ದುಬಾರಿ ಪೊರ್ಶೆ 911 GT3 ಕಾರು ಖರೀಸಿದ ನಟ ನಾಗಚೈತನ್ಯ, ಇದರ ಬೆಲೆ ಎಷ್ಟು?

Published : May 21, 2024, 06:11 PM IST

ನಟ ನಾಗ ಚೈತನ್ಯ ದುಬಾರಿ ಕಾರು ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಈ ಬಾರಿ ಸಿಲ್ವರ್ ಕಲರ್ ಪೊರ್ಶೆ 911 GT3 ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ, ನಾಗ ಚೈತನ್ಯ ಬಳಿ ಇರುವ ಇತರ ದುಬಾರಿ ಕಾರುಗಳ ಯಾವುದು?  

PREV
18
ದುಬಾರಿ ಪೊರ್ಶೆ 911 GT3 ಕಾರು ಖರೀಸಿದ ನಟ ನಾಗಚೈತನ್ಯ, ಇದರ ಬೆಲೆ ಎಷ್ಟು?

ನಟ ನಾಗ ಚೈತನ್ಯ ಸಿನಿಮಾ, ವೈಯುಕ್ತಿಕ ಜೀವನಗಳಿಂದ ಭಾರಿ ಸುದ್ದಿಯಾಗಿದ್ದಾರೆ. ಇದರ ಜೊತೆಗೆ ನಾಗ ಚೈತನ್ಯ ಬಳಿ ಇರುವ ಕಾರು ಸಂಗ್ರಹ ವಿಚಾರದಲ್ಲೂ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ದುಬಾರಿ ಕಾರುಗಳ ಸಾಲಿಗೆ ಹೊಸದೊಂದು ಸೇರಿಕೊಂಡಿದೆ.
 

28

ನಾಗ ಚೈತನ್ಯ ದುಬಾರಿ ಪೊರ್ಶೆ 911 GT3 ಸೂಪರ್ ಕಾರು ಖರೀದಿಸಿದ್ದಾರೆ. ಇದರ ಬೆಲೆ 3.51 ಕೋಟಿ ರೂಪಾಯಿ. ಅತ್ಯಂತ ಆಕರ್ಷಕ ಈ ಕಾರು ಕೇವಲ 2 ಸೀಟರ್.
 

38

ಇಬ್ಬರಿಗೆ ಮಾತ್ರ ಪ್ರಯಾಣ ಮಾಡಬಲ್ಲ ದುಬಾರಿ ಪೊರ್ಶೆ ಕುರಿತು ನಾಗ ಚೈತನ್ಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಕಾರು ಖರೀದಿಸಿದ ಸಂಭ್ರಮ ಹಂಚಿಕೊಂಡಿದ್ದಾರೆ.
 

48

ನಾಗ್ ಖರೀದಿಸಿದ ಪೊರ್ಶೆ 3996 cc, 6 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 296 ಕಿ.ಮಿ. ಆದರೆ ಒಂದು ಲೀಟರ್ ಪೆಟ್ರೋಲ್‌ಗೆ ಈ ಕಾರು ಕೇವಲ 7.4 ಕಿ.ಮಿ ಮೈಲೇಜ್ ನೀಡಲಿದೆ.
 

58

7 ಏರ್‌ಬ್ಯಾಗ್ ಸೇರಿದಂತೆ ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ. 518 bhp ಪವರ್ ಹಾಗೂ 465 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದರ ಪರ್ಫಾಮೆನ್ಸ್ ಅದ್ಭುತ.
 

68
Naga Chaitanya

37ರ ಹರೆಯದ ನಟ ನಾಗ ಚೈತನ್ಯ 154 ಕೋಟಿ ರೂ ಅಧಿಕ ಆಸ್ತಿ ಹೊಂದಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಭವ್ಯ ಅರಮನೆಯಂತಿರು ಮಾನ್ಶನ್ ಹೌಸ್ ಹೊಂದಿದ್ದಾರೆ.
 

78
Naga Chaitanya

1.75 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಎಫ್430 ಕಾರಿನ ಮಾಲೀಕರಾಗಿರುವ ನಾಗ ಚೈತನ್ಯ, 3.43 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಅಟೋಬಯೋಗ್ರಫಿ ಕಾರನ್ನು ಹೊಂದಿದ್ದಾರೆ.
 

88

13 ಲಕ್ಷ ರೂಪಾಯಿ ಬೆಲೆಯ BWM ಬೈಕ್, ಇಷ್ಟೇ ಮೊತ್ತದ ಟ್ರೈಯಂಪ ಥ್ರಕ್ಸ್‌ಟನ್ ಆರ್ ಬೈಕ್‌ನಲ್ಲೂ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಇತರ ಕೆಲ ದುಬಾರಿ ವಾಹನಗಳು ಇವೆ.
 

Read more Photos on
click me!

Recommended Stories