ಭಾರತದಲ್ಲಿ ಡ್ರೈವಿಂಗ್ ವೇಳೆ ಕಾಣಸಿಗುವ 8 ತಪ್ಪು; ನೀವು ಈ ಮಿಸ್ಟೇಕ್ ಮಾಡುತ್ತಿದ್ದೀರಾ?

First Published Jan 11, 2021, 2:58 PM IST

ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ಸುಲಭದ ಮಾತಲ್ಲ. ಕಾರಣ ರಸ್ತೆ ಒನ್ ವೇ ಆಗಿದ್ದರೂ, ಎರಡೂ ಬದಿ ನೋಡಲೇಬೇಕು. ಎಲ್ಲಿಂದ ವಾಹನ ನುಗ್ಗುತ್ತೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಹೀಗೆ ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ವೇಳೆ ಸಾಮಾನ್ಯವಾಗಿ ಬಹುತೇಕರು ಮಾಡುವ 8 ತಪ್ಪುಗಳ ಕುರಿತ ಮಾಹಿತಿ ಇಲ್ಲಿದೆ. ನೀವು ಈ ತಪ್ಪು ಮಾಡುತ್ತಿದ್ದೀರಾ? 

ಇತ್ತೀಚೆಗೆ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿ ಸನ್‌ರೂಫ್ ಸಾಮಾನ್ಯ. ಭಾರತದಲ್ಲಿ ಚಲಿಸುತ್ತಿರುವ ಕಾರಿನ ಸನ್‌ರೂಫ್ ಒಪನ್ ಮಾಡಿ ಅರ್ಧ ದೇಹ ಹೊರಕ್ಕೆ ಹಾಕಿ ನಿಲ್ಲುವ ದೃಶ್ಯ ಹೈವೇ, ಹಿಲ್ ಸ್ಟೇಶನ್‌ಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ನಿಯಮ ಉಲ್ಲಂಘನೆಯಾಗಿದೆ. ಇಷ್ಟೇ ಅತ್ಯಂತ ಅಪಾಯಕಾರಿ ಕೂಡ ಹೌದು.
undefined
ಭಾರತದಲ್ಲಿ ಹೆಚ್ಚಿನವರಿಗೆ ಲೋ ಬೀಮ್ ಹಾಗೂ ಹೈ ಬೀಮ್ ಹೆಡ್‍ಲೈಟ್ ಬಳಕೆ ಬರುವುದಿಲ್ಲ. ರಾತ್ರಿ ಡ್ರೈವಿಂಗ್ ವೇಳೆ ಬಹುತೇಕರು ಹೈ ಬೀಮ್ ಲೈಟ್ ಹಾಕಿರುತ್ತಾರೆ. ಎದುರುಗಡೆಯಿಂದ ವಾಹನ ಬಂದರೂ ಡಿಮ್ ಮಾಡುವುದಿಲ್ಲ. ಇದರಿಂದ ಅಪಘಾತದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
undefined
ಪಾರ್ಕಿಂಗ್ ಲೈಟ್ ಬಳಕೆ ಕೂಡ ಇದೇ ರೀತಿ. ಅತೀ ವೇಗದಲ್ಲಿ ಚಲಿಸುತ್ತಿರುವ ಕಾರು ದಿಢೀರ್ ಬ್ರೇಕ್ ಹಾಕಿ, 0 ರಿಂದ 5 ಕಿ.ಮೀ ವೇಗಕ್ಕೆ ನಿಯಂತ್ರಿಸುವಾಗ ಪಾರ್ಕಿಂಗ್ ಲೈಟ್ ಹಾಕಬಹುದು. ಇನ್ನು ಕಾರು ಪಾರ್ಕ್ ಮಾಡಿದಾಗ, ರಸ್ತೆಯಲ್ಲಿ ಕೆಟ್ಟು ನಿಂತಾಗ ಪಾರ್ಕಿಂಗ್ ಲೈಟ್ ಹಾಕಬೇಕು. ಆದರೆ ಭಾರತದಲ್ಲಿ ಮುಂಜು ಕವಿದ ವಾತಾವರಣದಲ್ಲಿ ಡ್ರೈವಿಂಗ್ ವೇಳೆ, ಇನ್ನು ಹಲವು ಕಡೆಗಳಲ್ಲಿ ಸುಖಾಸುಮ್ಮನೆ ಪಾರ್ಕಿಂಗ್ ಲೈಟ್ ಹಾಕಲಾಗುತ್ತಿದೆ. ಇದರಿಂದ ಇತರ ಚಾಲಕರಿಗೆ ತಪ್ಪು ಸಂದೇಶ ರವಾನಿಸಿದಂತೆ.
undefined
ಕಾರಿನ ಎರಡೂ ಬದಿ ಮಿರರ್‌ಗಳನ್ನೂ ಹೆಚ್ಚಿನವರು ಬಳಸುವುದಿಲ್ಲ. ಅನೇಕ ಬಾರಿ ಕಾರಿನ ಮಿರರ್ ತೆರೆದುಕೊಂಡಿರುವುದೇ ಇಲ್ಲ. ನಿಯಮ ಹಾಗೂ ಸುರಕ್ಷತೆ ದೃಷ್ಟಿಯಿಂದ ರೇರ್ ಮಿರರ್ ಬಳಕೆ ಮಾಡಲೇಬೇಕು.
undefined
ಫುಟ್‌ಪಾತ್ ಪಾದಾಚಾರಿಗಳಿಗಾಗಿ ಮಾತ್ರ. ಆದರೆ ನಗರ ಪ್ರದೇಶಗಳಲ್ಲಿ, ಸಿಗ್ನಲ್‌ನಲ್ಲಿ ಟ್ರಾಫಿಕ್ ಜಾಮ್ ಆದಾಗ, ಅಥಾವ ಬೇರೆ ಕಾರಣಗಳಿಂದ ವಾಹನ ಸಾಲುಗಟ್ಟಿ ನಿಂತಾಗ ದ್ವಿಚಕ್ರ ವಾಹನ ಸವಾರರು ಪಾದಾಚಾರಿ ರಸ್ತೆ ಮೇಲೆಯೇ ರೈಡ್ ಮಾಡುತ್ತಾರೆ.
undefined
ಹೆದ್ದಾರಿಗಳಲ್ಲಿ ಅಥವಾ ಬೇರೆ ರಸ್ತೆಗಳಲ್ಲಿ ತಿರುವುಗಳಲ್ಲಿ ಕಾರು ಪಾರ್ಕ್ ಮಾಡುವುದು. ಅಥವಾ ಇತರ ಚಾಲಕರಿಗೆ ಸರಿಯಾಗಿ ಕಾಣಿಸದೇ ಇರುವ ಪ್ರದೇಶಗಳಲ್ಲಿ ಅಪಾಯಾಕಾರಿಯಾದ ರೀತಿಯಲ್ಲಿ ಕಾರು ಪಾರ್ಕಿ ಮಾಡಿರುವುದು ಭಾರತದ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಇದು ಅಪಘಾತಕ್ಕೆ ದಾರಿ ಮಾಡಿಕೊಡುತ್ತದೆ
undefined
ಒನ್ ವೇ ಆಗಿರಲಿ, ಏನೇ ಆಗಿರಲಿ ರಾಂಗ್ ಸೈಡ್ ಮೂಲಕ ವಾಹನ ಚಲಾಯಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಇದು ಕೂಡ ಅತ್ಯಂತ ಅಪಾಯಕಾರಿಯಾಗಿದೆ
undefined
ರಸ್ತೆಯಲ್ಲಿ ಗುಂಪಾಗಿ ವಾಹನ ಒಡಿಸುತ್ತಾ, ಮಾತನಾಡುತ್ತಾ ಸಾಗುವುದು ಸಾಮಾನ್ಯಾವಾಗಿ ಕಾಣಸಿಗುತ್ತದೆ. ಪಟ್ಟಣಗಳಲ್ಲಿ, ಹೈವೇ ಮೂಲಕ ಸಾಗುವಾಗ ಸಿಗುವ ಹಳ್ಳಿಗಳಲ್ಲಿ ಎರಡೆರಡು ಬೈಕ್ ಮೂಲಕ ಮಾತನಾಡುತ್ತಾ ಸಾಗುತ್ತಾರೆ.
undefined
click me!