ಭಾರತದಲ್ಲಿ ಕೋಟಿ ಕೋಟಿ ರೂ ಕಾರಿಗೆ ದುಬೈನಲ್ಲಿ ಜುಜುಬಿ ಬೆಲೆ, ಇಷ್ಟೊಂದು ವ್ಯತ್ಯಾಸ ಯಾಕೆ?

First Published | Oct 7, 2023, 1:36 PM IST

ರೋಲ್ಸ್ ರಾಯ್ಸ್, ಬೆಂಜ್ ಸೇರಿದಂತೆ ಹಲವು ಐಷಾರಾಮಿಗಳು ಕಾರುಗಳು ಸಂಖ್ಯೆ ಭಾರತದಲ್ಲಿ ತುಸು ಹೆಚ್ಚೇ ಇದೆ. ಆದರೆ ಭಾರತದಲ್ಲಿ ಇದರ ಬೆಲೆ ಕೋಟಿ ಕೋಟಿ ರೂಪಾಯಿ. ಇದೇ ಕಾರಿಗೆ ದುಬೈನಲ್ಲಿ ಲಕ್ಷ ರೂಪಾಯಿಗೆ ಲಭ್ಯವಾಗುತ್ತಿದೆ. ಭಾರತ ಹಾಗೂ ದುಬೈನಲ್ಲಿ ಪ್ರಮುಖ ಕಾರುಗಳಿರುವ ವ್ಯತ್ಯಾಸದ ಸಂಪೂರ್ಣ ವಿವರ ಇಲ್ಲಿದೆ.

ಭಾರತದಲ್ಲಿ ಕಾರುಗಳ ಮಾರಾಟ, ಕಾರು ಬಳಕೆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಚಾರ ದಟ್ಟಣೆಯಿಂದ ನಗರಗಳ ಜೀವನ ದುಸ್ತರವಾಗಿದೆ. ಭಾರತದಲ್ಲಿ ಐಷಾರಾಮಿ ಹಾಗೂ ದುಬಾರಿ ಕಾರುಗಳ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಕೋಟಿ ಕೋಟಿ ರೂಪಾಯಿ ಬೆಲೆಯ ಈ ಕಾರಿಗೆ ದುಬೈನಲ್ಲಿ ಕೇವಲ ಲಕ್ಷ ರೂಪಾಯಿ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿರುವ ತೆರಿಗೆ.
 

ಜೀಪ್ ಗ್ಯಾಂಡ್ ಚೆರೋಕಿ ಟ್ರಾಕ್‌ಹಾಕ್ ಕಾರಿನ ಭಾರತದ ಬೆಲೆ ಸರಿಸುಮಾರು1.3 ಕೋಟಿ ರೂಪಾಯಿ. ಇದೇ ಕಾರು ದುಬೈನಲ್ಲಿ 65 ಲಕ್ಷ ರೂಪಾಯಿಗೆ ಲಭ್ಯವಾಗುತ್ತಿದೆ.

Tap to resize

ಸೆಲೆಬ್ರೆಟಿಗಳು ಹೆಚ್ಚಾಗಿ ಬಳಸುವ ಮರ್ಸಿಡೀಸ್ ಮೇಬ್ಯಾಚ್ GLS600 ಕಾರಿಗೆ ಭಾರತದಲ್ಲಿ ಸರಿಸುಮಾರು 2.9 ಕೋಟಿ ರೂಪಾಯಿ. ಇದೇ ಕಾರಿಗೆ ದುಬೈನಲ್ಲಿ 2.1 ಕೋಟಿ ರೂಪಾಯಿ.

ರೋಲ್ಸ್ ರಾಯ್ಸ್ ಕಾರುಗಳ ಪೈಕಿ ಫ್ಯಾಂಟಮ್  VIII ಅತ್ಯಂತ ದುಬಾರಿ ಕಾರು. ಭಾರತದಲ್ಲಿ ಫ್ಯಾಂಟಮ್ VIII ಕಾರಿನ ಬೆಲೆ 9.8 ಕೋಟಿ ರೂಪಾಯಿ. ಇದೇ ಕಾರಿಗೆ ದುಬೈನಲ್ಲಿ 4.6 ಕೋಟಿ ರೂಪಾಯಿ.
 

ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿಗೆ ಭಾರತದಲ್ಲಿ 1.64 ಕೋಟಿ ರೂಪಾಯಿ. ಈ ಕಾರನ್ನು ದುಬೈನಲ್ಲಿ ಖರೀದಿಸಿದರೆ 1.12 ಕೋಟಿ ರೂಪಾಯಿಗೆ ಲಭ್ಯವಾಗಲಿದೆ.

ಲ್ಯಾಂಬೋರ್ಗಿನಿ ಬಿಡುಗಡೆ ಮಾಡಿರುವ ಕಾರುಗಳ ಪೈಕಿ ಭಾರಿ ಸಂಚಲನ ಸೃಷ್ಟಿಸಿರುವ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಭಾರತದಲ್ಲಿ 3.4 ಕೋಟಿ ರೂಪಾಯಿ. ದುಬೈನಲ್ಲಿ 2.2 ಕೋಟಿ ರೂಪಾಯಿ.
 

ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಭಾರತದಲ್ಲಿ ಹಲವು ಶ್ರೀಮಂತರು, ಉದ್ಯಮಿಗಳು, ಬಾಲಿವುಡ್ ಸೆಲೆಬ್ರೆಟಿಗಳ ಬಳಿ ಇವೆ. ಈ ಕಾರಿಗೆ ಭಾರತದಲ್ಲಿ 7.2 ಕೋಟಿ ರೂಪಾಯಿ, ದುಬೈನಲ್ಲಿ 2.8 ಕೋಟಿ ರೂಪಾಯಿ.

ಪೊರ್ಶೆ 911 ಟರ್ಬೋ ಕಾರು ಭಾರತದಲ್ಲಿ 3.13 ಕೋಟಿ ರೂಪಾಯಿ ಆಗಿದ್ದರೆ, ದುಬೈನಲ್ಲಿ ಇದೇ ಕಾರು ಖರೀದಿಸಿದರೆ 1.52 ಕೋಟಿ ರೂಪಾಯಿಗೆ ಲಭ್ಯವಾಗಲಿದೆ.

ಮರ್ಸಿಡಿಸ್ ಬೆಂಜ್ AMG G63 ಕಾರಿಗೆ ಭಾರತದಲ್ಲಿ 2.7 ಕೋಟಿ ರೂಪಾಯಿ ನೀಡಬೇಕು, ಇದೇ ಕಾರನ್ನು ದುಬೈನಲ್ಲಿ ಖರೀದಿಸಿದರೆ 1.7 ಕೋಟಿ ರೂಪಾಯಿ ಬೆಲೆಗೆ ಲಭ್ಯವಾಗಲಿದೆ.

Latest Videos

click me!