ಹೊಸ ವರ್ಷಕ್ಕೆ ಟಾಟಾ ಕೊಡುಗೆ, 21 ಸಾವಿರಕ್ಕೆ ಬುಕ್ ಮಾಡಿ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು!

First Published | Jan 5, 2024, 4:20 PM IST

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಇದೀಗ ಹೊಸ ವರ್ಷದಲ್ಲಿ ಟಾಟಾ ಮೋಟಾರ್ಸ್ ಕೈಗೆಟುಕುವ ದರದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ. ಕೇವಲ 21 ಸಾವಿರ ರೂಪಾಯಿ ನೀಡಿ ಹೊಸ ಕಾರು ಬುಕ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಈ ಪೈಕಿ ಟಾಟಾ ಮೋಟಾರ್ಸ್ ವಿವಿದ ಬಗೆಯ ಕಾರುಗಳನ್ನು ಕೈಗೆಟುಕುವ ದರ ಹಾಗೂ ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವ ಮೂಲಕ ಜನರ ವಿಶ್ವಾಸಗಳಿಸಿದೆ. 

ಇದೀಗ ಟಾಟಾ ಮೋಟಾರ್ಸ್ಎಲೆಕ್ಟ್ರಿಕ್ ಕಾರುಗಳ ಸಾಲಿಗೆ ಮತ್ತೊಂದು ಹೊಸ ಕಾರು ಸೇರಿಕೊಂಡಿದೆ. ಟಾಟಾ ಪಂಚ್ ಇದೀಗ ಟಾಟಾ ಪಂಚ್ ಇವಿ ಕಾರಾಗಿ ಬಿಡುಗಡೆಯಾಗಿದೆ.  
 

Tap to resize

ಪ್ಯೂರ್ ಎಲೆಕ್ಟ್ರಿಕ್ ಆರ್ಟಿಟೆಕ್ಟ್ ಆಧಾರಿತ ಹೊಚ್ಚ ಹೊಸ ಟಾಟಾ ಪಂಚ್ ಇವಿ ಕಾರನ್ನು ಬಿಡುಗಡೆ ಮಾಡಲಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿರುವ ಕಾರು.

ಹೊಚ್ಚ ಹೊಸ ಟಾಟಾ ಪಂಚ್ ಇವಿ ಕಾರನ್ನು ಕೇವಲ 21,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬುಹುದು. ಇದು ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು ಎಂದೇ ಜನಪ್ರಿಯವಾಗುತ್ತಿದೆ.
 

ಟಾಟಾ ಪಂಚ್ ಫ್ಯುಯೆಲ್ ಕಾರಿನ ಬೆಲೆ 6 ಲಕ್ಷ ರೂಪಾಯಿ. ಇದೀಗ ಬಿಡುಗಡೆಯಾಗಿರುವ ಟಾಟಾ ಪಂಚ್ ಇವಿ ಕಾರಿನ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆದರೆ 10 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.

ವಿವಿಧ ಬ್ಯಾಟರಿ ಪ್ಯಾಕ್ ಮಾಡೆಲ್ ಕಾರುಗಳು ಇದರಲ್ಲಿ ಲಭ್ಯವಿದೆ.ಹೀಗಾಗಿ ಹೊಚ್ಚ ಹೊಸ ಟಾಟಾ ಪಂಚ್ ಇವಿ ಕಾರು 300 ರಿಂದ 600 ಕಿ.ಮೀ ಮೈಲೇಜ್ ನೀಡಲಿದೆ.

10 ನಿಮಿಷ ಚಾರ್ಚ್ ಮಾಡಿದರೆ 100 ಕಿಲೋಮೀಟರ್ ಮೈಲೇಜ್ ನೀಡಲಿದೆ. ಬೋರ್ಡ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜಿಂಗ್ ಮೂಲಕ ಸುಲಭವಾಗಿ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿದೆ.

ಮತ್ತೊಂದು ವಿಶೇಷ ಅಂದರೆ ಹೊಚ್ಚ ಹೊಸ ಟಾಟಾ ಪಂಚ್ ಇವಿ ಕಾರು ADAS L2+ ತಂತ್ರಜ್ಞಾನ ಹೊಂದಿದೆ. ಇದರಿಂದ ಕಾರು ಮತ್ತಷ್ಟು ಸುರಶಕ್ಷತೆ, ಸುಲಭ ಹಾಗೂ ಆರಾಮದಾಯಕ ಪ್ರಯಾಣ ಒದಗಿಸಲಿದೆ. 

Latest Videos

click me!