ಶ್ರದ್ಧಾ ಕಪೂರ್ To ಆಲಿಯಾ ಭಟ್; ಈ ವರ್ಷ ದುಬಾರಿ ಕಾರು ಖದೀಸಿದಿದ ಬಾಲಿವುಡ್ ನಟಿಯರು!

First Published | Dec 22, 2023, 12:39 PM IST

2023ಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. ಈ ವರ್ಷ ಹಲವು ಸೆಲೆಬ್ರೆಟಿಗಳು ಹೊಸ ಮನೆ, ಹೊಸ ಕಾರು ಖರೀದಿಸಿದ್ದಾರೆ. ಕೆಲವರು ಹೊಸ ಉದ್ಯಮ ಆರಂಭಿಸಿದ್ದಾರೆ. ಈ ಪೈಕಿ ಬಾಲಿವುಡ್ ಖ್ಯಾತ ನಟಿಯರು ಸದ್ದಿಲ್ಲದ ಐಷಾರಾಮಿ ಹಾಗೂ ದುಬಾರಿ ಕಾರು ಖರೀದಿಸಿದ್ದಾರೆ. ಈ ವರ್ಷ ಕೋಟಿ ಕೋಟಿ ರೂಪಾಯಿ ಕಾರು ಖರೀದಿಸಿದ ನಟಿಯರ ಲಿಸ್ಟ್ ಇಲ್ಲಿದೆ.
 

ರಾಕಿ ಔರ್ ರಾಣಿ  ಕೀ ಪ್ರೇಮ್ ಕಹಾನಿ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಆಲಿಯಾ ಭಟ್, ಚಿತ್ರದ ಯಶಸ್ಸಿನ ಬೆನ್ನಲ್ಲೇ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಖರೀದಿಸಿದ್ದಾರೆ.
 

ಅಕ್ಟೋಬರ್ ತಿಂಗಳಲ್ಲಿ ಆಲಿಯಾ ಭಟ್ 3.2 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಖರೀದಿಸುತ್ತಿದ್ದಾರೆ. ಆಲಿಯಾ ಗ್ರೇ ಫಿನೀಶ್ ಕಲರ್ ಕಾರು ಖರೀದಿಸಿದ್ದರೆ, ಕಳೆದ ವರ್ಷ ರಣಬೀರ್ ಕಪೂರ್ ಗ್ರೀನ್ ಶೇಡ್ ಬಣ್ಣದ ಆಟೋಬಯೋಗ್ರಫಿ ಕಾರು ಖರೀದಿಸಿದ್ದರು. 
 

Tap to resize

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ಪಾತ್ರದ ಆಯ್ಕೆಯಲ್ಲಿ ಹೆಚ್ಚು ಗಮನವಹಿಸುತ್ತಾರೆ. ಹೀಗೆ ಕಾರು ಖರೀದಿಯಲ್ಲೂ ಮುತುವರ್ಜಿ ವಹಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಶ್ರದ್ಧಾ ಕಪೂರ್ ಸೂಪರ್ ಕಾರು ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಕಾರು ಖರೀದಿಸಿದ್ದಾರೆ.
 

4.8 ಕೋಟಿ ರೂಪಾಯಿ ಮೌಲ್ಯದ ಈ ಕಾರು 640 ಹೆಚ್‌ಪಿ ಪವರ್ ಹಾಗೂ 565 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಶ್ರದ್ಧಾ ಹಲವು ಐಷರಾಮಿ ಕಾರುಗಳ ಮಾಲೀಕರಾಗಿದ್ದಾರೆ. 

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ಈ ವರ್ಷ ರೇಂಜ್ ರೋವರ್ SUV ಕಾರು ಖರೀದಿಸಿದ್ದಾರೆ. ಗೋಲ್ಡ್ ಎಕ್ಸ್‌ಟೀರಿಯರ್ ಹ್ಯೂ ಸ್ಪೆಷಲ್ ಎಡಿಶನ್ ಕಾರಿನ ಬೆಲೆ 4 ಕೋಟಿ ರೂಪಾಯಿ.

2023ರಲ್ಲಿ ಜಾಕ್ಲಿನ್ ಫರ್ನಾಂಡಿಸ್ ಸಿನಿಮಾಗಿಂತ ವಿವಾದ, ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದ್ದೇ ಹೆಚ್ಚು. ವಂಚಕ ಚಂದ್ರಶೇಖರ್ ಜೈಲು ಸೇರಿದ ಬೆನ್ನಲ್ಲೇ ಜಾಕ್ಲಲಿನ್‌ಗೂ ಸಂಕಷ್ಟ ಎದುರಾಗಿದೆ. ಆದರೆ ಈ ವರ್ಷ ಜಾಕ್ಲಿನ್ ದುಬಾರಿ ಕಾರು ಖರೀದಿಸುವುದರಲ್ಲಿ ಹಿಂದೆ ಬಿದ್ದಿಲ್ಲ.

ಜಾಕ್ಲಿನ್ ಈ ವರ್ಷ BMW i7 ಎಲೆಕ್ಟ್ರಿಕ್ ಸೆಡಾನ್ ಕಾರು ಖರೀದಿಸಿದ್ದಾರೆ.ಈ ಕಾರಿನ ಬೆಲೆ 2 ಕೋಟಿ ರೂಪಾಯಿ. ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಕಾರು ಇವಿ ಕ್ಷೇತ್ರದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ.

ಈ ವರ್ಷ ಸಂಚಲನ ಸೃಷ್ಟಿಸಿದ ನಟಿಯರ ಪೈಕಿ ರಾಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ಈ ವರ್ಷ ರಾಕುಲ್ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLS600 SUV ಕಾರು ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿ.
 

Latest Videos

click me!