2021ರಲ್ಲಿ ಅಮೆರಿಕದ ಟೆಸ್ಲಾ ಭಾರತ ಪ್ರವೇಶಿಸಲಿದೆ ಎಂದು ಸ್ವತ ಟೆಸ್ಲಾ ಸಹ ಸಂಸ್ಥಾಪಕ, ಸಿಇಓ ಎಲನ್ ಮಸ್ಕ್ ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಟೆಸ್ಲಾ ಎಂಟ್ರಿ ಖಚಿತಪಡಿಸಿದ್ದರು.
ಟೆಸ್ಲಾ ಭಾರತದಲ್ಲಿ ಕಾರ್ಯರಂಭ ಮಾಡಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ 5 ರಾಜ್ಯಗಳ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ. ಈ ಮೂಲಕ ಅದ್ಧೂರಿಯಾಗಿ ಎಂಟ್ರಿಕೊಡಲು ಸಜ್ಜಾಗಿದೆ
ಮಾತುಕತೆ ನಡೆಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇನ್ನು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಸರ್ಕಾರ ಜೊತೆ ಮಾತುಕತೆ ನಡೆಸುತ್ತಿದೆ.
ಕರ್ನಾಟಕ ಸರ್ಕಾರ ತುಮಕೂರಿನಲ್ಲಿ ಟೆಸ್ಲಾ ಪ್ಲಾಂಟ್ ಸ್ಥಾಪಿಸಲು ಸ್ಥಳ ಗೊತ್ತು ಮಾಡಿದೆ. ಶೀಘ್ರದಲ್ಲೇ ಟೆಸ್ಲಾ ಹಾಗೂ ಸರ್ಕಾರದ ನಿಯೋಗ ತುಮಕೂರಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಘಟಕ ತೆರೆಯಲು ಟೆಸ್ಲಾ ಕೂಡ ಉತ್ಸುಕವಾಗಿದೆ ಎಂದು ಮೂಲಗಳು ಹೇಳುತ್ತಿದೆ. ಈ ಕುರಿತು ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಟೆಸ್ಲಾ ಹೆಡ್‌ಕ್ವಾರ್ಟರ್, ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಹಾಗೂ ಸಂಶೋಧನಾ ಕೇಂದ್ರ ಸೇರಿದಂತೆ 3 ಕೇಂದ್ರಗಳನ್ನು ಭಾರತದಲ್ಲಿ ತೆರೆಯಲು ನಿರ್ಧರಿಸಿದೆ.
ಭಾರತದಲ್ಲಿ ಮೊದಲ ಹಂತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಟೆಸ್ಲಾ ಕಾರುಗಳ ಪೈಕಿ ಅಗ್ಗದ ಬೆಲೆ ಮಾಡೆಲ್ 3 ಕಾರು ಬಿಡುಗಡೆ ಮಾಡಲು ಟೆಸ್ಲಾ ನಿರ್ಧರಿಸಿದೆ.