ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳು ರೋಲ್ಸ್ ರಾಯ್ಸ್ ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಇತರರು ಇಷ್ಟಪಟ್ಟರೂ ಈ ದುಬಾರಿ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ.
ರೋಲ್ಸ್ ರಾಯ್ಸ್ ಕಾರನ್ನು ಅತ್ಯಂತ ನಾಜೂಕಾಗಿ, ಸೂಕ್ಷ್ಮವಾಗಿ ತಯಾರಿಸಲಾಗುತ್ತದೆ. ಪ್ರತಿ ಕಾರನ್ನು ಅಷ್ಟೇ ಕಾಳಜಿ, ಆಸಕ್ತಿ, ಜಾಗರೂಕತೆಯಿಂದ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಇದರ ಬೆಲೆ ಕೋಟಿ ಕೋಟಿ ರೂಪಾಯಿ.
ವಿಶ್ವದ ಅತ್ಯಂದ ದುಬಾರಿ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಲ್ಸ್ ರಾಯ್ಸ್ ಕುರಿತು ಕೆಲ ಅಚ್ಚರಿ ಸಂಗತಿಗಳಿವೆ. ರೋಲ್ಸ್ ರಾಯ್ಸ್ ಕಂಪನಿ ಒಂದು ಐಷಾರಾಮಿ ಕಾರು ನಿರ್ಮಾಣದ ವೇಳೆ 8 ಗೂಳಿ ಚರ್ಮ ಬಳಕೆ ಮಾಡುತ್ತಾರೆ.
ರೋಲ್ಸ್ ರಾಯ್ಸ್ ಕಾರಿನ ಆಸನಗಳು, ಕುಶನ್, ಸೀಟು ಅತ್ಯಂತ ಅರಾಮದಾಯಕ. ಈ ಕಾರಿನಲ್ಲಿ ಪ್ರಯಾಣ ಅತ್ಯಂತ ಆಹ್ವಾದಕರ. ಆದರೆ ಈ ಸಾಫ್ಟ್ ಕುಶನ್ ಸೀಟು ಹಾಗೂ ಕಾರಿನ ಇಂಟಿಯರ್‌ನಲ್ಲಿ ಕಂಪನಿ 8 ಗೂಳಿ ಚರ್ಮ ಬಳಕೆ ಮಾಡುತ್ತಾರೆ.
ಒಂದು ಕಾರು ನಿರ್ಮಾಣಕ್ಕೆ 8 ಗೂಳಿಗಳು ಬಲಿಯಾಗುತ್ತದೆ. ರೋಲ್ಸ್ ರಾಯ್ಸ್ ಸೀಟು ಸೇರಿದಂತೆ ಇಂಟಿಯರ್‌ನಲ್ಲಿ ಗೂಳಿಗಳ ಚರ್ಮಗಳನ್ನು ಮಾತ್ರ ಬಳಕೆ ಮಾಡುತ್ತದೆ.
ಆರಂಭದಲ್ಲಿ ಹಸುಗಳ ಚರ್ಮ ಬಳಕೆ ಮಾಡುತ್ತಿತ್ತು. ಆದರೆ ಹಸುಗಳ ಗರ್ಭಾವಸ್ಥೆಯಲ್ಲಿ ಚರ್ಮಗಳು ಹಿಗ್ಗುವುದರಿಂದ ಸ್ಟ್ರೆಚ್ ಮಾರ್ಕ್ ಇರಲಿದೆ ಅನ್ನೋ ಕಾರಣಕ್ಕೆ ಗೂಳಿಗಳ ಚರ್ಮ ಬಳಕೆ ಮಾಡುತ್ತದೆ.
ರೋಲ್ಸ್ ರಾಯ್ಸ್ ಬಳಸುವ ಚರ್ಮ ಕೇವಲ ಯೂರೋಪ್ ಗೂಳಿ ತಳಿಗಳಾಗಿವೆ. ಈ ಗೂಳಿಗಳು ಸೊಳ್ಳೆ ಹಾಗೂ ಇತರ ಕೀಟಗಳ ಕಡಿತದಿಂದ ಮುಕ್ತವಾಗಿರುತ್ತದೆ. ಹೀಗಾಗಿ ಅತ್ಯಂತ ನಾಜೂಕಾಗಿ ಇಂಟಿಯರಿಯರ್ ಕೆಲಸಗಳನ್ನು ಫಿನೀಶ್ ಮಾಡಲು ಸಾಧ್ಯವಾಗುತ್ತದೆ.
ರೋಲ್ಸ್ ರಾಯ್ಸ್ ಕಾರುಗಳು ಸರಿಸುಮಾರು 6.95 ಕೋಟಿ ರೂಪಾಯಿಂದ ಆರಂಭಗೊಳ್ಳುತ್ತದೆ. ಕಲ್ಲಿನಾನ್, ಫ್ಯಾಂಟಮ್ ಕಾರುಗಳು ಅತೀ ದುಬಾರಿ ಕಾರುಗಳಾಗಿವೆ. ಗರಿಷ್ಠ 9.5 ಕೋಟಿ ರೂಪಾಯಿ. ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳಾಗಿವೆ.