ಸನ್‌ರೈಸರ್ಸ್ ಸಿಇಒ ಕಾವ್ಯಾ ಮಾರನ್ ಬಳಿ ಇವೆ 12 ಕೋಟಿ ರೋಲ್ಸ್ ರಾಯ್ಸ್ ಸೇರಿ 4 ದುಬಾರಿ ಕಾರು!

First Published Apr 29, 2024, 3:35 PM IST

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರತಿ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಒಡತಿ ಕಾವ್ಯಾ ಮಾರನ್ ನ್ಯಾಶನಲ್ ಕ್ರಶ್ ಆಗಿದ್ದಾರೆ. ಬೌಂಡರಿ, ಸಿಕ್ಸರ್, ವಿಕೆಟ್ ಪತನವಾದಾಗ ಕಾವ್ಯ ಪ್ರತಿಕ್ರಿಯೆಗಳು ಭಾರಿ ವೈರಲ್ ಆಗುತ್ತಿದೆ.ಶ್ರೀಮಂತ ಕುಟುಂಬದ ಕುಡಿ ಕಾವ್ಯ ಮಾರನ್ ಕಾರು ಕಲೆಕ್ಷನ್ ಇದೀಗ ಸದ್ದು ಮಾಡುತ್ತಿದೆ. ಕಾವ್ಯ ಬಳಿ 12.2 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಸೇರಿದಂತೆ 4 ದುಬಾರಿ ಯೊರೋಪಿಯನ್ ಕಾರುಗಳಿವೆ.

ಐಪಿಎಲ್ ಟೂರ್ನಿಯ ಸನ್‌ರೈಸರ್ಸ್ ಪಂದ್ಯದಲ್ಲಿ ತಂಡದ ಅದ್ಭುತ ಪ್ರದರ್ಶನದ ಜೊತೆಗೆ ಸಿಇಒ ಕಾವ್ಯಾ ಮಾರನ್ ಕೂಡ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಕಾವ್ಯ ರಿಯಾಕ್ಷನ್, ಕಾವ್ಯಾ ಮಾರನ್ ಧರಿಸಿರುವ ಡ್ರೆಸ್ ಸೇರಿದಂತೆ ಫ್ಯಾಶನ್ ಕೂಡ ಭಾರಿ ಚರ್ಚೆಯಾಗುತ್ತಿದೆ.
 

ಕಾವ್ಯ ಮಾರನ್ ನ್ಯಾಶನಲ್ ಕ್ರಶ್ ಆಗಿ ಬದಲಾಗಿದ್ದಾರೆ. ಕಾವ್ಯಾ ಕುರಿತು ಅಭಿಮಾನಿಗಳು ಗೂಗಲ್, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸರ್ಚ್ ಮಾಡುತ್ತಿದ್ದಾರೆ. ಈ ಪೈಕಿ ಕಾವ್ಯಾ ಮಾರನ್ ಬಳಿ ಇರುವ ದುಬಾರಿ ಕಾರುಗಳ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ.
 

ಕಾವ್ಯಾ ಮಾರನ್ ಬಳಿ ನಾಲ್ಕು ಯೂರೋಪಿಯನ್ ದುಬಾರಿ ಕಾರುಗಳಿವೆ. ಈ ಪೈಕಿ ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB ಕಾರಿನ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 12.2 ಕೋಟಿ ರೂಪಾಯಿ.
 

ಇದರ ಜೊತೆಗೆ ಕಾವ್ಯಾ ಮಾರನ್ ವಿಶ್ವದ ಜನಪ್ರಿಯ ಬ್ರ್ಯಾಂಡ್ ಬೆಂಟ್ಲೆ ಕಂಪನಿಯ ಬೆಂಟೆಯಾಗ್ ಕಾರನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ 6 ಕೋಟಿ ರೂಪಾಯಿ.
 

ಸನ್ ಟಿವಿ ನೆಟ್‌‌ವರ್ಕ್ ಒಡೆಯ ಕಲಾನಿಧಿ ಮಾರನ್ ಪುತ್ರಿ ಕಾವ್ಯ ಮಾರನ್ ಸೂಪರ್ ಕಾರನ್ನು ಕೂಡ ಕಾವ್ಯಾ ಮಾರನ್ ಖರೀದಿಸಿದ್ದಾರೆ. ಫೆರಾರಿ ರೊಮಾ ಸೂಪರ್ ಕಾರಿನ ಬೆಲೆ 3.76 ಕೋಟಿ ರೂಪಾಯಿ. 

ಹೈದರಾಬಾದ್ ತಂಡ ಸಿಇಒ ಆಗಿರುವ ಕಾವ್ಯ ಇದರ ಜೊತೆಗೆ ಇತರ ಕೆಲ ಕಂಪನಿಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕಾವ್ಯ ಬಳಿ BMW i7 ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ. ಇದರ ಬೆಲೆ 2.13 ಕೋಟಿ ರೂಪಾಯಿ.
 

2013ರಲ್ಲಿ ಐಪಿಎಲ್ ಟೂರ್ನಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ಗೆ ಎಂಟ್ರಿಕೊಟ್ಟಿತು. ಇದೀಗ ಈ ತಂಡದ ಸಿಇಒ ಜವಾಬ್ದಾರಿ ನಿರ್ವಹಿಸುತ್ತಿರುವ ಕಾವ್ಯಾ ಮಾರನ್ ಒಟ್ಟು ಆಸ್ತಿ ಬರೋಬ್ಬರಿ 409 ಕೋಟಿ ರೂಪಾಯಿ.  

ಕಾವ್ಯ ಮಾರನ್ ತಂದೆ ಕಲಾನಿಧಿ ಮಾರನ್ ಒಟ್ಟು ಆಸ್ತಿ ಬರೋಬ್ಬರಿ 19,000 ಕೋಟಿ ರೂಪಾಯಿ ಎಂದು ತಮಿಳುನಾಡಿನ IIFL ವರದಿ ನೀಡಿತ್ತು. 

click me!