BMW ಇಂಡಿಯಾ ನ್ಯೂ BMW 3 ಸೀರೀಸ್ ಗ್ರಾನ್ ಲಿಮೋಸಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ವಿಶೇಷವಾಗಿ ಭಾರತದ ಮಾರುಕಟ್ಟೆಗೆ ಉತ್ಪಾದನೆಯಾಗುವ ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ಗಳಲ್ಲಿ BMW ಇಂಡಿಯಾ ಡೀಲರ್ಶಿಪ್ಸ್ನಲ್ಲಿ ಇಂದಿನಿಂದ ದೊರೆಯುತ್ತದೆ.
ಲಾಂಗ್ ವೀಲ್‌ಬೇಸ್ `ಗ್ರಾನ್ ಲಿಮೋಸಿನ್’ BMW 3 3ಸೀರೀಸ್ ಕುಟುಂಬಕ್ಕೆ ಹೊಸ ಸೇರ್ಪಡೆಯಾಗಿದೆ. ಇದು ಅತ್ಯಂತ ಯಶಸ್ವಿ BMW 3 ಸೀರೀಸ್ ಲಾಂಗ್ ವೀಲ್‌ಬೇಸ್ ಆವೃತ್ತಿಯಾಗಿದೆ. ಇದನ್ನು ಭಾರತದಲ್ಲಿ ಉದ್ದದ ಸೆಡಾನ್‌ಗಳಿಗೆ ಗ್ರಾಹಕರ ಆದ್ಯತೆಯನ್ನು ಪರಿಗಣಿಸಿ ಬಿಡುಗಡೆ ಮಾಡಲಾಗಿದೆ. ನ್ಯೂ BMW 3 ಸೀರೀಸ್ ಗ್ರಾನ್ ಲಿಮೋಸಿನ್ ತನ್ನ ವರ್ಗದಲ್ಲಿ ಅತ್ಯಂತ ಉದ್ದದ, ಅತ್ಯಂತ ವಿಶಾಲವಾದ ಮತ್ತು ಅನುಕೂಲಕರ ಕಾರು ಆಗಿದೆ ಮತ್ತು ಈ ವರ್ಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಸ್ಪೋರ್ಟಿನೆಸ್, ಅನುಕೂಲ ಮತ್ತು ಭಾರತದ ಮಾರುಕಟ್ಟೆಗೆಂದೇ ಆವಿಷ್ಕಾರಗಳನ್ನು ನೀಡುತ್ತಿದೆ.
BMW 330Li ಲಕ್ಷುರಿ ಲೈನ್ ಕಾರಿನ ಬೆಲೆ 51,50,000 ರೂಪಾಯಿ, BMW 320Ld ಲಕ್ಷುರಿ ಲೈನ್ ಕಾರಿನ ಬೆಲೆ 52,50,000 ರೂಪಾಯಿ ಹಾಗೂ BMW 330Lim ಸ್ಪೋರ್ಟ್ `ಫಸ್ರ್ಟ್ ಎಡಿಷನ್ ಕಾರಿನ ಬೆಲೆ 53,90,000 ರೂಪಾಯಿ (ಎಕ್ಸ್ ಶೋ ರೂಂ).
BMW 3 ನ್ಯೂ ಸೀರೀಸ್ ಗ್ರಾನ್ ಲಿಮೋಸಿನ್ ಒಂದು ಡೀಸೆಲ್ ವೇರಿಯೆಂಟ್ ( BMW 320ಐಜಲಕ್ಷುರಿ ಲೈನ್) ಮತ್ತು ಎರಡು ಪೆಟ್ರೋಲ್ ವೇರಿಯೆಂಟ್ (BMW 330Li ಲಕ್ಷುರಿ ಲೈನ್ ಮತ್ತು BMW 330LiMಸ್ಪೋರ್ಟ್ `ಫಸ್ರ್ಟ್ ಎಡಿಷನ್) ಗಳಲ್ಲಿ ಲಭ್ಯವಿದ್ದು ಅವುಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ.
ಇದು ಚಾಲನೆಯ ಆನಂದವನ್ನು ಅತ್ಯಂತ ವಿಶಾಲ ಸೆಡಾನ್ನ ಅನುಕೂಕದೊಂದಿಗೆ ಸಂಯೋಜಿಸುತ್ತದೆ. ಭವ್ಯತೆಯು ಹಲವು ಪಟ್ಟು ಎತ್ತರದಲ್ಲಿದ್ದು ಅದಕ್ಕೆ ದೊಡ್ಡ ಹಾಗೂ ಉದ್ದದ ಬಾಡಿ ಹಾಗೂ ದೊಡ್ಡದಾದ ಕಾರಿನ ಹಿಂಬದಿ ಬಾಗಿಲುಗಳ ಆಧುನಿಕ ವಿನ್ಯಾಸ ಕಾರಣವಾಗಿದೆ. ವಿಸ್ತರಿಸಿದ ವ್ಹೀಲ್ಬೇಸ್ನಿಂದ ಮತ್ತಷ್ಟು ಸ್ಥಳಾವಕಾಶ ದೊರೆತಿದೆ, ಹಿಂಬದಿಯ ಪ್ರಯಾಣಿಕರಿಗೆ ಹೆಚ್ಚು ಲೆಗ್ರೂಮ್ ಮತ್ತು ದೂರದ ಪ್ರಯಾಣಗಳಿಗೂ ಸಂತೋಷಕರ ಸೀಟಿನ ಅನುಭವ ನೀಡುತ್ತದೆ.
ಶಕ್ತಿಯುತ ಎಂಜಿನ್ ಥ್ರಿಲ್ಲಿಂಗ್ ಕಾರ್ಯಕ್ಷಮತೆ ಮತ್ತು ಆಕ್ಸಲರೇಷನ್ ನೀಡುತ್ತದೆ. ಐಷಾರಾಮಿ ವಿಶೇಷತೆಗಳ ದೊಡ್ಡ ಪಟ್ಟಿಯಲ್ಲಿ ಪನೋರಮ ಗ್ಲಾಸ್ ಸನ್ರೂಫ್, ಮುಂಬದಿಯಲ್ಲಿ ಕಂಫರ್ಟ್ ಸೀಟ್ಸ್, ಬೆಸ್ಪೋಕ್ `ವರ್ನಾಸ್ಕಾ’ ಲೆದರ್ ಅಪ್ಹೋಲ್ಸ್ಟ್ರಿ, ಲಕ್ಷುರಿಯಸ್ ರಿಯರ್ ಸೀಟ್, ಪಾರ್ಕಿಂಗ್ ಅಸಿಸ್ಟ್ ವಿಥ್ ರಿವರ್ಸ್ ಅಸಿಸ್ಟ್, ಆ್ಯಂಬಿಯೆಂಟ್ ಲೈಟಿಂಗ್, BMW ಲೈವ್ ಕಾಕ್ಪಿಟ್ ಪ್ರೊಫೆಷನಲ್ ಮತ್ತು ವೈರ್ಲೆಸ್ ಚಾರ್ಜಿಂಗ್ ಅದರ ಆಕರ್ಷಣೆಗೆ ಸೇರ್ಪಡೆಯಾಗಿವೆ.
BMW 3 ಸೀರೀಸ್ ಗ್ರಾನ್ ಲಿಮೋಸಿನ್ ಎರಡು ಆಕರ್ಷಕ ಡಿಸೈನ್ ಸ್ಕೀಮ್ಸ್ನಲ್ಲಿ ಲಭ್ಯ- ಲಕ್ಷುರಿ ಲೈನ್ ಮತ್ತು ವಿಶೇಷವಾದ ಒಸ್ಪೋರ್ಟ್ `ಫಸ್ರ್ಟ್ ಎಡಿಷನ್’ ಸೀಮಿತ ಬಿಡುಗಡೆಯ ಹಂತದಲ್ಲಿ ಮಾತ್ರ. ಲಕ್ಷುರಿ ಲೈನ್ ಸ್ಟೈಲ್ನಲ್ಲಿ ಚಲನೆ ಮತ್ತು ಸೊಗಸಾಗಿ ಕಾಣುತ್ತದೆ. ಒ ಸ್ಪೋರ್ಟ್ ಫಸ್ರ್ಟ್ ಎಡಿಷನ್ ಅನನ್ಯವಾದ ಡಿಸೈನ್ ಅಂಶಗಳಿಂದ ಪುರುಷತ್ವದ ಗುಣವನ್ನು ನೀಡುತ್ತದೆ. ಒ ಸ್ಪೋರ್ಟ್ `ಫಸ್ರ್ಟ್ ಎಡಿಷನ್’ನ ಹೆಚ್ಚುವರಿ ವಿಶೇಷಗಳಾದ BMW ಹೆಡ್ ಅಪ್ ಡಿಸ್ಪ್ಲೇ, BMW ಗೆಸ್ಚರ್ ಕಂಟ್ರೋಲ್, ಕಂಫರ್ಟ್ ಅಕ್ಸೆಸ್ ಮತ್ತು ಸರೌಂಡ್ ವ್ಯೂ ಕ್ಯಾಮರಾಸ್ 360ಡಿಗ್ರಿ ವ್ಯೂ ಇದ್ದು ಟಾಪ್. ಪನೋರಮ ಮತ್ತು 3ಆ ವ್ಯೂ ಹೊಂದಿವೆ.
3 ಸೀರೀಸ್ BMW ಬ್ರಾಂಡ್ನ ಆತ್ಮವಾಗಿದೆ ಮತ್ತು ವಿಶ್ವದಾದ್ಯಂತ ಕೋಟ್ಯಂತರ ಗ್ರಾಹಕರನ್ನು ಗೆದ್ದಿದೆ. ಅಲ್ಟಿಮೇಟ್ ಸ್ಪೋಟ್ರ್ಸ್ ಸೆಡಾನ್ ಈಗ ಐಷಾರಾಮದಲ್ಲಿ ಹೊಸ ಮಾನದಂಡವನ್ನು BMW 3 ಸೀರೀಸ್ ಗ್ರಾನ್ ಲಿಮೋಸಿನ್ ಮೂಲಕ ಸ್ಥಾಪಿಸುತ್ತಿದೆ. ಅದರ ಉದ್ದವಾದ ವಿನ್ಯಾಸದಿಂದ, ಐಷಾರಾಮದ ಅನುಕೂಲ ಮತ್ತು ಚಲನಶೀಲ ಕಾರ್ಯಕ್ಷಮತೆಯಿಂದ ನ್ಯೂ BMW 3 ಸೀರೀಸ್ ಗ್ರಾನ್ ಲಿಮೋಸಿನ್ ವಿಶಿಷ್ಟ ಮತ್ತು ಸೆಳೆಯುವ ಗುಣಲಕ್ಷಣ ಹೊಂದಿದೆ. ಇದು ಶೀರ್ ಡ್ರೈವಿಂಗ್ ಪ್ಲೆಷರ್ ನೀಡುತ್ತದೆ ಮತ್ತು ಉತ್ಪ್ರೇಕ್ಷೆಯ ಐಷಾರಾಮದಲ್ಲಿ ತಂದಿದ್ದು ಇದನ್ನು ವ್ಯಕ್ತಿಗಳಿಗೆ ಹಾಗೂ ಕುಟುಂಬಕ್ಕೆ ಪರಿಪೂರ್ಣ ಆಯ್ಕೆಯಾಗಿಸಿದೆ. ಗ್ರಾನ್ ಲಿಮೋಸಿನ್ ಈ ವರ್ಗದಲ್ಲಿ ಕ್ರೀಡಾ ಕಾರ್ಯಕ್ಷಮತೆ ಮತ್ತು ಕುಟುಂಬ ಬಳಕೆಗೆ ಉನ್ನತ ಪ್ರಾಯೋಗಿಕತೆ ಬಯಸುವ ಯುವ, ಪ್ರಗತಿಪರ ಭಾರತೀಯರನ್ನು ಆಕರ್ಷಿಸುವ ಆವಿಷ್ಕಾರಕ ಪ್ರಸ್ತಾವನೆಯೊಂದಿಗೆ ರೂಪಿಸಲಾಗಿದೆ ಎಂದರು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದರು.