ಕೋಟಿ ಕೋಟಿ ರೂ ಕಾರಿನ ನಡುವೆ 7.98 ಲಕ್ಷ ರೂ ಸಣ್ಣ ಕಾರು ಖರೀದಿಸಿದ ಸುನೀಲ್ ಶೆಟ್ಟಿ!

First Published | Dec 25, 2023, 5:41 PM IST

ಬಾಲಿವುಡ್ ನಟ, ಉದ್ಯಮಿ ಸುನಿಲ್ ಶೆಟ್ಟಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಮ್ಯಾರೇಜ್ ಆ್ಯನಿವರ್ಸರಿ ಸಂದರ್ಭದಲ್ಲಿ ಸುನಿಲ್ ಶೆಟ್ಟಿ ಕೋಟಿ ಬೆಲೆಯ ಐಷಾರಾಮಿ ಕಾರು ಬಿಟ್ಟು, ಸಣ್ಣ ಇವಿ ಕಾರು ಖರೀದಿಸಿದ್ದಾರೆ. ಸುನಿಲ್ ಶೆಟ್ಟಿ ಬಳಿ ಇರುವ ಅತ್ಯಂತ ಕಡಿಮೆ ಬೆಲೆಯ ಕಾರು ಇದು. 

ಬಾಲಿವುಡ್‌ನಲ್ಲಿ ಅಣ್ಣಾ ಎಂದೇ ಗುರುತಿಸಿಕೊಂಡಿರುವ ಸುನಿಲ್ ಶೆಟ್ಟಿ ತಮ್ಮ ಫಿಟ್ನೆಸ್, ಉದ್ಯಮ, ಬಾಲಿವುಡ್ ಹೀಗೆ ಸದಾ ಬ್ಯೂಸಿಯಾಗಿದ್ದಾರೆ. ಸುನಿಲ್ ಶೆಟ್ಟಿ ಹಾಗೂ ಮಾನ್ಯ ದಂಪತಿಗೆ ಇಂದು 32ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ.

ಈ ಬಾರಿಯ ವಿವಾಹ ವಾರ್ಷಿಕೋತ್ಸವಕ್ಕೆ ಸುನಿಲ್ ಶೆಟ್ಟಿ 7.98 ಲಕ್ಷ ರೂಪಾಯಿ ಬೆಲೆಯ ಎಂಜಿ ಕೊಮೆಟ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಸುನಿಲ್ ಶೆಟ್ಟಿ ಬಳಿ ಇರುವ ಕಾರುಗಳ ಪೈಕಿ ಕೊಮೆಟ್ ಅತ್ಯಂತ ಕಡಿಮೆ ಬೆಲೆ ಕಾರಾಗಿದೆ.
 

Tap to resize

ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಸುನಿಲ್ ಶೆಟ್ಟಿ, ಇದು ನನ್ನ ಮೊದಲ ಎಲೆಕ್ಟ್ರಿಕ್ ಕಾರು, ಲವ್ ಇಟ್ ಎಂದಿದ್ದಾರೆ. ಈ ಮೂಲಕ ಸುನಿಲ್ ಶೆಟ್ಟಿ ಇದೀಗ ದುಬಾರಿ ಕಾರುಗಳ ಬದಲು ಪರಿಸರ ಪ್ರೇಮಿ ಕಾರು ಬಳಕೆಗೆ ಮುಂದಾಗಿದ್ದಾರೆ.

ಎಂಜಿ ಕೊಮೆಟ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿಲೋಮೀಟರ್ ಮೈಲೇಜ್ ನೀಡಲಿದೆ. 17.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ಮೂಲಕ 7 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

Suniel Shetty

ಸುನಿಲ್ ಶೆಟ್ಟಿ ಬಳಿ ಹಲವು ದುಬಾರಿ ಕಾರುಗಳಿವೆ. ಪ್ರಮುಖವಾಗಿ ಮರ್ಸಿಡಿಸ್ ಬೆಂಜ್ G63 AMG ಕಾರಿನಲ್ಲಿ ಸುನಿಲ್ ಶೆಟ್ಟಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರನ್ನು ಹೆಚ್ಚು ಬಳಸಿದ್ದಾರೆ.
 

ಇದರ ಜೊತೆಗೆ ಲ್ಯಾಂಡ್ ರೋವರ್ ಡಿಫೆಂಡರ್ 110 ಕಾರು ಹೊಂದಿದ್ದಾರೆ. ಇದರ ಡಿಫೆಂಡರ್ 110 ಕಾರಿನ ಟಾಪ್ ಮಾಡೆಲ್ ಬೆಲೆ 2.30 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) 
 

ಇಷ್ಟೇ ಅಲ್ಲ ಮರ್ಸಿಡೀಸ್ ಬೆಂಜ್ GLS 350D ಕಾರು, ಹಮ್ಮರ್ H2 ಹಾಗೂ BMW X5 ಕಾರು ಕೂಡ ಸುನಿಲ್ ಶೆಟ್ಟಿ ಬಳಿ ಇದೆ. ಈ ಸಾಲಿಗೆ ಎಂಜಿ ಮೋಟಾರ್ಸ್‌ನ ಕೊಮೆಟ್ ಸಣ್ಣ ಎಲೆಕ್ಟ್ರಿಕ್ ಕಾರು ಕೂಡ ಸೇರಿದೆ.
 

ಇನ್ನು ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ, ಪುತ್ರನ ಬಳಿಯೂ ದುಬಾರಿ ಕಾರುಗಳಿವೆ. ಇದೀಗ ಅಳಿಯ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಬಳಿಯೂ ದುಬಾರಿ  ಕಾರುಗಳಿವೆ.

Latest Videos

click me!