸ್ ಮೂಲಗಳ ಪ್ರಕಾರ ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಇದೀಗ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಮುಂದಾಗಿದೆ.
undefined
ಈಗಾಗಲೇ ಮೋಟಾರು ಶೋನಲ್ಲಿ ಟಾಟಾ ಅಲ್ಟ್ರೋಝ್ ಅನಾವರಣ ಮಾಡಲಾಗಿದೆ. ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು 10 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಹೇಳಲಾಗಿತ್ತು.
undefined
ಇದೀಗ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಸೇರಿದಂತೆ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಮೂಲಕ 6 ರಿಂದ 10 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.
undefined
ಸದ್ಯ ಭಾರತದಲ್ಲಿ ನೆಕ್ಸಾನ್ ಹೊರತು ಪಡಿಸಿದರೆ, ಹ್ಯುಂಡೈ ಕೋನಾ, ಎಂಜಿ zs ಎಲೆಕ್ಟ್ರಿಕ್ suv ಕಾರುಗಳಿವೆ. ಇನ್ನು ಟಾಟಾ ಟಿಗೋರ್, ಮಹೀಂದ್ರ ಇ ವೇರಿಟೋ ಸೇರಿದಂತೆ ಸೆಡಾನ್ ಕಾರುಗಳು ಇದೆ. ಇದೀಗ ಮೊದಲ ಬಾರಿಗೆ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿ ಟಾಟಾ ಮೂಲಕ ಬಿಡುಗಡೆಯಾಗಲಿದೆ
undefined
click me!