ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ, 25 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಹ್ಯಾರಿಯರ್, ಸಫಾರಿ!

First Published | Oct 9, 2023, 4:33 PM IST

ಟಾಟಾ ಮೋಟಾರ್ಸ್ ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಕಾರು ಬಿಡುಗಡೆ ಮಾಡಿದೆ. ಇದೀಗ ಬುಕಿಂಗ್ ಕೂಡ ಆರಂಭಗೊಂಡಿದೆ. ಕೇವಲ 25,000 ರೂಪಾಯಿ ನೀಡಿ ಈ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಹೊಸ ಹ್ಯಾರಿಯರ್ ಹಾಗೂ ಸಫಾರಿ ಕಾರಿನಲ್ಲಿ ಕೆಲ ವಿಶೇಷತೆಗಳಿವೆ.
 

ಟಾಟಾ ಮೋಟಾರ್ಸ್ ಹೊಸ ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ಬುಕಿಂಗ್‌  ಘೋಷಿಸಿದೆ. ಭರ್ಜರಿ ಯಶಸ್ಸಿನಲ್ಲಿರುವ ಟಾಟಾ,  ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರನ್ನು ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಸುರಕ್ಷತಾ ಫೀಚರ್ ಸೇರಿದಂತೆ ಹಲವು ಹೊಸತನಗಳ ಮೂಲಕ ಬಿಡುಗಡೆ ಮಾಡಿದೆ. ಗ್ರಾಹಕರು, ಎಲ್ಲ ಅಧಿಕೃತ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ಗಳಲ್ಲಿ ಅಥವಾ ಕಂಪನಿಯ ವೆಬ್‌ಸೈಟ್‌ನಲ್ಲಿ ಕೇವಲ 25,000 ರೂಗಳನ್ನು ಪಾವತಿಸಿ ನಿಮ್ಮಿಷ್ಟದ ಕಾರು ಬುಕ್ ಮಾಡಿಕೊಳ್ಳಬಹುದು. 

ಅತ್ಯುತ್ತಮ ಕಲ್ಪನೆಯೇ ಸಾಕಾರಗೊಂಡಂತಿರುವ ಹೊಸ ಹ್ಯಾರಿಯರ್ ಮತ್ತು ಸಫಾರಿ, ತಮ್ಮ ವರ್ಗದ ನಿರೀಕ್ಷೆಗಳನ್ನು ಮೀರಿಸುತ್ತವೆ. ತಮ್ಮ ಅದ್ಭುತವಾದ ಪರಂಪರೆಯ ಮುಂದುವರಿಕೆಗಳಾದ ಈ ಕಾರುಗಳು ಪ್ರತಿಯೊಬ್ಬ ಗ್ರಾಹಕನ ಆಶಯಗಳಿಗೆ ಹೊಂದುವಂತೆ ಸಂಪೂರ್ಣವಾಗಿ ಮರು-ವಿನ್ಯಾಸಗೊಂಡಿವೆ.

Tap to resize

ಯುವ ಗ್ರಾಹಕರು ತೀವ್ರವಾಗಿ ಬಯಸುವ ಚೈತನ್ಯಶೀಲತೆ ಮತ್ತು ಸ್ಪೋರ್ಟಿ ವಿನ್ಯಾಸ ಗಳಿರುವ ಈ ಹೊಸ ಹ್ಯಾರಿಯರ್  ನಾಲ್ಕು ವಿಭಿನ್ನ ಮಾದರಿಗಳಲ್ಲಿ ಪರಿಚಯವಾಗುತ್ತಿದೆ - ಸ್ಮಾರ್ಟ್, ಪ್ಯೂರ್, ಅಡ್ವೆಂಚರ್, ಮತ್ತು ಫಿಯರ್ಲೆಸ್. 
 

ವೈಯಕ್ತೀಕರಿಸಿದ ವಿನ್ಯಾಸ, ಉನ್ನತ ಮಟ್ಟದ ವೈಶಿಷ್ಟ್ಯಗಳು, ಸುಧಾರಿತ ತಂತ್ರಜ್ಞಾನ ಮತ್ತು ಅಸಾಧಾರಣ ಸೌಕರ್ಯಗಳ ಈ ಅನನ್ಯ ಮಿಶ್ರಣವಿರುವ ಹೊಸ ಹ್ಯಾರಿಯರ್ ನಿಮ್ಮ ಕನಸುಗಳನ್ನು ಸಾಧಿಸಿ ಅದರಾಚೆಗೂ ಸಾಗುವ ನಿಮ್ಮ ಪಯಣದಲ್ಲಿ ನಿಮ್ಮೊಂದಿಗೆ ನಿರಂತರ ಒಡನಾಡಿಯಾಗಿ ನಿಲ್ಲುತ್ತದೆ.

ಅಷ್ಟೇ ಅಲ್ಲದೆ ಹೊಸ ಹ್ಯಾರಿಯರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, 7 ಏರ್ ಬ್ಯಾಗ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು ಮತ್ತು ಡ್ಯುಯಲ್ ಜೋನ್ ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣಗಳ ಜೊತೆಗೆ ಎಡಿಎಎಸ್ ನಂತಹ – ಅನೇಕ ವರ್ಗಗಳ ಕಾರುಗಳಲ್ಲಿ ಇದೇ ಮೊದಲ ಸಲ - ವೈಶಿಷ್ಟ್ಯಗಳನ್ನು ಹೊಂದಿದೆ.

ಇದಲ್ಲದೆ, ಎಸ್.ಯು.ವಿ., ವರ್ಗವನ್ನು ಇನ್ನೂ ಒಂದು ಮೇಲು-ಹಂತಕ್ಕೆ ಒಯ್ದು ಅತ್ಯುತ್ತಮ ಅತ್ಯಾಧುನಿಕ ಉತ್ಪನ್ನವನ್ನು ತಲುಪಿಸುವ ಬಗ್ಗೆ ಟಾಟಾ ಮೋಟಾರ್ಸ್‌ಗೆ ಇರುವ ಬದ್ಧತೆಯನ್ನು ಹೊಸ ಸಫಾರಿ ಪ್ರತಿಬಿಂಬಿಸುತ್ತದೆ. ಇದರಲ್ಲಿ ಉನ್ನತ ಮಟ್ಟದ ಐಷಾರಾಮಿ ಮತ್ತು ಸೌಕರ್ಯಗಳು ಅದ್ಭುತವಾಗಿ ಮೇಳೈಸಿವೆ.

ಬಯೋ-ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಸನ್ನೆಗಳಿಂದ ನಿಯಂತ್ರಿಸಬಹುದಾದ ಪವರ್ ಟೇಲ್‌ಗೇಟ್, 31.24 ಸೆಂ.ಮೀ. ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 13 ಜೆಬಿಎಲ್ ಮೋಡ್‌ಗಳು ಮತ್ತು  ಆರ್19 ಮಿಶ್ರಲೋಹಗಳೊಂದಿಗೆ ಹರ್ಮನ್ ಅಡ್ವಾನ್ಸ್ಡ್ ಆಡಿಯೊವರ್X ಇರುವ ಹೊಸ ಸಫಾರಿ, ತನ್ನ ಗ್ರಾಹಕರಿಗೆ ಹಲವಾರು ಹೆಚ್ಚಿನ ಅನುಕೂಲಗಳನ್ನು ನೀಡುತ್ತದೆ. 

ಇದೊಂದು ಎಲ್ಲರೂ ಬಯಸುವಂತಹ ಸಂಪೂರ್ಣವಾದ ಉತ್ಪನ್ನ. ಬಹುತೇಕ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಕಂಪನಿಯು ಹೊಸ ಹ್ಯಾರಿಯರ್ ಮತ್ತು ಸಫಾರಿಗಳನ್ನು ತಮ್ಮ ಡಾರ್ಕ್ ರೂಪಗಳಲ್ಲಿ ಸಹ ಪರಿಚಯಿಸಲಿದೆ.

Latest Videos

click me!