ಟಾಟಾ ಟಿಯಾಗೋ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

First Published | Jan 30, 2021, 6:00 PM IST

ಟಾಟಾ ಮೋಟಾರ್ಸ್ ರಿಫ್ರೆಶ್ ಶ್ರೇಣಿಯ 1ನೆ ವಾರ್ಷಿಕೋತ್ಸವದ ಅಂಗವಾಗಿ ಲಿಮಿಟೆಡ್ ಎಡಿಶನ್ ಟಿಯಾಗೋ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಭಾರತದ ಮುಂಚೂಣಿ ಆಟೋಮೋಟಿವ್ ಬ್ರ್ಯಾಂಡ್ ಆದ ಟಾಟಾ ಮೋಟರ್ಸ್, ಇಂದು ರೂ. 5.79 ಲಕ್ಷ(ಎಕ್ಸ್ ಶೋರೂಮ್ ) ಬೆಲೆಯಲ್ಲಿ ಲಿಮಿಟೆಡ್ ಎಡಿಶನ್ ಟಾಟಾ ಟಿಯಾಗೊ ಬಿಡುಗಡೆ ಮಾಡಿದೆ.
ಟಿಯಾಗೊ ರಿಫ್ರೆಶ್‍ನ ಮೊದಲನೇ ವಾರ್ಷಿಕೋತ್ಸವ ಮತ್ತು ಹ್ಯಾಚ್‍ಬ್ಯಾಕ್ ಮಾರುಕಟ್ಟೆಯಲ್ಲಿ ಅದರ ಯಶಸ್ಸಿನ ಸ್ಮರಣೆಯಾಗಿ ನೂತನ ಕಾರು ಬಿಡುಗಡೆಯಾಗಿದೆ.
Tap to resize

ವೈವಿಧ್ಯತೆ ಮೇಲೆ ನಿರ್ಮಾಣಗೊಂಡಿರುವ ಟಿಯಾಗೊ ಸೀಮಿತ ಆವೃತ್ತಿಯು ಮ್ಯಾನ್ಯುವಲ್ ಟ್ರಾನ್ಸ್‌ಮಿಶನ್‌ನಲ್ಲಿ ಲಭ್ಯವಿದ್ದು, ಮೂರು ಸಿಂಗಲ್ ಟೋನ್ ಬಣ್ಣಗಳಲ್ಲಿ, ಅಂದರೆ, ಫ್ಲೇಮ್ ರೆಡ್, ಪರ್ಲೆಸೆಂಟ್ ವೈಟ್, ಮತ್ತು ಡೇಟೋನ್ ಗ್ರೇ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹೆಚ್ಚುವರಿ ಅಂಶಗಳು ಇವುಗಳನ್ನು ಒಳಗೊಂಡಿವೆ:
ಹೊಸ 14 ಇಂಚಿನ ಕಪ್ಪು ಅಲಾಯ್ ವ್ಹೀಲ್‍, 5 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್, ನ್ಯಾವಿಗೇಶನ್ ಮ್ಯಾಪ್ಸ್ ಮೂಲಕ 3ಡಿ ನ್ಯಾವಿಗೇಶನ್,ಡಿಸ್‌ಪ್ಲೇ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ವಾಯ್ಸ್ ಕಮಾಂಡ್ ರೆಕಗ್ನಿಶನ್, ಇಮೇಜ್ ಮತ್ತು ವೀಡಿಯೋ ಪ್ಲೇಬ್ಯಾಕ್, ರೇರ್ ಪಾರ್ಸಲ್ ಶೆಲ್ಫ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
2016ರಲ್ಲಿ ಪರಿಚಯಗೊಂಡಾಗಿನಿಂದಲೂ ಟಿಯಾಗೊ ತನ್ನ ವರ್ಗದಲ್ಲಿ ಅತ್ಯಂತ ಯಶಸ್ವಿಯಾಗಿದ್ದು ಎಲ್ಲರೂ ಅದನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೇ ಅನುಸರಿಸಿ, ಈ ಉತ್ಪನ್ನದ ಬಿಎಸ್6 ಆವೃತ್ತಿಯನ್ನು 2020ರಲ್ಲಿ ಪರಿಚಯಿಸಲಾಗಿತ್ತು. ಪರಿಚಯದ ಸಮಯದಲ್ಲಿ ಜಿಎನ್‍ಸಿಎಪಿಯಿಂದ 4 ನಕ್ಷತ್ರ ಸುರಕ್ಷತಾ ಶ್ರೇಯಾಂಕವನ್ನು ಕೂಡ ಪಡೆದ ಉತ್ಪನ್ನವು ತನ್ನ ವರ್ಗದಲ್ಲೇ ಅತ್ಯಂತ ಸುರಕ್ಷಿತವಾದದ್ದು ಎಂಬ ಹೆಮ್ಮೆ ಗಳಿಸಿತ್ತು.
ರಸ್ತೆಯಲ್ಲಿ 3.25 ಲಕ್ಷಕ್ಕಿಂತ ಹೆಚ್ಚಿನ ಸಂತುಷ್ಟ ಗ್ರಾಹಕರೊಂದಿಗೆ ಟಿಯಾಗೊ, ಸಹಜವಾಗಿಯೇ ಅದ್ಭುತ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಸೀಮಿತ ಅವಧಿಯ ವೈವಿಧ್ಯದ ಪರಿಚಯದ ಮೂಲಕ ಮತ್ತು ‘ಎಂದೆಂದಿಗೂ ಹೊಸತು’ ಎಂಬ ಸಿದ್ಧಾಂತಕ್ಕೆ ಅನುಗುಣವಾಗಿ ಹೊಸ ಕಾರು ಬಿಡುಗಡೆಯಾಗಿದೆ.
ನಾವು ಸದಾ ಹೆಚ್ಚಾಗುತ್ತಿರುವ ನಮ್ಮ ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಲೇ ಈ ಕ್ಷೇತ್ರದಲ್ಲಿ ಹೆಚ್ಚು ಕೌತುಕಗಳನ್ನು ಸೃಷ್ಟಿಮಾಡುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಟಾಟಾ ಮೋಟರ್ಸ್‍ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವಾಸ್ತವ ಹೇಳಿದ್ದಾರೆ.

Latest Videos

click me!