ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಬೇಡಿಕೆ ಕೊಂಚ ಕಡಿಮೆಯಾಗಿದೆ. ಆದರೆ ಈ ಸ್ಥಾನವನ್ನು ಎಸ್‌ಯುವಿ ಕಾರುಗಳು ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಬಹುತೇಕ ಬ್ರ್ಯಾಂಡ್ ಕಂಪನಿಗಳು ಎಸ್‌ಯುವಿ ಕಾರಿಗೆ ಆದ್ಯತೆ ನೀಡುತ್ತಿದೆ.
ಭಾರತದಲ್ಲಿ ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟದಲ್ಲೂ ದಾಖಲೆ ಬರೆಯುತ್ತಿದೆ. ಆದರೆ 2024ರ ಆರ್ಥಿಕ ವರ್ಷದಲ್ಲಿ ಗರಿಷ್ಠ ಮಾರಾಟದ ದಾಖಲೆ ಮಾರುತಿ ವ್ಯಾಗನ್ಆರ್ ಕಾರು ಪಡೆದುಕೊಂಡಿದೆ.
ಸತತ ಮೂರನೇ ವರ್ಷ ಮಾರುತಿ ವ್ಯಾಗನ್ಆರ್ ಕಾರು ಅತೀ ಹೆಚ್ಚು ಮಾರಾಟವಾದ ದಾಖಲೆ ಪಾತ್ರವಾಗಿದೆ. ಫ್ಯಾಮಿಲಿ ಕಾರು ಎಂದೇ ಗುರುತಿಸಿಕೊಂಡಿರುವ ವ್ಯಾಗನಆರ್ ಭಾರತೀಯರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ.
2024ರ ಆರ್ಥಿಕ ವರ್ಷದಲ್ಲಿ ವ್ಯಾಗನ್ಆರ್ ಕಾರು 200,177 ಯುನಿಟ್ ಮಾರಾಟಗೊಂಡಿದೆ. ಇನ್ನು 2023ರಲ್ಲಿ 212,000 ಕಾರು ಹಾೂ 2022ರಲ್ಲಿ 189,000 ಕಾರುಗಳು ಮಾರಾಟವಾಗಿತ್ತು.
ಮಾರುತಿ ವ್ಯಾಗನ್ಆರ್ ಕಾರಿನ ಆರಂಭಿಕ ಬೆಲೆ 5.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಬೆಲೆ 8.81 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ವ್ಯಾಗನ್ಆರ್ ಮೊದಲ ಸ್ಥಾನದಲ್ಲಿದ್ದರೆ, ಮಾರುತಿ ಬಲೆನೋ ಕಾರು 195,607 ಕಾರು ಮಾರಾಟವಾಗುವ ಮೂಲಕ 2ನೇ ಸ್ಥಾನದಲ್ಲಿದ್ದರೆ, ಟಾಟಾ ನೆಕ್ಸಾನ್ 171,697 ಕಾರುಗಳೊಂದಿಗೆ 3ನೇ ಸ್ಥಾನದಲ್ಲಿದೆ.
2024ರ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಬ್ರೆಜ್ಜಾ ಎಸ್‌ಯುವಿ 169,897 ಕಾರು ಮಾರಾಟಗೊಂಡಿದೆ. ಇನ್ನು 5ನೇ ಸ್ಥಾನದಲ್ಲಿರುವ ಹ್ಯುಂಡೈ ಕ್ರೆಟಾ 161,653 ಕಾರುಗಳು ಮಾರಾಟವಾಗಿದೆ
ಎಸ್‌ಯುವಿ ಕಾರು ಮಾರಾಟದಲ್ಲಿ ಶೇಕಡಾ 50.4% ರಷ್ಟು ಏರಿಕೆಯಾಗಿದೆ. ಆದರೆ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಶೇಕಡಾ 27.8 ರಷ್ಟು ಕುಸಿತ ಕಂಡಿದೆ.